ರಾಯಚೂರು : ನವದಾಂಪತ್ಯಕ್ಕೆ ಕಾಲಿಡಬೇಕಿದ್ದ ಮದುಮಗ ಹೃದಯಘಾತದಿಂದ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದಲ್ಲಿ ಈ ಪ್ರಕರಣ ನಿನ್ನೆ ನಡೆದಿದೆ. ಪಂಚಾಯತ್ ರಾಜ್ ಇಲಾಖೆಯಲ್ಲಿ ಎಸ್‌ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಜವಳಗೇರಾ ಗ್ರಾಮದ ಹುಲುಗಪ್ಪ ಬುದ್ದಿನ್ನಿ(36) ಮೃತ ದುರ್ದೈವಿ.
ಸಿಂಧನೂರು ತಾಲೂಕಿನ ಗೋರೆಬಾಳ ಗ್ರಾಮದ ಶ್ರೀ ಶರಣ ಬಸವೇಶ್ವರ ದೇವಾಲಯದಲ್ಲಿ ಇಂದು ಹುಲುಗಪ್ಪ ಬುದ್ದಿನ್ನಿ ವಿವಾಹ ನಿಶ್ಚಯವಾಗಿತ್ತು. ಮದುವೆ ಕಾರ್ಯಕ್ರಮಗಳನ್ನ ನಡೆಸುವ ಮೂಲಕ ಮನೆಯಲ್ಲಿ ಮದುವೆ ಸಂಭ್ರಮ-ಸಡಗರ ಜೋರಾಗಿ ನಡೆದಿತ್ತು. ಆದ್ರೆ, ಹಸೆಮಣೆ ಏರಬೇಕಾದ ಮದುಮಗ ಹೃದಯಘಾತದಿಂದ ಇಹಲೋಕ ತ್ಯಜಿಸಿದ್ದಾನೆ. ಮಗನನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.