ETV Bharat / state

ಶಿಲ್ಪಾ ಮೆಡಿಕೇರ್ ನೂತನ ಆವಿಷ್ಕಾರ.. ದೇಹಕ್ಕೆ ಪೋಷಕಾಂಶ ಒದಗಿಸುತ್ತೆ ಈ ಗ್ರೀನ್ ಟೀ - ಪೋಷಕಾಂಶ ಒದಗಿಸುತ್ತೆ ಗ್ರೀನ್ ಟೀ

ವಿಶ್ವದಲ್ಲಿಯೇ ಫಾರ್ಮ್ ಫೀಲ್ಡ್ ಖ್ಯಾತಿ ಗಳಿಸಿರುವ ಶಿಲ್ಪಾ ಮೆಡಿಕೇರ್ ಕಂಪನಿಯು ಇದೀಗ ಮನುಷ್ಯ ದೇಹಕ್ಕೆ ಪೂರಕವಾಗಿ ಪೋಷಕಾಂಶ ಒದಗಿಸುವ ನೈಸರ್ಗಿಕ ಗ್ರೀನ್ ಟೀಯನ್ನ ಅವಿಷ್ಕರಿಸಿದೆ.

Green Tea Provides Nutrition To Man
ಮನುಷ್ಯ ದೇಹಕ್ಕೆ ಪೋಷಕಾಂಶ ಒದಗಿಸುತ್ತೆ ಈ ಗ್ರೀನ್ ಟೀ
author img

By

Published : Sep 3, 2020, 12:53 PM IST

Updated : Sep 3, 2020, 1:24 PM IST

ರಾಯಚೂರು: ಮಾರುಕಟ್ಟೆಯಲ್ಲಿ ನಾನಾ ಬಗೆಯ ಗ್ರೀನ್ ಟೀ ತಯಾರಿಸುವ ಗ್ರೀನ್ ಟೀ ಡಿಪ್ ಬ್ಯಾಗ್, ಪೌಡರ್ ದೊರೆಯುತ್ತಿವೆ. ಆದ್ರೆ ವಿಶ್ವದಲ್ಲಿಯೇ ಫಾರ್ಮ್ ಫೀಲ್ಡ್ ಖ್ಯಾತಿ ಗಳಿಸಿರುವ ಶಿಲ್ಪಾ ಮೆಡಿಕೇರ್ ಕಂಪನಿ, ಮನುಷ್ಯ ದೇಹಕ್ಕೆ ಪೂರಕವಾಗಿ ಪೋಷಕಾಂಶ ಒದಗಿಸುವ ನೈಸರ್ಗಿಕ ಗ್ರೀನ್ ಟೀ ಅನ್ನ ಅವಿಷ್ಕರಿಸಿ, ದೇಶದಲ್ಲಿ ಮೊದಲ ಬಾರಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಕ್ಯಾನ್ಸರ್ ಔಷಧಿ ತಯಾರಿಕೆಯಲ್ಲಿ ವಿಶ್ವದಲ್ಲಿಯೇ ಖ್ಯಾತಿ ಪಡೆದಿರುವ ಶಿಲ್ಪಾ ಮೆಡಿಕೇರ್ ಕಂಪನಿ ಚಿಕ್ಕ ಗಾತ್ರದಲ್ಲಿ ಗ್ರೀನ್ ಟೀಯನ್ನ ತಯಾರಿಸಿದೆ. ಮಾರುಕಟ್ಟೆಯಲ್ಲಿ ಪ್ರಸ್ತುತವಾಗಿ ಗ್ರೀನ್ ಟೀ ತಯಾರಿಸುವ ಪೌಡರ್ ಸಾಧಕ-ಬಾಧಕವನ್ನ ಅಧ್ಯಯನ ಮಾಡಿ, ನೈಸರ್ಗಿಕವಾಗಿ ದೊರೆಯುವಂತಹ ಗಿಡದ ಎಲೆಗಳಿಂದ ಗ್ರೀನ್ ಟೀ ಯನ್ನ ತಯಾರಿಸಿದೆ. ಇದು 120mg ತೂಕವಿರುತ್ತೆ. ಬಿಸಿ ನೀರಿನಲ್ಲಿ 30 ರಿಂದ 40 ಸೆಕೆಂಡ್​ಗಳ ಕಾಲ ಬೆರೆಸಿ ಚಮಚದಿಂದ ಕೈಯಾಡಿಸಿದ್ರೆ ಸಾಕು, ಗ್ರೀನ್ ಟೀ ಸೇವಿಸಲು ಸಿದ್ಧವಾಗುತ್ತದೆ.

ದೇಹಕ್ಕೆ ಪೋಷಕಾಂಶ ಒದಗಿಸುತ್ತೆ ಈ ಗ್ರೀನ್ ಟೀ..

ಸಾಮಾನ್ಯವಾಗಿ ಹಸಿರು ಬಣ್ಣ ಕಾಣಿಸಿಕೊಂಡರೆ ಸಾಕು, ಅದೇ ಗ್ರೀನ್ ಟೀ ಎಂಬ ಭಾವನೆ ಕೆಲ ಜನರಲ್ಲಿದೆ. ಆದ್ರೆ ಗ್ರೀನ್ ಟೀಯಲ್ಲಿ ಏನಿರಬೇಕು ಎನ್ನುವುದನ್ನ ಅಧ್ಯಯನ ನಡೆಸುವ ಮೂಲಕ ಗ್ರೀನ್ ಟೀ ತಯಾರಿಸಲಾಗಿದೆ. ಶಿಲ್ಪಾ ಮೆಡಿಕೇರ್ ಕಂಪನಿ ತಯಾರಿಸುವ ಗ್ರೀನ್ ಟೀಯಲ್ಲಿ ಮಾನವ ದೇಹದಲ್ಲಿ ಕೊಬ್ಬಿನಾಂಶ ನಿಯಂತ್ರಿಸುವಿಕೆ, ದೇಹದ ಉಷ್ಣಾಂಶವನ್ನ ಹತೋಟಿಯಲ್ಲಿ ಇರಿಸುವುದು, ಕ್ಯಾನ್ಸರ್ ಕಣಗಳನ್ನು ಹತೋಟಿಯಲ್ಲಿ ಇಡುವಂತ ಲವಣಾಂಶವನ್ನ ಹೊಂದಿದೆ. ಅಲ್ಲದೇ ಮನಸ್ಸಿನ ಉತ್ಸಾಹ ಹೆಚ್ಚಿಸುವುದು. ದೇಹಕ್ಕೆ ಆರೋಗ್ಯಕಾರಕ ಪೋಷಕಾಂಶಗಳನ್ನ ಒದಗಿಸುವಂತಹ ನೈಸರ್ಗಿಕ ಗಿಡ ಮೂಲಿಕೆಗಳಿಂದ ಗ್ರೀನ್ ಟೀ ಸಿದ್ಧಪಡಿಸಲಾಗಿದೆ.

ಕ್ಯಾನ್ಸರ್ ಔಷಧಿ ತಯಾರಿಕೆಯಲ್ಲಿ ವಿಶ್ವದಲ್ಲಿ ಹೆಸರು ಮಾಡಿರುವ ಶಿಲ್ಪಾ ಮೆಡಿಕೇರ್ ಕಂಪನಿ ದೇಶದ ಮೊದಲ ಬಾರಿಗೆ ಮಾನವ ದೇಹಕ್ಕೆ ಪೋಷಕಾಂಶಗಳನ್ನ ನೀಡುವಂತಹ ಆರೋಗ್ಯಕ್ಕೆ ಪೂರಕ, ಉತ್ಸವ ಹೆಚ್ಚಿಸುವ ನೈಸರ್ಗಿಕ ಗ್ರೀನ್ ಟೀಯನ್ನ ತಯಾರಿಸುವ ಮೂಲಕ ಟೀ ಮಾರುಕಟ್ಟೆಗೆ ಹೆಜ್ಜೆಯಿಟ್ಟಿದೆ.

Last Updated : Sep 3, 2020, 1:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.