ರಾಯಚೂರು: ದೇಶದಲ್ಲಿನ ಕೆಲವು ದೇಶದ್ರೋಹಿ ಸಂಘಟನೆಗಳು ಮಕ್ಕಳ ಕೈಯಲ್ಲಿ ಇದೆಲ್ಲ ಮಾಡಿಸುತ್ತಿವೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಸಿಂಧನೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೂಲ್ಯ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ಇಂತಹ ದೇಶದ್ರೋಹಿ ಹೇಳಿಕೆ ಹಿಂದೆ ಕೆಲ ಸಂಘಟನೆಗಳು ಶಾಮೀಲಾಗಿವೆ. ಎಲ್ಲೆಲ್ಲಿ ದೇಶದ್ರೋಹ ಹೇಳಿಕೆ ಕೇಳಿ ಬರುತ್ತಿವೆಯೋ ಅಲ್ಲಿನ ಸರ್ಕಾರಗಳು ಕ್ರಮಕೈಗೊಳ್ಳತ್ತಿವೆ. ಕಾಣದ ಸಮಾಜಘಾತುಕ ಶಕ್ತಿಗಳು ಇದರಲ್ಲಿವೆ ಎಂದರು.
ಪ್ರಕರಣ ತನಿಖೆ ಹಂತದಲ್ಲಿರುವುದರಿಂದ ಸಂಘಟನೆ ಬಗ್ಗೆ ಹೆಚ್ಚು ಮಾತನಾಡುವುದು ಬೇಡ. ದೇಶದಲ್ಲಿರುವ 130 ಕೋಟಿ ಜನ ರಾಷ್ಟ್ರ ಪ್ರೇಮ ಬೆಳೆಸಿಕೊಳ್ಳಬೇಕು. ಅಮೂಲ್ಯ ಹೇಳಿಕೆಯನ್ನ ಅವಳ ತಂದೆ, ತಾಯಿಗಳೇ ವಿರೋಧಿಸುತ್ತಿದ್ದಾರೆ. ಮಕ್ಕಳ ಮನಸ್ಸುಗಳಿಗೆ ದೇಶಪ್ರೇಮ ತುಂಬುವ ಕೆಲಸವಾಗಬೇಕಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯಡಿ ಜಿಲೆಯಲ್ಲಿ 25 ವಸತಿ, 18 ಸ್ವಂತಕಟ್ಟಡ ಇವೆ. 50 ಕೋಟಿ ವೆಚ್ವದಲ್ಲಿ ಎರಡು ಕಟ್ಟಡ ಮಂಜೂರು ಮಾಡಲಾಗಿದೆ. ಉಳಿದ 13 ನಿವೇಶನ ಅಂತಿಮ ಹಂತದಲ್ಲಿವೆ. 6 ಮುರಾರ್ಜಿ ದೇಸಾಯಿ ಕಟ್ಟಡ ಪ್ರಗತಿಯಲ್ಲಿವೆ. ಈ ವರ್ಷದಲ್ಲಿ 28 ಸಾವಿರ ಕೊಳವೆ ಬಾವಿಗೆ ಮಂಜೂರಾತಿ ನೀಡಲಾಗಿದೆ. ಭೂ ಒಡೆತನ 240 ಕೋಟಿ ಅನುದಾನದಲ್ಲಿ ಎಸ್ಸಿ/ಎಸ್ಟಿಗೆ ಭೂಮಿ ಖರೀದಿ ಮಾಡಲಾಗುತ್ತಿದೆ. ಇಲಾಖೆಗೆ 1 ಲಕ್ಷ 38 ಸಾವಿರ ಕೋಟಿ ಅನುದಾನವನ್ನ ಕೇಂದ್ರ ನೀಡಿದೆ ಎಂದರು.