ETV Bharat / state

ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಸರ್ಕಾರಿ ಬಸ್: ಕಂಡಕ್ಟರ್​ ಸೇರಿ 15ಕ್ಕೂ ಹೆಚ್ಚು ಜನರಿಗೆ ಗಾಯ

ರಸ್ತೆಯ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ‌ಕಂಡಕ್ಟರ್​ ಸೇರಿದಂತೆ 15ಕ್ಕೂ ಪ್ರಯಾಣಿಕರು ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ಶನಿವಾರ ರಾತ್ರಿ ಜರುಗಿದೆ.

more than 15 people were injured
ರಸ್ತೆಯ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಸರ್ಕಾರಿ ಬಸ್: 15ಕ್ಕೂ ಹೆಚ್ಚು ಜನರಿಗೆ ಗಾಯ
author img

By ETV Bharat Karnataka Team

Published : Sep 23, 2023, 11:04 PM IST

ರಾಯಚೂರು: ರಸ್ತೆಯ ಬದಿಯಲ್ಲಿ ನಿಲುಗಡೆ ಮಾಡಿದ ಲಾರಿಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ‌ಬಸ್ ಕಂಡಕ್ಟರ್​ ಸೇರಿದಂತೆ 15ಕ್ಕೂ ಪ್ರಯಾಣಿಕರು ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮಲ್ಲದಗುಡ್ಡ ಗ್ರಾಮದಲ್ಲಿ ಶನಿವಾರ ನಡೆದಿದೆ.

ಬಸ್ ಸಿಂಧನೂರಿನಿಂದ ಅಂಕಲಿಮಠಕ್ಕೆ ಕಡೆಗೆ ಹೋಗುವಾಗ ಮಾರ್ಗದ ಮಧ್ಯದಲ್ಲಿ ಈ ದುರ್ಘಟನೆ ನಡೆದಿದೆ. ಲಾರಿಯೊಂದು ಪಂಚರ್ ಆಗಿ ರಸ್ತೆ ಪಕ್ಕದಲ್ಲಿ ನಿಂತಿತ್ತು. ಆದರೆ, ರಾತ್ರಿ ವೇಳೆಯಲ್ಲಿ ಲಾರಿ ನಿಲುಗಡೆ ಮಾಡಿರುವುದನ್ನು ಸೂಚಿಸಲು ಇಂಡಿಕೇಟರ್ ಆನ್​ ಮಾಡಿರಲಿಲ್ಲ. ಕತ್ತಲು ಕವಿದಿದ್ದು, ಎದುರುಗಡೆ ಬಂದ ಬೈಕ್ ಅನ್ನು ತಪ್ಪಿಸಲು ಹೋದ ಪರಿಣಾಮ ಬಸ್ ಚಾಲಕನು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ.

15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, 6 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಂಬ್ಯುಲೆನ್ಸ್ ಸಹಾಯದಿಂದ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಹಾಗೂ ಬಳ್ಳಾರಿ, ರಾಯಚೂರು ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಸಿಂಧನೂರು ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇತ್ತೀಚಿನ ಘಟನೆ, ನಿಂತಿದ್ದ ಬೈಕ್​ಗೆ ಗುದ್ದಿದ ಬಸ್​: ರಸ್ತೆ ದಾಟಲೆಂದು ನಿಂತಿದ್ದ ಬೈಕ್​ಗೆ ಖಾಸಗಿ ಬಸ್​ವೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದಿರುವ ಘಟನೆ ಇತ್ತೀಚೆಗೆ ನಡೆದಿದೆ. ರಸ್ತೆ ಅಪಘಾತದಲ್ಲಿ ಇಬ್ಬರು ಗಾಯಗೊಂಡ ಘಟನೆ ಮಂಗಳೂರು ನಗರದ ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್​ನ ಹೊಸಬೆಟ್ಟು ಹತ್ತಿರ ಜರುಗಿದೆ. ಈ ಘಟನೆಯ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿತ್ತು.

ಇತ್ತೀಚೆಗೆ ಬೆಳಗಿನ ಜಾವ 7.55ರ ವೇಳೆಗೆ ಖಾಸಗಿ ಎಕ್ಸ್‌ಪ್ರೆಸ್​ ಬಸ್​ ವೇಗವಾಗಿ ಬಂದು ಬೈಕ್​ಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಬೈಕ್ ಸವಾರ ಪಕ್ಷಿಕೆರೆ ಹೊಸಕಾಡು ನಿವಾಸಿ ಅಬ್ದುಲ್ ಖಾದರ್ ಅರ್ಫಾನ್ ಹಾಗೂ ಹಳೆಯಂಗಡಿ ಇಂದಿರಾ ನಗರದ ನಿವಾಸಿ‌ ಅಮೀರ್ ಸಾಹಿಲ್ ಗಾಯಗೊಂಡಿದ್ದರು. ಅರ್ಫಾನ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಗಾಯಾಳುಗಳನ್ನು ಇಲ್ಲಿನ ಎ.ಜೆ. ಆಸ್ಪತ್ರೆಗೆ ಸೇರಿಸಲಾಗಿತ್ತು. ಬಸ್​ ಚಾಲಕ ಡೆಲ್ಸನ್ ಕ್ಯಾಸ್ಟಲಿನೋ ಎಂಬಾತನ ವಿರುದ್ಧ ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಮಂಗಳೂರು: ನಿಂತಿದ್ದ ಬೈಕ್​ಗೆ ವಿರುದ್ಧ ದಿಕ್ಕಿನಲ್ಲಿ ಬಂದು ಗುದ್ದಿದ ಬಸ್​.. ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.