ರಾಯಚೂರು: ಕೋವಿಡ್ ಸೋಂಕಿತರು ಮತ್ತು ಅವರ ಸಂಬಂಧಿಕರಿಗೆ ಉಪಹಾರ, ಊಟ ವಿತರಿಸುವ ಮೂಲಕ ಉಮೇಶ ಕಾರಜೋಳ ಅಭಿಮಾನಿ ಬಳಗದವರು ಮಾನವೀಯತೆ ಮೆರೆದಿದ್ದಾರೆ.
ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಈ ಬಾರಿ ಅತಿ ಹೆಚ್ಚು ಕೋವಿಡ್ ಪ್ರಕರಣ ವರದಿಯಾಗಿವೆ. ಅದರಲ್ಲೂ ಲಿಂಗಸುಗೂರಲ್ಲಿ ಅತೀ ಹೆಚ್ಚು ಸೋಂಕಿತರ ಸಂಖ್ಯೆ ದಾಖಲಾಗಿದ್ದು ಸಂಕಷ್ಟದಲ್ಲಿರುವ ರೋಗಿಗಳು, ಸಂಬಂಧಿಕರು ಮತ್ತು ಪೊಲೀಸರಿಗೆ ಆಹಾರ ಪೂರೈಕೆ ಮಾಡಲಾಗುತ್ತಿದೆ.
ಭಾರತೀಯ ಜನತಾ ಪಾರ್ಟಿ ಮುಖಂಡ ಉಮೇಶ ಕಾರಜೋಳ ಅಭಿಮಾನಿ ಬಳಗದಿಂದ ಕೆಲ ದಿನಗಳಿಂದ ಉಪಹಾರ, ಊಟ ಹಂಚಿಕೆ ಮಾಡಲಾಗುತ್ತಿದೆ. ನಿತ್ಯ 400 ರಿಂದ 500 ಜನರಿಗೆ ಆಹಾರ ನೀಡುವ ಗುರಿ ಇಟ್ಟುಕೊಂಡಿದ್ದೇವೆ ಎಂದು ಕಾರ್ಯಕರ್ತರು ವಿವರಿಸಿದರು.
ಪುರಸಭೆ ಸದಸ್ಯ ದೊಡ್ಡನಗೌಡ ಹೊಸಮನಿ ಮಾತನಾಡಿ, ಲಾಕ್ಡೌನ್ ಸಂದರ್ಭದಲ್ಲಿ ಕೋವಿಡ್ ಸೋಂಕಿತರು ಮತ್ತು ಅವರ ಸಂಬಂಧಿಕರು ಎದುರಿಸುತ್ತಿರುವ ಸಮಸ್ಯೆ ಮನಗಂಡು ಊಟ, ಉಪಹಾರ ಹಂಚಿಕೆಗೆ ಮುಂದಾಗಿದ್ದೇವೆ. ಕೋವಿಡ್ ಸಂಕಷ್ಟದಲ್ಲಿ ಅಳಿಲು ಸೇವೆ ಸಲ್ಲಿಸುವ ಮಹಾದಾಸೆಯಿಂದ ಈ ಕಾರ್ಯ ನಡೆಸುತ್ತಿದ್ದು ಲಾಕ್ಡೌನ್ ಮುಗಿಯುವವರೆಗೆ ಹಂಚುತ್ತೇವೆ ಎಂದು ಹೇಳಿಕೊಂಡರು.