ETV Bharat / state

ಕೌನ್ ಬನೇಗಾ ಕರೋಡ್​​​ ಪತಿ ಲಕ್ಕಿ ಡ್ರಾ ಹೆಸರಿನಲ್ಲಿ ವಂಚನೆ! - ಲಕ್ಕಿ ಡ್ರಾ ಹೆಸರಿನಲ್ಲಿ ವಂಚನೆ

ಕೌನ್ ಬನೇಗಾ ಕರೋಡ್​​ ಪತಿ ಲಕ್ಕಿ ಡ್ರಾ ಹೆಸರಿನಲ್ಲಿ ಯುವತಿಗೆ 2,69,050 ರೂಪಾಯಿ ವಂಚಿಸಲಾಗಿದೆ. ಮೋಸ ಹೋಗಿರುವುದು ಅರಿತುಕೊಂಡು ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

police
police
author img

By

Published : Oct 6, 2020, 8:51 AM IST

ರಾಯಚೂರು: ಕೌನ್ ಬನೇಗಾ ಕರೋಡ್​​ ಪತಿ ರಿಯಾಲಿಟಿ ಶೋ ಹೆಸರಿನಲ್ಲಿ ರಾಯಚೂರಿನ ಯುವತಿಗೆ ಮೋಸ ಮಾಡಿ, ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ನಗರದ ಆಶ್ರಯ ಕಾಲೋನಿಯಲ್ಲಿ ಮನೆ ಕೆಲಸ ಮಾಡಿಕೊಂಡಿರುವ ನಸೀಮಾ ಮಹೆಬೂಬ್ ಮೋಸ ಹೋದ ಯುವತಿಯಾಗಿದ್ದಾಳೆ.

ಕೌನ್ ಬನೇಗಾ ಕರೋಡ್​ ಪತಿ ಲಕ್ಕಿ ಡ್ರಾ ಹೆಸರಿನಲ್ಲಿ 2,69,050 ರೂಪಾಯಿ ವಂಚಿಸಲಾಗಿದೆ. ಅಪರಚಿತರು ನಸೀಮಾಗೆ ಕರೆ ಮಾಡಿ ವಿಜಯಕುಮಾರ ಎಂದು ಹೆಸರು ಹೇಳಿ ಕೌನ್ ಬನೇಗಾ ಕರೋಡ್​ ಪತಿ ಲಕ್ಕಿ ಡ್ರಾದಲ್ಲಿ ನಿಮ್ಮ‌‌ ಹೆಸರು ಆಯ್ಕೆಯಾಗಿದ್ದು, 25 ಲಕ್ಷ ರೂಪಾಯಿ ಬಹುಮಾನ ಬಂದಿದೆ ಎಂದು ವಾಟ್ಸಪ್ ಸಂದೇಶ ಕಳುಹಿಸಿ ಬಳಿಕ ಕರೆ ಮಾಡಿದ್ದಾರೆ.

ಇದಾದ ಬಳಿಕ 25 ಲಕ್ಷ ರೂಪಾಯಿ ಬಹುಮಾನ ಪಡೆಯಲು 8050 ರೂಪಾಯಿ ಶುಲ್ಕ ಪಾವತಿಸಬೇಕೆಂದು ವಾಟ್ಸಪ್ ಸಂದೇಶ ರವಾನಿಸಿ, ಖಾತೆಯ ಸಂಖ್ಯೆ ನೀಡಿದ್ದಾರೆ.

ಬಹುಮಾನ ಬಂದಿದೆ ಎಂದು ನಂಬಿದ ಯುವತಿ ಹಣ ಪಾವತಿಸಿದ್ದಾರೆ. ಇದಾದ ಬಳಿಕ ಪುನಃ ಬೇರೆ ಬೇರೆ ಶುಲ್ಕದ ಹೆಸರು, ಬೇರ ಖಾತೆಯ ಸಂಖ್ಯೆ ನೀಡಿ ಸೆ. 23ರಿಂದ 29ರವರೆಗೆ 2,69,050 ರೂಪಾಯಿ ಪಾವತಿಸಿದ್ದಾರೆ.

ಹಣ ಪಾವತಿಸಿದ ಬಳಿಕವೂ ಇದುವರೆಗೆ ಯಾವುದೇ ಬಹುಮಾನ ಕಳುಹಿಸಿಲ್ಲ. ಬದಲಾಗಿ ವಾಟ್ಸಪ್‌ ಸಂದೇಶ ಕಳುಹಿಸಿ ಇನ್ನಷ್ಟು ಶುಲ್ಕ ಪಾವತಿಸುವಂತೆ ತಿಳಿಸಿದ್ದಾರೆ.

ಆಗ ಎಚ್ಚೆತ್ತ ಯುವತಿ‌ ಬಹುಮಾನದ ಹೆಸರಿನಲ್ಲಿ ಮೋಸ ಹೋಗಿರುವುದು ಅರಿತುಕೊಂಡು ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಐಪಿಸಿ ಕಲಂ 66(ಸಿ), 66(ಡಿ), ಐಟಿ ಕಾಯ್ದೆ ಮತ್ತು 419, 420ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.