ರಾಯಚೂರು : ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ವಿಶ್ವಾನಂದ ಗುರೂಜಿ ನೇತೃತ್ವದಲ್ಲಿ ವಿದೇಶಿ ಭಕ್ತರು ಭೇಟಿ ನೀಡಿದ್ದರು. ಈ ವೇಳೆ ಮಂಚಾಲಮ್ಮ ಸನ್ನಿಧಿ ಮತ್ತು ರಾಘವೇಂದ್ರ ಸ್ವಾಮಿಗಳ ದರ್ಶನವನ್ನು ವಿದೇಶಿಗರು ಪಡೆದರು.
ಜರ್ಮನಿ, ದಕ್ಷಿಣ ಆಫ್ರಿಕಾ, ರಷ್ಯಾ, ಪೋಲೆಂಡ್ ವಿವಿಧ ದೇಶಗಳಿಂದ ಆಗಮಿಸಿದ್ದ ವಿದೇಶಿಗರು ಭಾರತೀಯ ಉಡುಗೆಯನ್ನು ತೊಟ್ಟು ಕೀರ್ತನೆಗಳನ್ನು ಮತ್ತು ಶ್ರೀಕೃಷ್ಣ ಮಂತ್ರವನ್ನು ಪಠಿಸಿದರು. ಬಳಿಕ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿಯ ದರ್ಶನ ಪಡೆದು ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಸ್ವಾಮೀಜಿಯವರು ಅನುಗ್ರಹ ಸಂದೇಶ ನೀಡಿ, ಈ ಪುಣ್ಯಕ್ಷೇತ್ರದ ಪಾವಿತ್ರ್ಯತೆ, ಶ್ರೀ ಪ್ರಹ್ಲಾದ ರಾಜರು ಮತ್ತು ಶ್ರೀರಾಯರ ಅವತಾರ ಮತ್ತು ರಾಯರ ಪವಾಡಗಳ ಬಗ್ಗೆ ವಿದೇಶಿ ಭಕ್ತರಿಗೆ ವಿವರಿಸಿದರು. ವಿದೇಶಿ ಭಕ್ತರಿಗೆ ಶ್ರೀ ಮಠದ ಪದ್ಧತಿಯಂತೆ ಫಲ ಮಂತ್ರಾಕ್ಷತೆ ಮತ್ತು ಶೇಷ ವಸ್ತ್ರದ ಪ್ರಸಾದವನ್ನು ನೀಡಿ ಆಶೀರ್ವದಿಸಲಾಯಿತು.
ಇದನ್ನೂ ಓದಿ : ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಹುಂಡಿ ಎಣಿಕೆ.. 36ದಿನಗಳಲ್ಲಿ ಹರಿದುಬಂತು ಹಣದ ಹೊಳೆ