ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಯರಗೋಡಿ ಗ್ರಾಮದ ನಡುಗಡ್ಡೆ ಪ್ರದೇಶದ ಕೆಲ ಕುಟುಂಬಗಳು ಪ್ರವಾಹಕ್ಕೆ ಸಿಲುಕಿದ್ದು, ಎನ್‌ಡಿಆರ್‌ಎಫ್ ತಂಡ ಅವರನ್ನು ರಕ್ಷಿಸಿದೆ.
ಕಾರ್ಯಾಚರಣೆಗೆಂದು ತಂಡ ತೆರಳಿದ್ದರೂ ಅಲ್ಲಿನ ಜನರು ತಮ್ಮ ಜಮೀನು, ಜಾನುವಾರುಗಳನ್ನು ಬಿಟ್ಟು ಬರಲು ಹಿಂದೇಟು ಹಾಕಿದ್ದರು. ಬಳಿಕ ಅಧಿಕಾರಿಗಳು ದೂರವಾಣಿ ಕರೆಗಳ ಮೂಲಕ ಮನವೊಲಿಸಿ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ. ಈ ವೇಳೆ ಸ್ಥಳೀಯ ತಾಲೂಕು ಆಡಳಿತವು ನಮಗೆ ಮೂಲ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಲಿಂಗಸೂಗೂರು ಸಹಾಯಕ ಆಯುಕ್ತರು, ಸಿಪಿಐ ಯಶವಂತ ಬಿಸ್ನಳ್ಳಿ, ಪಿಎಸ್ಐ ಪ್ರಕಾಶ್ ಡಂಬಳ ಭಾಗಿಯಾಗಿದ್ದರು.