ETV Bharat / state

ರಾಯಚೂರು: ಸಂಭಾವ್ಯ ಪ್ರವಾಹ ಪರಿಸ್ಥಿತಿ ಎದುರಿಸಲು ಗ್ರಾಮಮಟ್ಟದಲ್ಲಿ ಟಾಸ್ಕ್​ ಫೋರ್ಸ್ ರಚನೆ - ಪ್ರವಾಹ ಸಿದ್ದತಾ ಸಭೆ

ಪ್ರವಾಹ ಪರಿಸ್ಥಿತಿ ಎದುರಾದರೆ ಸಮರ್ಥವಾಗಿ ಎದುರಿಸಲು ರಾಯಚೂರು ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಮಾಡಕೊಂಡಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಪ್ರವಾಹ ಸಿದ್ಧತಾ ಸಭೆಯಲ್ಲಿ ವಿಶೇಷ ಟಾಸ್ಕ್​ ಫೋರ್ಸ್​ ರಚಿಸಲಾಗಿದೆ.

Flood Preparation meeting
ಪ್ರವಾಹ ಪೂರ್ವಭಾವಿ ಸಭೆ
author img

By

Published : Jun 17, 2021, 10:37 AM IST

ರಾಯಚೂರು: ಮಹಾರಾಷ್ಟ್ರದಲ್ಲಿ ಭಾರೀ ಮಳೆ ಹಿನ್ನೆಲೆ ಜಿಲ್ಲೆಯ ಜನರಿಗೆ ಕೃಷ್ಣಾ ನದಿಯಿಂದ ಮತ್ತೊಮ್ಮೆ ಪ್ರವಾಹ ಭೀತಿ ಶುರುವಾಗಿದೆ. ಪ್ರತೀ ಬಾರಿಯೂ ಮಹಾರಾಷ್ಟ್ರದಲ್ಲಿ ಮಳೆಯಾದರೆ ಕೃಷ್ಣಾ ನದಿ ತುಂಬಿ ಹರಿದು ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ.

ಈ ಹಿಂದೆ ಜನರು ಪ್ರವಾಹದಿಂದ ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಇದೀಗ ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ ಶುರುವಾಗಿರುವುದರಿಂದ ಜಿಲ್ಲೆಯ ಜನರಿಗೆ ಪ್ರವಾಹ ಪರಿಸ್ಥಿತಿ ಎದುರಾಗುವ ಸಾಧ್ಯತೆಯಿದೆ. ಪ್ರವಾಹ ಬಂದರೆ ಸಾವು-ನೋವು ತಪ್ಪಿಸಲು ಜಿಲ್ಲಾಡಳಿತ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ನದಿ ತೀರದ ಗ್ರಾಮ ಪಂಚಾಯತ್​ಗಳ ಪಿಡಿಒಗಳು ಮತ್ತು ಜನಪ್ರತಿನಿಧಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ ಕೃಷ್ಣಾ, ತುಂಗಭದ್ರಾ ಹಾಗೂ ಭೀಮಾ ನದಿಗಳಿಂದ ಪ್ರವಾಹ ಉಂಟಾಗುವ 34 ಗ್ರಾಮ ಪಂಚಾಯತ್​ಗಳ 105 ಗ್ರಾಮಗಳನ್ನು ಗುರುತಿಸಿದ್ದಾರೆ.

ಈ ಗ್ರಾಮಗಳಲ್ಲಿನ ಜನ ಹಾಗೂ ಜಾನುವಾರುಗಳ ಜೀವ ರಕ್ಷಿಸಲು, ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ನೆರವು ನೀಡಲು ಗ್ರಾಮ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ನಾಲ್ಕು ಸದಸ್ಯರು ಇರಲಿದ್ದಾರೆ.

ಲಿಂಗಸೂಗೂರು ತಾಲೂಕಿನಲ್ಲಿ ಮ್ಯಾದರಗಡ್ಡೆ, ರಾಯಚೂರು ಗ್ರಾಮಾಂತರ ಪ್ರದೇಶದ ಗುರ್ಜಾಪೂರು, ಅತ್ತೂರು, ಡೊಂಗರಾಂಪೂರು, ಬೂರ್ದಿಪಾಡು, ಕಲವಲದೊಡ್ಡಿ, ಕರವಕುಲ ಗ್ರಾಮಗಳಲ್ಲಿ ಜನರು ತೆಪ್ಪದ ಮೂಲಕ ನದಿ ದಾಟಿ ತಮ್ಮ ಕೆಲಸ ಕಾರ್ಯಗಳಿಗೆ ತೆರಳುತ್ತಾರೆ. ಕೃಷ್ಣಾ ಮತ್ತು ತುಂಗಭದ್ರ ನದಿಗಳಲ್ಲಿ ಒಳಹರಿವು ಹೆಚ್ಚಾದಾಗ ಯಾವುದೇ ಕಾರಣಕ್ಕೂ ಈ ಪ್ರದೇಶಗಳಲ್ಲಿ ಜನರು ನದಿ ದಾಟದಂತೆ ಕಟ್ಟುನಿಟ್ಟಾಗಿ ಸೂಚಿಸಬೇಕು.

ಪ್ರವಾಹಕ್ಕೆ ಒಳಗಾಗುವ ಗ್ರಾಮಗಳ ಜನರು ಹಾಗೂ ನಡುಗಡ್ಡೆಗಳಲ್ಲಿ ವಾಸ ಮಾಡುತ್ತಿರುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಮುನ್ನ ಅಧಿಕಾರಿಗಳು ವಿಶಾಲವಾದ ಸಮುದಾಯ ಭವನ, ಕಲ್ಯಾಣ ಮಂಟಪ ಅಥವಾ ಶಾಲೆಗಳನ್ನು ಗುರುತಿಸಿ, ಜನರು ವಾಸ ಮಾಡುವದಕ್ಕೆ ಯೋಗ್ಯವಾಗಿದೆಯೇ ಎನ್ನುವುದನ್ನು ಭೇಟಿ ನೀಡಿ ಪರಿಶೀಲಿಸಬೇಕು.

ಸಂಭವನೀಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿರುವ ಗರ್ಭಿಣಿಯರು, ಗಂಭೀರ ರೋಗದಿಂದ ಬಳಲುವ ವೃದ್ಧರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವುದರೊಂದಿಗೆ, ಅವರಿಗೆ ಬೇಕಾದ ಔಷಧೋಪಚಾರ ಕಲ್ಪಿಸಿಕೊಡಬೇಕು. ಅಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು. ಈ ಕೇಂದ್ರಗಳಲ್ಲಿ ಎರಡು ತಿಂಗಳಿಗಾಗುವಷ್ಟು ಆಹಾರ ಧಾನ್ಯಗಳ ಸಂಗ್ರಹವಿರಬೇಕು. ಸಂತ್ರಸ್ತರನ್ನು ಸುರಕ್ಷಿತ ಪ್ರದೇಶಗಳಿಗೆ ಕರೆದೊಯ್ಯಲು ಬಸ್​ಗಳ ವ್ಯವಸ್ಥೆ ಮಾಡಿಕೊಳ್ಳಬೇಕು.

ಗಂಟೆಗೊಮ್ಮೆ ಮಾಹಿತಿ :

ಪ್ರವಾಹ ಎದುರಾಗುವ 105 ಗ್ರಾಮಗಳು ಹಾಗೂ 34 ಗ್ರಾಮ ಪಂಚಾಯತ್​ಗಳ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರಿಗೆ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದಿಂದ ಪ್ರತಿ ಗಂಟೆಗೊಮ್ಮೆ ನೀರು ಹರಿಸುವ ಮಾಹಿತಿ ನೀಡಲಾಗುತ್ತದೆ. ಸಮಿತಿಯ ಸದಸ್ಯರು ಆಯಾ ಗ್ರಾಮಗಳಲ್ಲಿ ಡಂಗೂರ ಸಾರುವ ಮೂಲಕ ಸ್ಥಳೀಯರಿಗೆ ಎಚ್ಚರಿಕೆ ನೀಡಬೇಕು.

ಅಧಿಕಾರಿಗಳಿಗೆ ವಾಕಿಟಾಕಿ:

ಜಿಲ್ಲೆಗೆ ಎನ್​​ಡಿಆರ್​ಎಫ್​ ತಂಡದ 22 ಸದಸ್ಯರು ಆಗಮಿಸಿದ್ದು, ಪ್ರವಾಹ ಬಂದರೆ ಯಾವುದೇ ರೀತಿಯ ಹಾನಿಯಾಗದಂತೆ ಅಗತ್ಯ ಪೂರ್ವ ತಾಲೀಮು ನಡೆಸಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮಳೆ ಹಾಗೂ ಪ್ರವಾಹದ ವೇಳೆ ಮೊಬೈಲ್ ನೆಟ್​ವರ್ಕ್​ ಸಮಸ್ಯೆ ಇರುವ ಸ್ಥಳಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ವಾಕಿಟಾಕಿ ನೀಡುವ ವ್ಯವಸ್ಥೆ ಮಾಡಲಾಗಿದೆ.

ಓದಿ : ಕೊಡಗಿನಲ್ಲಿ‌ ವರುಣನ ಅಬ್ಬರ: ಧಾರಾಕಾರ ಮಳೆಗೆ ಧರೆಗುರುಳಿದ ಮನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.