ರಾಯಚೂರು: ಡೆತ್ನೋಟ್ ಬರೆದಿಟ್ಟು ಯುವಕ ನಾಪತ್ತೆಯಾಗಿರುವ ಘಟನೆ ಸಂಬಂಧ ಮಹಿಳಾ ಪಿಎಸ್ಐ ವಿರುದ್ಧ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಸಿರವಾರ ಪೊಲೀಸ್ ಠಾಣೆ ಪಿಎಸ್ಐ ಗೀತಾಂಜಲಿ ಶಿಂಧೆ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ಸಿರವಾರ ಠಾಣೆ ಪಿಎಸ್ಐ ಗೀತಾಂಜಲಿ ಶಿಂಧೆ ವಿನಾಃಕಾರಣ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಿರವಾರ ಪಟ್ಟಣದ ತಾಯಣ್ಣ ನೀಲೋಗಲ್ ಎಂಬಾತ ಡೆತ್ನೋಟ್ ಬರೆದಿಟ್ಟು ಕಾಣೆಯಾಗಿದ್ದಾನೆ. ಕಳೆದ ಎರಡ್ಮೂರು ತಿಂಗಳಿನಿಂದ ತನ್ನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಕಿರುಕುಳ ನೀಡಲಾಗಿದೆ ಎಂದು ಕಾಣೆಯಾದ ಯುವಕ ಆರೋಪಿಸಿದ್ದ ಎಂದು ತಿಳಿದುಬಂದಿದೆ.
ಸಂಬಂಧಿಕರ ಹೊಲದಲ್ಲಿ ಭತ್ತ ಕಟಾವು ಮಾಡಿದ ಆರೋಪ ವಿಚಾರಕ್ಕೆ ತಾಯಣ್ಣ ಮೇಲೆ ದೂರು ನೀಡಲಾಗಿತ್ತು. ಈ ಸಂಬಂಧ ಡಿಸೆಂಬರ್ 2ರಂದು ಸಿರವಾರ ಠಾಣೆ ಪೊಲೀಸರು ಠಾಣೆಗೆ ಕರೆಸಿಕೊಂಡಿದ್ದು, ವಿಚಾರಣೆ ನಡೆಸದೆ ಏಕಾಏಕಿ ಹಲವು ಗಂಟೆಗಳ ಕಾಲ ಲಾಕಪ್ನಲ್ಲೇ ಕೂರಿಸಿದ್ದಾರೆ. ಇದರಿಂದ ಮನನೊಂದು ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾನೆ.
ಇದರ ಸಂಬಂಧ ತಾಯಣ್ಣನ ಸಹೋದರ ಬಸವಲಿಂಗ ಅವರು ಲಿಖಿತ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಸಿರವಾರ ಪೊಲೀಸ್ ಠಾಣೆಯಲ್ಲಿ ಮಹಿಳಾ ಪಿಎಸ್ಐ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಖಾಕಿ ದರ್ಪಕ್ಕೆ ಕಾಲು ಕಳೆದುಕೊಂಡ ತರಕಾರಿ ಮಾರುವ ಯುವಕ