ETV Bharat / state

ಕೊನೆಗೂ ರಾಯಚೂರು ಜಿಲ್ಲೆಗೆ ಬಂದ್ರು ಉಸ್ತುವಾರಿ ಸಚಿವ! - raychuru district in charge minister Ramulu

ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡು ಹಲವು ದಿನಗಳೇ ಕಳೆದಿದ್ದರೂ ಜಿಲ್ಲೆಗೆ ಮಾತ್ರ ಸಚಿವರು ಭೇಟಿ ನೀಡಿರಲಿಲ್ಲ. ಕೊನೆಗೂ ಜಿಲ್ಲೆಗೆ ಆಗಮಿಸುವ ಸಮಯ ಕೂಡಿ ಬಂದಿದ್ದು, ಸೋಮವಾರ ಸಂಜೆ ಸಚಿವ ಶ್ರೀರಾಮುಲು ಜಿಲ್ಲೆಗೆ ಆಗಮಿಸಿದ್ದಾರೆ.

ರಾಯಚೂರಿಗೆ ಆಗಮಿಸಿದ ಸಚಿವ ಶ್ರೀರಾಮುಲು
author img

By

Published : Oct 15, 2019, 10:05 AM IST

ರಾಯಚೂರು: ಜಿಲ್ಲಾ ಉಸ್ತುವರಿಯಾಗಿರುವ ಸಚಿವ ಬಿ.ಶ್ರೀರಾಮುಲು ಹಲವು ದಿನಗಳ ನಂತರ ಜಿಲ್ಲೆಗೆ ಭೇಟಿ ನೀಡಿದ್ದಾರೆ.

ಸೋಮವಾರ ಸಂಜೆ ಆಗಮಿಸಿದ ಅವರು, ನಗರದ ಜಿಲ್ಲಾಧಿಕಾರಿ ಮನೆಯ ಬಳಿ ಇರುವ ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮಿಸುವ ಮೂಲಕ ಜಿಲ್ಲೆ ಪ್ರವೇಶಿಸಿದರು. ಪುತ್ಥಳಿಗೆ ಮಾಲಾರ್ಪಣೆ ಮಾಡುವ ವೇಳೆ ದಿಢೀರ್ ವಿದ್ಯುತ್ ಕಡಿತಗೊಂಡಿದ್ದು, ಕೊಂಚ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಕಾರ್ಯಕರ್ತರು ಹಾಗೂ ಮುಖಂಡರ ಮೊಬೈಲ್ ಟಾರ್ಚ್ ಸಹಾಯದಿಂದ ಸಚಿವರು ಮಾಲಾರ್ಪಣೆ ಮಾಡಿದರು.

ರಾಯಚೂರಿಗೆ ಆಗಮಿಸಿದ ಸಚಿವ ಶ್ರೀರಾಮುಲು

ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡು ಹಲವು ದಿನ ಕಳೆದಿದ್ದರೂ ಸಚಿವರು ಜಿಲ್ಲೆಗೆ ಭೇಟಿ ನೀಡುವುದಾಗಲಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿರುವುದಾಗಲಿ ಮಾಡಿರಲಿಲ್ಲ. ಮಂಗಳವಾರ ಅಧಿಕಾರಿಗಳ ಜೊತೆ ಕೆಡಿಪಿ ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Intro:¬ಸ್ಲಗ್: ಅಂತೂ ಇಂತೂ ಜಿಲ್ಲಾ ಉಸ್ತುವರಿ ಸಚಿವರು ಬಂದ್ರೂ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 14-1೦-2019
ಸ್ಥಳ: ರಾಯಚೂರು
ಆಂಕರ್: ರಾಯಚೂರು ಜಿಲ್ಲಾ ಉಸ್ತುವರಿ ಸಚಿವ ಬಿ.ಶ್ರೀರಾಮುಲು ರಾಯಚೂರು ಜಿಲ್ಲೆಗೆ ಕಡೆಗೂ ಭೇಟಿ ನೀಡಿದ್ದಾರೆ. Body:ಸಂಜೆ 7 ಗಂಟೆಯ ಸುಮಾರಿಗೆ ಆಗಮಿಸಿದ ಅವರು, ನಗರದ ಜಿಲ್ಲಾಧಿಕಾರಿ ಮನೆಯ ಬಳಿ ಇರುವ ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಹಾಕಿ ನಮಿಸುವ ಜಿಲ್ಲೆಗೆ ಪ್ರವೇಶ ಮಾಡಿದ್ರು. ಪುತ್ಥಳಿಗೆ ಸಚಿವರು ಮಾಲಾರ್ಪಣೆ ಮಾಡುವ ವೇಳೆ ದಿಢೀರ್ ವಿದ್ಯುತ್ ಕಡಿತಗೊಂಡಿದ್ದು, ಆಗ ಕಾರ್ಯಕರ್ತರು ಹಾಗೂ ಮುಖಂಡರ ಮೊಬೈಲ್ ಟಾರ್ಚ್ ಬೆಳಕ ಸಹಾಯದಿಂದ ಮಾಲಾರ್ಪಣೆ ಮಾಡಿದ್ರು. ದಿಢೀರ್ ವಿದ್ಯುತ್ ಕಡಿತದಿಂದ ಕೆಲ ಮುಖಂಡರು ಪೇಚೆಗೆ ಸಿಲುಕಿದ್ರು. ಅಲ್ಲದೇ ಭದ್ರತೆ ದೃಷ್ಠಿಯಿಂದಾಗಿ ಪೊಲೀಸ್ ರು ಕೆಲ ನಿಮಿಷ ಗೊಂದಲ ಉಂಟಾಯಿತು. ಮೊಬೈಲ್ ಟಾರ್ಚ್ ಸಹಾಯದಿಂದಾಗಿ ಗೊಂದಲದಿಂದ ಪಾರು ಅದರು. ಸಚಿವರ ತೆರಳಿದ ಬಳಿಕ ಪುನಃ ವಿದ್ಯುತ್ ಯಥಾಸ್ಥಿತಿ ಮುಂದುವರೆಯಿತು. Conclusion:ಇನ್ನೂ ಸರಕಾರ ಜಿಲ್ಲಾ ಉಸ್ತುವರಿ ಸಚಿವರು ನೇಮಕಗೊಳಿಸಿದ ಬಳಿಕ ಹಲವು ದಿನಗಳ ಕಳೆದರೂ ಸಚಿವರು ಜಿಲ್ಲೆಗೆ ಭೇಟಿ ನೀಡುವುದಾಗಲಿ, ಅಧಿಕಾರಿಗಳೊಂದಿಗೆ ಸಭೆ ಮಾಡಿರಲಿಲ್ಲ. ಆದ್ರೆ ಬಹಳ ದಿನಗಳ ಕಾಲ ಬಳಿಕ ಜಿಲ್ಲೆಗೆ ಭೇಟಿ ನೀಡಿದ್ದೂ, ನಾಳೆ ಅಧಿಕಾರಗಳೊಂದಿಗೆ ಕೆಡಿಪಿ ಸಭೆ ನಡೆಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.