ETV Bharat / state

ನೂತನ ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ಅವರಿಗೆ ಲಿಂಗಸುಗೂರಿನಲ್ಲಿ ಸನ್ಮಾನ - felicitate to ashoka gasti

ನೂತನ ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ಅವರ ತವರಾದ ರಾಯಚೂರು ಜಿಲ್ಲೆ ಲಿಂಗಸುಗೂರಲ್ಲಿ ಬಿಜೆಪಿ, ಗೆಳೆಯರ ಬಳಗ, ವಿವಿಧ ಸಮಾಜ, ಸಂಘ ಸಂಸ್ಥೆಗಳಿಂದ ನೂತನ ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ಅವರಿಗೆ ತವರು ಸನ್ಮಾನ ಮಾಡಲಾಯ್ತು.

felicitate to  ashoka gasti
ಅಶೋಕ ಗಸ್ತಿ ಅವರಿಗೆ ಲಿಂಗಸುಗೂರಿನಲ್ಲಿ ಸನ್ಮಾನ
author img

By

Published : Aug 30, 2020, 10:36 PM IST

ಲಿಂಗಸುಗೂರು: ರಾಯಚೂರು ಜಿಲ್ಲೆ ಲಿಂಗಸುಗೂರಲ್ಲಿ ಬಿಜೆಪಿ, ಗೆಳೆಯರ ಬಳಗ, ವಿವಿಧ ಸಮಾಜ, ಸಂಘ ಸಂಸ್ಥೆಗಳಿಂದ ನೂತನ ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ಅವರಿಗೆ ತವರು ಸನ್ಮಾನ ಸಲ್ಲಿಸಲಾಯಿತು.

ಅಶೋಕ ಗಸ್ತಿ ಅವರಿಗೆ ಲಿಂಗಸುಗೂರಿನಲ್ಲಿ ಸನ್ಮಾನ

ಮೂಲತಃ ಲಿಂಗಸುಗೂರು ಪಟ್ಟಣದವರಾದ ಗಸ್ತಿ ಅವರು ಪ್ರಾಥಮಿಕದಿಂದ ಪದವಿ ಶಿಕ್ಷಣವನ್ನು ಲಿಂಗಸುಗೂರಲ್ಲಿ ಪಡೆದಿದ್ದಾರೆ. ಕಾನೂನು ಪದವಿ ನಂತರ ರಾಯಚೂರಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ. ಎಬಿವಿಪಿ, ಆರ್.ಎಸ್.ಎಸ್, ಬಿಜೆಪಿ ಬೆಂಬಲಿತ ಸಂಘಟನೆಗಳಲ್ಲಿ ಕೆಲಸ ಮಾಡಿದ ಅವರನ್ನು ಪ್ರಧಾನಿ ನರೇಂದ್ರ ಮೋದಿ ಗುರುತಿಸಿ ರಾಜ್ಯಸಭಾ ಸದಸ್ಯರೆಂದು ನೇಮಕ ಮಾಡಿದ್ದು ತವರಲ್ಲಿ ಹರ್ಷ ಮೂಡಿಸಿದೆ.

ಇದೇ ವೇಳೆ ಮಾಜಿ ಶಾಸಕ ಮಾನಪ್ಪ ವಜ್ಜಲ, ಪ್ರೊ ಜಿ.ವಿ ಕೆಂಚನಗುಡ್ಡ, ನಿವೃತ್ತ ಪ್ರಾಚಾರ್ಯ ಜಿ.ಆರ್​​. ಕೋಟೆ ಮಾತನಾಡಿ ಪ್ರಾಮಾಣಿಕತೆ, ಸಮಯಪ್ರಜ್ಞೆ, ನಿಷ್ಠುರತೆ ಓರ್ವ ವ್ಯಕ್ತಿಯನ್ನು ಉನ್ನತ ಮಟ್ಟಕ್ಕೆ ತಲುಪಿಸುತ್ತದೆ ಎಂಬುದಕ್ಕೆ ಅಶೋಕ ಗಸ್ತಿ ನಿದರ್ಶನವಾಗಿದ್ದಾರೆ ಎಂದು ಶುಭ ಹಾರೈಸಿದರು. ಸಂತೆಕೆಲ್ಲೂರಿನ ಗುರುಬಸವ ಸ್ವಾಮೀಜಿ, ಯರಡೋಣಿ ಸಿದ್ಧರಾಮೇಶ್ವರ ಶರಣರು ಸಾನಿಧ್ಯ ವಹಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.