ETV Bharat / state

ರಾಯಚೂರಿನಲ್ಲಿ ಬೈಕ್​ ಮೇಲೆ ಹರಿದ ಬಸ್​​: ತಂದೆ-ಮಗ ದಾರುಣ ಸಾವು - ಬೈಕ್​ ಅಪಘಾತದಲ್ಲಿ ತಂದೆ ಮಗ ಸಾವು

ಬೈಕ್​ ಮೇಲೆ ಬಸ್​ ಹರಿದು ಹೋದ ಪರಿಣಾಮ ತಂದೆ ಮಗ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಯಚೂರಿನಲ್ಲಿ ನಡೆದಿದೆ.

father and son dies in a bike accident
ಸ್ಥಳದಲ್ಲೇ ತಂದೆ-ಮಗ ಸಾವು
author img

By

Published : Nov 23, 2021, 4:45 PM IST

ರಾಯಚೂರು:ಸಾರಿಗೆ ಬಸ್ ಬೈಕ್​ ಮೇಲೆ ಹರಿದಿದ್ದು ಬೈಕ್​ನಲ್ಲಿದ್ದ ತಂದೆ-ಮಗ ದಾರುಣವಾಗಿ ಸಾವನ್ನಪ್ಪಿದ ಘಟನೆ ರಾಯಚೂರಿನ ಕಲಮಲ ಗ್ರಾಮದ ಬಳಿ ನಡೆದಿದೆ.

ಮೃತರನ್ನು ಅತ್ತನೂರು ಗ್ರಾಮದ ನಿಜಾನಂದಾ ಮಲ್ಲಪ್ಪ ಹಾಗೂಇವರ ಮಗ ನಿಜಾನಂದ ಎಂದು ಗುರುತಿಸಲಾಗಿದೆ. ಬೈಕ್​ನಲ್ಲಿ ತಂದೆ- ಮಗ ಇಬ್ಬರೂ ರಾಯಚೂರು ಕಡೆಯಿಂದ ತಮ್ಮ ಸ್ವಗ್ರಾಮ ಮಾನವಿ ತಾಲೂಕಿನ ಅತ್ತನೂರುಕ್ಕೆ ತೆರಳುತ್ತಿದ್ದರು. ಈ ವೇಳೆ ಲಿಂಗಸೂಗೂರು ಕಡೆಯಿಂದ ಬರುತ್ತಿದ್ದ ಬಸ್ ಬೈಕ್ ಮೇಲೆ ಹರಿದ ಪರಿಣಾಮ ತಂದೆ-ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

father and son dies in a bike accident
ಸ್ಥಳದಲ್ಲೇ ತಂದೆ-ಮಗ ಸಾವು

ಘಟನಾ‌ ಸ್ಥಳಕ್ಕೆ ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ:ಭೀಕರ ರಸ್ತೆ ಅಪಘಾತ: ಮೂವರು ವಿದ್ಯಾರ್ಥಿಗಳು ಸೇರಿ ನಾಲ್ವರು ಸಾವು, 6 ಮಂದಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.