ರಾಯಚೂರು: ನಗರದ ಹೊರವಲಯದ ವೈಟಿಪಿಎಸ್ನ 380 ಕಾರ್ಮಿಕರ ಮರು ನೇಮಕಕ್ಕೆ ಅಗ್ರಹಿಸಿ ಇಂದಿನಿಂದ ಟಿಯುಸಿಐ ಸಂಯೋಜಿತ ಯರಮರಸ್ ಥರ್ಮಲ್ ಪವರ್ ಸ್ಟೇಷನ್ ಕಾರ್ಮಿಕರ ಸಂಘದಿಂದ ಉಪವಾಸ ಸತ್ಯಗ್ರಹ ಆರಂಭಿಸಲಾಗಿದೆ.
ಕಳೆದ 7 ದಿನಗಳಿಂದ ಧರಣಿ ನಡೆಸಿದರೂ ಸ್ಪಂದನೆ ದೊರೆಯದ ಕಾರಣ ಸರದಿಯಂತೆ 24 ತಾಸು ಉಪವಾಸ ಅರಂಬಿಸಿದ್ದಾರೆ. ಇದರ ಪ್ರಕಾರ ಇಂದು ಅಮರೇಶ, ದಯಾನಂದ, ಬಾಲಪ್ಪ, ಲಕ್ಷ್ಮಣ ಸೇರಿದಂತೆ ಇತರೆ 50 ಕಾರ್ಮಿಕರು ಉಪವಾಸ ಸತ್ಯಗ್ರಹ ನಡೆಸಿದರು.
ವೈಟಿಪಿಎಸ್ನಲ್ಲಿ ಕಳೆದ 2-3 ವರ್ಷಗಳಿಂದ ಸತತವಾಗಿ ದುಡಿಯುತಿದ್ದರೂ ಯಾವುದೇ ಮುನ್ಸೂಚನೆ ನೀಡದಿರುವುದು ಖಂಡನಾರ್ಹ. ನೂತನ ಪವರ್ ಮೆಕ್ ಕಂಪನಿ ಹಳೆಯ ಕಾರ್ಮಿಕನ್ನು ವಂಚಿತಗೊಳಿಸುತ್ತಿದ್ದು, ಕಾರ್ಮಿಕರ ಜೀವನ ಸಂಕಷ್ಟದಲ್ಲಿದೆ. ಆದ್ದರಿಂದ ಇಂತಹ ಕಂಪನಿ ನಮಗೆ ಬೇಡ. ಸರಿಯಾದ ವೇತನ ಪಾವತಿ ಹಾಗೂ ಉದ್ಯೋಗ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.