ETV Bharat / state

ಆರೋಗ್ಯ, ಆಯುಷ್ಯಕ್ಕಾಗಿ ರೈತರೇ ಸಿದ್ಧಪಡಿಸುತ್ತಿದ್ದಾರೆ ಬ್ಯ್ರಾಂಡ್ ಅಡುಗೆ ಎಣ್ಣೆ..

ಅಡುಗೆ ಎಣ್ಣೆ ತಯಾರಿಸಲು ರೈತರಿಂದ ಕಚ್ಚಾ ವಸ್ತುಗಳ ಖರೀದಿ ಒಂದು ಕಡೆಯಾದರೆ ಕಂಪನಿಯ ರೈತರು ನೇರವಾಗಿ ಬಂದು ತಮ್ಮ ಮಿಲ್​ನಲ್ಲಿ ತಾವು ಬೆಳೆದ ಎಣ್ಣೆ ಕಾಳುಗಳಿಂದ ಎಣ್ಣೆಯನ್ನು ಹಾಕಿಸಿಕೊಂಡು ಹೋಗುವ ಸವಲತ್ತು ನೀಡಲಾಗಿದೆ..

Sindhanur
ಗಾಣದ ಎಣ್ಣೆ ತಯಾರಿ
author img

By

Published : Feb 1, 2021, 8:13 PM IST

ರಾಯಚೂರು : ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ರೈತರೇ ಸೇರಿಕೊಂಡು ಪ್ರಾರಂಭಿಸಿರುವ ಕಂಪನಿಯೊಂದು ಗಾಣವನ್ನು ಬಳಸಿ ಅಡುಗೆ ಎಣ್ಣೆ ತಯಾರಿಸುವ ಮೂಲಕ ತಮ್ಮ ಬ್ರ್ಯಾಂಡ್ ಅಡುಗೆ ಎಣ್ಣೆ ಮಾರಾಟ ಮಾಡುತ್ತಿದ್ದಾರೆ.

ಸಿಂಧನೂರಿನಲ್ಲಿ ರೈತರೇ ಸೇರಿಕೊಂಡ ಸ್ವಾಸ್ಥ್ಯ ರೈತರ ಉತ್ಪಾದಕ ಕಂಪನಿ ಸ್ಥಾಪಿಸಿದ್ದು, ಇದು ರೈತರಿಂದ ರೈತರಿಗಾಗಿಯೇ ಆರಂಭವಾಗಿದೆ. 1,100 ರೈತರು ಹೊಂದಿರುವ ಕಂಪನಿ ಇದಾಗಿದೆ. ಈ ಕಂಪನಿ ಆರಂಭವಾಗಲು ನಬಾರ್ಡಿನಿಂದ ಸಹಾಯ ಸಲಹೆ ಪಡೆಯಲಾಗಿದೆ.

ನಬಾರ್ಡ್‌ ರೈತರೇ ಕಂಪನಿ ಆರಂಭಿಸಲು ರೈತರ ಉತ್ಪಾದಕ ಕಂಪನಿಗಳನ್ನು ಆರಂಭಿಸಲು ಉತ್ತೇಜನ ನೀಡಲಾಗುತ್ತಿದೆ. ಈ ಹಿನ್ನೆಲೆ ಕಳೆದ ವರ್ಷ 2019ರಲ್ಲಿ ಸಿಂಧನೂರಿನಲ್ಲಿ ಈ ಕಂಪನಿ ಪ್ರಾರಂಭಿಸಲಾಗಿದೆ.

ರೈತರೇ ತಯಾರಿಸುತ್ತಿರುವ ಬ್ಯ್ರಾಂಡ್ ಅಡುಗೆ ಎಣ್ಣೆ..

ಸಣ್ಣ ಪ್ರಮಾಣದಲ್ಲಿ ಮೊದಲಿಗೆ 10 ಜನರು ಸೇರಿ ಕಂಪನಿ ಆರಂಭಿಸಲು ಚಿಂತನೆ ಮಾಡಿ, ತಲಾ ಸಾವಿರ ರೂಪಾಯಿಯನ್ನು ಸದಸ್ಯತ್ವಕ್ಕಾಗಿ ಬಂಡವಾಳ ಹಾಕಿದ್ದಾರೆ. ಪ್ರತಿ ಸದಸ್ಯರು ನೂರು ನೂರು ಜನರಂತೆ ಒಟ್ಟು 1000 ಜನರನ್ನು ಕಂಪನಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಆರಂಭದಲ್ಲಿ ರೈತರು ಬೆಳೆದ ಎಣ್ಣೆ ಕಾಳು, ಮನೆಯಲ್ಲಿ ಬಳಕೆ ಮಾಡುವ ಕೊಬ್ಬರಿ, ಕುಸುಬಿ, ಶೇಂಗಾ ಕಾಳುಗಳನ್ನು ಎಣ್ಣೆಯನ್ನಾಗಿ ತಯಾರಿಸುತ್ತಿದ್ದಾರೆ. ಸಣ್ಣ ಮಿಲ್ ಆಗಿ ಶುರುವಾದ ಕಂಪನಿಯು ಈಗ ಸಿಂಧನೂರು ತಾಲೂಕಿನಲ್ಲಿ ಮೂರು ಕಡೆ ಮಿಲ್​ಗಳನ್ನು ಪ್ರಾರಂಭಿಸಿದ್ದಾರೆ.

ಇಲ್ಲಿ ತಯಾರಾಗುವ ಅಡುಗೆ ಎಣ್ಣೆ ಉತ್ತಮ ಗುಣಮಟ್ಟದಿಂದ ಇರುವುದರಿಂದ ರಾಜ್ಯದ ನಾನಾ ಕಡೆಯ ಜನರು ಇಲ್ಲಿಗೆ ಬಂದು ಎಣ್ಣೆಯನ್ನು ಖರೀದಿಸುತ್ತಿದ್ದಾರೆ. ಈಗ ಆನ್‌ಲೈನ್ ಮೂಲಕ ಆರ್ಡರ್ ಮಾಡಿದವರಿಗೆ ನೇರವಾಗಿ ಎಣ್ಣೆಯನ್ನು ರೈತರು ತಮ್ಮದೆ ಕಂಪನಿಯ ಬ್ರ್ಯಾಂಡಿನಲ್ಲಿ ರವಾನಿಸಲಾಗುತ್ತಿದೆ.

ರೈತರ ಈ ಕಂಪನಿ ಸರಿಸುಮಾರು 15 ಲಕ್ಷ ರೂಪಾಯಿ ವ್ಯಾಪಾರ-ವಹಿವಾಟು ನಡೆಸುತ್ತಿದ್ದು, ಸಾಕಷ್ಟು ಬೇಡಿಕೆ ಬರುತ್ತಿದೆ ಅಂತಿದ್ದಾರೆ ಕಂಪನಿಯ ನಿರ್ದೇಶಕರು. ಇದಷ್ಟೇ ಅಲ್ಲ, ಇಲ್ಲಿ ರೈತರು 18 ಗಿರ್ ತಳಿಯ ಆಕಳುಗಳನ್ನು ಸಾಕಿದ್ದಾರೆ. ಆಕಳು ಹಾಲು, ಮೂತ್ರ, ಗಂಜಲದಿಂದ ಗೋ ಆಧಾರಿತ ಉತ್ಪನ್ನ್ನು ತಯಾರಿಸುತ್ತಿದ್ದಾರೆ.

ಮುಖ್ಯವಾಗಿ ಗೋ ಆರ್ಕಾ, ವಿಭೂತಿ ಸೇರಿದಂತೆ ನಾನಾ ಉತ್ಪನ್ನ ತಯಾರಿಸುವ ಮೂಲಕ ಮಾರಾಟ ಮಾಡುತ್ತಿದ್ದಾರೆ. ಇನ್ನೂ ರೈತರ ಕಂಪನಿಯಿಂದ ಬೇರೆ ಬೇರೆ ಉದ್ಯಮಿಗಳಿಗೆ, ಕಂಪನಿಗಳಿಗೆ ಭತ್ತ, ಶೇಂಗಾ ಸೇರಿದಂತೆ ಬೆಳೆದ ಬೆಳೆಯನ್ನು ಸ್ವಾಸ್ಥ್ಯ ಕಂಪನಿಯಿಂದಲೇ ಮಾರಾಟ ಮಾಡುವ ಮೂಲಕ ರೈತರಿಗೆ ಲಾಭ ಮಾಡುತ್ತಿದೆ.

ಅಡುಗೆ ಎಣ್ಣೆ ತಯಾರಿಸಲು ರೈತರಿಂದ ಕಚ್ಚಾ ವಸ್ತುಗಳ ಖರೀದಿ ಒಂದು ಕಡೆಯಾದರೆ ಕಂಪನಿಯ ರೈತರು ನೇರವಾಗಿ ಬಂದು ತಮ್ಮ ಮಿಲ್​ನಲ್ಲಿ ತಾವು ಬೆಳೆದ ಎಣ್ಣೆ ಕಾಳುಗಳಿಂದ ಎಣ್ಣೆಯನ್ನು ಹಾಕಿಸಿಕೊಂಡು ಹೋಗುವ ಸವಲತ್ತು ನೀಡಲಾಗಿದೆ.

ದೇಶದ ಬೆನ್ನಲುಬಾಗಿರುವ ರೈತ ಮನಸ್ಸು ಮಾಡಿದ್ರೆ, ಏನಾದ್ರೂ ಮಾಡಬಹುದು ಎನ್ನುವುದಕ್ಕೆ ಸಿಂಧನೂರಿನ ರೈತರು ಸ್ಥಾಪಿಸಿದ ಕಂಪನಿ ಇತರರಿಗೆ ಮಾದರಿಯಾಗಿದೆ ಎಂದರೆ ತಪ್ಪಾಗಲಾರದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.