ರಾಯಚೂರು: ಎಸ್‌ಸಿ, ಎಸ್‌ಟಿ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಇರಬೇಕು ಎನ್ನುವ ಹೋರಾಟ ಹಳೆಯದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕಾಂಗ್ರೆಸ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಗಿಲ್ಲೆಸೂಗೂರು ಗ್ರಾಮದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಹಾಗೂ ಸಮ್ಮಿಶ್ರ ಸರ್ಕಾರ ಇದ್ದಾಗ ಪ್ರಿಯಾಂಕ್ ಖರ್ಗೆ ಸಚಿವರಿದ್ದ ವೇಳೆ ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿ ರಚನೆಯಾಯಿತು. ಆದರೆ ಈ ಸಮಿತಿ ವರದಿ ಪೂರ್ಣಗೊಳಿಸಿದಾಗ ನಮ್ಮ ಸರ್ಕಾರ ಇರಲಿಲ್ಲ. ವರದಿ ಕೊಟ್ಟು ಎರಡು ವರ್ಷ ಮೂರು ತಿಂಗಳಿಗೂ ಜಾಸ್ತಿಯಾಗಿದೆ ಎಂದರು.
ವರದಿ ಬಂದಾಗಿನಿಂದ ನಮ್ಮ ಎಸ್‌ಸಿ, ಎಸ್‌ಟಿ ಶಾಸಕರು ಧ್ವನಿ ಎತ್ತಿದ್ದರು. ಕೊನೆ ಅಧಿವೇಶನದಲ್ಲಿ ಶಾಸಕರು ಬಾವಿಗಿಳಿದು ಹೋರಾಟ ಮಾಡಿದ್ರು. ಸಿಎಂ ಸರ್ವ ಪಕ್ಷ ಶಾಸಕರ ಸಭೆ ಕರೆಯುತ್ತೇನೆ ಅಂತ ಹೇಳಿದರು. ಎಸ್‌ಟಿ 3 ರಿಂದ 7 ಹೆಚ್ಚು ಮಾಡಬೇಕು. ಎಸ್‌ಸಿ 15 ರಿಂದ 17 ಆಗಬೇಕು ಒಟ್ಟು 24% ಆಗಬೇಕು ಅಂತ ವರದಿಯಲ್ಲಿದೆ ಎಂದು ಅವರು ಹೇಳಿದರು.
ಸಂವಿಧಾನ ತಿದ್ದುಪಡಿ ಆಗಬೇಕು: ಮೀಸಲಾತಿ ಸಾಮಾನ್ಯವಾಗಿ 50% ಗಿಂತ ಹೆಚ್ಚಾಗಬಾರದು ಎನ್ನುವ ಜಡ್ಜ್ಮೆಂಟ್ ಉಲ್ಲಂಘನೆಯಾಗುತ್ತದೆ. ಈಗ 56% ಆಗುತ್ತೆ. ಒಟ್ಟು 66% ಆಗುತ್ತೆ. ಇದಕ್ಕೆ ಸಂವಿಧಾನ ತಿದ್ದುಪಡಿ ಆಗಬೇಕು. ಒಂದು ವಾರದಲ್ಲಿ ಶಾಸಕಾಂಗ ಸಭೆ ಕರೆಯಿರಿ. ಒಂದು ವಾರ ದೆಹಲಿಯಲ್ಲಿ ಕುಳಿತು 9 ಶೆಡ್ಯೂಲ್ನಲ್ಲಿ ಸೇರಿಸಿ.
ಮೀಸಲಾತಿಗೆ ನಮ್ಮ ಸಂಪೂರ್ಣ ಬೆಂಬಲವಿದೆ: ಆರ್ಡಿನೆನ್ಸ್ ಮಾಡಲು ಹೊರಟಿದ್ದೀರಿ, ಶಾಸಕಾಂಗ ಸಭೆಯಲ್ಲಿ ಪಾಸ್ ಮಾಡೋಣ. ನಮ್ಮ ಪಕ್ಷ ಬೆಂಬಲ ಕೊಡುತ್ತದೆ. ಪಾಸ್ ಆದ ಮೇಲೆ ದೆಹಲಿಗೆ ತೆಗೆದುಕೊಂಡು ಹೋಗಿ 9 ಶೆಡ್ಯೂಲ್ ಮಾಡಿ ಅಡ್ಡದಾರಿ ಹಿಡಿಯಬೇಡಿ ಎಂದರು.
ಇದನ್ನೂ ಓದಿ: ಉಚಿತ ವಿದ್ಯುತ್‌ಗೆ ಕಡಿವಾಣ, ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಬೇಡ: ಸಿದ್ದರಾಮಯ್ಯ ಆಗ್ರಹ