ETV Bharat / state

ಕುಟುಂಬ ರಾಜಕೀಯ ತಪ್ಪಲ್ಲ, ಸಾಮರ್ಥ್ಯ ಇಲ್ಲದೆ ರಾಜಕೀಯ ಪ್ರವೇಶ ತಪ್ಪು: ಉಪೇಂದ್ರ

ರಾಜಕಾರಣದಲ್ಲಿ ಕುಟುಂಬ ರಾಜಕೀಯ ತಪ್ಪಲ್ಲ. ಅದ್ರೆ ಸಮರ್ಥ ನಾಯಕತ್ವ, ಸಾಮರ್ಥ್ಯ ಅಳಿಯಬೇಕಾಗಿದೆ ಎಂದು ನಟ ಉಪೇಂದ್ರ ಪ್ರತಿಕ್ರಿಯಿಸಿದ್ದಾರೆ.

ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಮತ್ತು ನಟ ಉಪೇಂದ್ರ
author img

By

Published : Apr 14, 2019, 6:34 PM IST

ರಾಯಚೂರು : ಕುಟುಂಬ ರಾಜಕಾರಣ ಎನ್ನುವುದಕ್ಕಿಂತ ರಾಜಕೀಯ ಕ್ಷೇತ್ರದಲ್ಲಿ ಸಾಮರ್ಥ್ಯ ನಿಭಾಯಿಸಬಲ್ಲ ಯಾವುದೇ ವ್ಯಕ್ತಿ ಸ್ಪರ್ಧಿಸಬಹುದು ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ, ನಟ ಉಪೇಂದ್ರ ಹೇಳಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ಕುಟುಂಬ ರಾಜಕಾರಣ ಎನ್ನುವುದಕ್ಕಿಂತ ಆ ಕುಟುಂಬದ ತಂದೆ, ಅಪ್ಪ, ಅಣ್ಣ, ತಂಗಿ ಯಾರೇ ಇರಲಿ ಸ್ಪರ್ಧಿಸಬಹದು. ಆದ್ರೆ ಸ್ಪರ್ಧಿಸುವವರ ಸಾಮರ್ಥ್ಯವನ್ನ ಅಳಿಯಬೇಕಾಗಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಸಮರ್ಥ ನಾಯಕತ್ವವನ್ನು ಬದಿಗಿಡಲಾಗಿದೆ ಎಂದರು.

ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಮತ್ತು ನಟ ಉಪೇಂದ್ರ

ಇನ್ನು ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 28 ಕ್ಷೇತ್ರಗಳ ಪೈಕಿ ಬಳ್ಳಾರಿ ಹೊರತುಪಡಿಸಿ ಉಳಿದ 27 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಜನರು ಬದಲಾವಣೆ ಬಯಸಿದ್ದಾರೆ. ಇದಕ್ಕಾಗಿ ಉತ್ತಮ ಪ್ರಜಾಕೀಯ ಪಕ್ಷವನ್ನ ಬೆಂಬಲಿಸಿದ್ದು, ಈಗಾಗಲೇ ಹಲವು ರಾಜಕೀಯ ನಾಯಕರು, ಜನರು‌ ನಮ್ಮ ಪಕ್ಷಕ್ಕೆ ಬೆಂಬಲಿಸಿದ್ದಾರೆ ಎಂದು ತಿಳಿಸಿದರು.

ಉಪೇಂದ್ರ ಲೋಕಸಭೆಗೆ ಯಾಕೆ ಸ್ಪರ್ಧಿಸಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಉಪ್ಪಿ, ಸದ್ಯ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಎಲ್ಲಾ ಜವಾಬ್ದಾರಿ ನನ್ನ ಮೇಲೆ ಇರುವುದರಿಂದ, ಸ್ಪರ್ಧಿಸಲು ಆಗಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಉಪೇಂದ್ರ ಹೇಳಿದ್ರು.

ರಾಯಚೂರು ಕ್ಷೇತ್ರದಿಂದ ಯುಪಿಪಿ ಅಭ್ಯರ್ಥಿಯಾಗಿ ನಿರಂಜನ ನಾಯಕ್​ ಕಣದಲ್ಲಿದ್ದಾರೆ. ಜನರು ಈತನನ್ನು ಬೆಂಬಲಿಸುವ ನೀರಿಕ್ಷೆಯಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ಅಭ್ಯರ್ಥಿ ನಿರಂಜನ ನಾಯಕ್​ ಉಪಸ್ಥಿತರಿದ್ದರು.

Intro:ಕುಟುಂಬ ರಾಜಕಾರಣ ಎನ್ನುವುದಕ್ಕಿಂತ ರಾಜಕೀಯ ಕ್ಷೇತ್ರದಲ್ಲಿ ಸಾಮರ್ಥ್ಯ ನಿಭಾಯಿಸಬಲ್ಲ ಯಾವುದೇ ವ್ಯಕ್ತಿ ಸ್ಪರ್ಧೆ ಮಾಡಬಹುದು ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಮತ್ತು ನಟ ಉಪೇಂದ್ರ ಹೇಳಿದ್ದಾರೆ.

Body:ರಾಯಚೂರಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜಕಾರಣದಲ್ಲಿ ಕುಟುಂಬ ರಾಜಕಾರಣ ಎನ್ನುವುದಕ್ಕಿಂತ ಅ ಕುಟುಂಬದ ತಂದೆ, ಅಪ್ಪ, ಅಣ್ಣ, ತಂಗಿ ಯಾರೇ ಇರಲಿ ಸ್ಪರ್ಧೆ ಮಾಡಬಹದು, ಸ್ಪರ್ಧೆ ಮಾಡುವವರು ಸಮರ್ಥರನ್ನ ಎನ್ನುವುದು ಆಳಿಯಬೇಕಾಗಿದೆ. ಆದ್ರೆ ಇತ್ತೀಚಿನ ಸಮರ್ಥ ನಾಯಕತ್ವ ಯಿದೆ ಎನ್ನುವುದನ್ನ ಬದಿ ಇಡಲಾಗಿದೆ ಎಂದರು.

Conclusion:ಇನ್ನು ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ೨೮ ಕ್ಷೇತ್ರಗಳ ಪೈಕಿ ಬಳ್ಳಾರಿ ಹೊರತು ಪಡಿಸಿ ಉಳಿದ ೨೭ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಜನರು ಬದಲಾವಣೆ ಭಯಸಿದ್ದಾರೆ. ಇದಕ್ಕಾಗಿ ಉತ್ತಮ ಪ್ರಜಾಕೀಯ ಪಕ್ಷವನ್ನ ಬೆಂಬಲಿಸಿದ್ದು, ಈಗಾಗಲೇ ಹಲವು ರಾಜಕೀಯ ನಾಯಕರು, ಜನರು‌ ನಮ್ಮ ಪಕ್ಷಕ್ಕೆ ಬೆಂಬಲಿಸಿದ್ದಾರೆ ಎಂದರು.
ಉಪೇಂದ್ರ ಲೋಕಸಭೆಗೆ ಯಾಕೆ ಸ್ಪರ್ಧಿಸಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಉಪ್ಪಿ, ಸದ್ಯ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಎಲ್ಲಾ ಜವಾಬ್ದಾರಿ ನನ್ನ ಮೇಲೆ ಇರುವುದರಿಂದ, ಸ್ಪರ್ಧೆ ಮಾಡುವುದಕ್ಕೆ ಆಗಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದರು.

ರಾಯಚೂರು ಕ್ಷೇತ್ರದಿಂದ ನಿರಂಜನ ನಾಯಕ ಸ್ಪರ್ಧೆ ಮಾಡಿದ್ದಾರೆ. ಜನರು ಈತನಿಗೆ ಬೆಂಬಲಿಸುವ ನೀರಿಕ್ಷೆಯಿದ್ದು, ಜನರು ಸಹ ಬದಲಾವಣೆ ನಿರೀಕ್ಷೆಯಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿ ನಿರಂಜನ ನಾಯಕ ಇದರು.

ಬೈಟ್. ೧: ಉಪೇಂದ್ರ, ನಟ ಮತ್ತು ಸಂಸ್ಥಾಪಕ, ಉತ್ತಮ ಪ್ರಜಾಕೀಯ ಪಕ್ಷ,
ETV Bharat Logo

Copyright © 2024 Ushodaya Enterprises Pvt. Ltd., All Rights Reserved.