ETV Bharat / state

ಮುಂಗಾರು ಹತ್ತಿರ ಬಂದರೂ ಇನ್ನೂ ಪಾವತಿಯಾಗದ ಹಿಂಗಾರಿನ ತೊಗರಿ ಹಣ! - script and fileshot

ಜಿಲ್ಲೆಯ ಹಿಂಗಾರು ಸಮಯದಲ್ಲಿ ಬೆಳೆದ ತೊಗರಿ ಮಾರಾಟದ ಹಣವನ್ನ ಸರ್ಕಾರ ಮುಂಗಾರು ಹತ್ತಿರ ಬಂದರೂ ಪಾವತಿಸಿಲ್ಲ ಎನ್ನಲಾಗಿದೆ.

ಮುಂಗಾರು ಹತ್ತಿರ ಬಂದರೂ, ಇನ್ನು ಪಾವತಿಯಾಗದ ಹಿಂಗಾರಿನ ತೊಗರಿ ಹಣ
author img

By

Published : Jun 5, 2019, 8:40 AM IST

ರಾಯಚೂರು: ಜಿಲ್ಲೆಯ ಹಿಂಗಾರು ಸಮಯದಲ್ಲಿ ಬೆಳೆದ ತೊಗರಿಯನ್ನ ಮಾರಾಟ ಮಾಡಲು ಸರ್ಕಾರದಿಂದ ಜಿಲ್ಲೆಯಾದ್ಯಂತ 24 ತೊಗರಿ ಖರೀದಿ ಕೇಂದ್ರಗಳನ್ನ ತೆರೆಯಲಾಗಿತ್ತು. 11360 ನೋಂದಾಯಿತ ರೈತರು ಏಪ್ರಿಲ್​ 10ರವರೆಗೆ ಮಾರಾಟಕ್ಕೆ ಅರ್ಹತೆ ಪಡೆದುಕೊಂಡಿದ್ದರು.

ಆದರೆ ಸರ್ಕಾರ ಇನ್ನೂ ಸುಮಾರು ಮೂರೂವರೆ ಕೋಟಿ ರೂಪಾಯಿ ಮೊತ್ತದ 1000ಕ್ಕೂ ಕ್ವಿಂಟಾಲ್ ತೊಗರಿ ಮಾರಾಟ ಮಾಡಿದ ರೈತರಿಗೆ ತೊಗರಿ ಹಣ ಪಾವತಿ ಮಾಡಿಲ್ಲ ಎನ್ನಲಾಗಿದೆ. ಇದರಿಂದಾಗಿ ರೈತರು ತೊಂದ್ರೆ ಅನುಭವಿಸುವಂತಾಗಿದ್ದು, ಅದಷ್ಟು ಬೇಗ ಹಣ ಪಾವತಿ ಮಾಡಬೇಕು. ಇಲ್ಲದಿದ್ದರೆ ಹೋರಾಟ ನಡೆಸುವುದಾಗಿ ರೈತರು ಎಚ್ಚರಿಸಿದ್ದಾರೆ.

ಮುಂಗಾರು ಹತ್ತಿರ ಬಂದರೂ ಪಾವತಿಯಾಗದ ಹಿಂಗಾರಿನ ತೊಗರಿ ಹಣ

ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಮಾನ್ಯತೆ ಹೊಂದಿದ್ದ ನಾಫೇಡ್ ಸಂಸ್ಥೆ, ರಾಜ್ಯ ಮಾರ್ಕೆಟಿಂಗ್ ಫೆಡರೇಶನ್ ಸಹಯೋಗದಲ್ಲಿ ಜಿಲ್ಲೆಯಲ್ಲಿ 24 ಖರೀದಿ ಕೇಂದ್ರಗಳನ್ನು ತೆರೆದಿತ್ತು. ತೊಗರಿ ಮಾರಾಟದ ಸಂದರ್ಭದಲ್ಲಿ ರೈತರು ರಾಜ್ಯ ಮಾರ್ಕೆಟಿಂಗ್ ಫೆಡರೇಶನ್​ಗೆ ಪಹಣಿ, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನೂ ಸಲ್ಲಿಸಿದ್ದರು. ಆದರೆ, ಇದೀಗ ಅದೇ ದಾಖಲೆಗಳಲ್ಲಿನ ಕೆಲವೊಂದು ತಾಂತ್ರಿಕ ತೊಂದರೆ ಎದುರಾಗಿದೆಯಂತೆ. ಇದರ ಪರಿಣಾಮ ತೊಗರಿ ಮಾರಾಟ ಮಾಡಿದ ರೈತರಿಗೆ ಪಾವತಿಯಾಗಬೇಕಾದ ಹಣ ಪಾವತಿಯಾಗದೆ ಇಲಾಖೆ ಖಾತೆಯಲ್ಲಿ ಜಮಾವಿದೆ.

ಆದ್ರೆ ಇತ್ತ ತಮ್ಮ ಖಾತೆಗೆ ಹಣ ಬಂದಿಲ್ಲವೆಂದು ರೈತರು ನಿತ್ಯ ಖರೀದಿ ಮಾಡಿದ ಕೇಂದ್ರಗಳಿಗೆ ಓಡಾಡುತ್ತಿದ್ದಾರೆ. ಹಣ ಬರದಿರುವ ಮಾಹಿತಿ ಪಡೆದುಕೊಂಡು ಇಲಾಖೆಯ ಅಧಿಕಾರಿಗಳು ಸಹ ಆಗಿರುವ ತಾಂತ್ರಿಕ ಸಮಸ್ಯೆಯನ್ನ ಬಗೆಹರಿಸುವ ಮೂಲಕ ಹಣವನ್ನ ಪಾವತಿ ಮಾಡುತ್ತಿದ್ದಾರೆ. ರೈತರು ನೀಡಿರು ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಹೆಸರಿನಲ್ಲಿ ಸ್ವಲ್ಪ ವ್ಯತ್ಯಾಸ ಬಂದ್ರೆ ಹಣ ಪಾವತಿಯಾಗುವುದಿಲ್ಲ. ಹೀಗಾಗಿ ಸಂಬಂಧಿಸಿದ ರೈತರಿಂದ ಸಮರ್ಪಕವಾದ ದಾಖಲೆಗಳನ್ನ ಪಡೆದುಕೊಂಡು ಹಣವನ್ನ ಪಾವತಿಸುವ ಕಾರ್ಯ ನಡೆದಿದೆ ಅಂತಾ ಕೆಎಸ್​ಸಿಎಂಎಫ್ ನೋಡೆಲ್ ಅಧಿಕಾರಿ ಭಗವಂತ ಹೇಳಿದ್ದಾರೆ.

ಹಿಂಗಾರಿಗೆ ತೊಗರಿ ಬೆಳೆಗೆ ಮುಂಗಾರು ಬಂದರೂ ಇನ್ನೂ ನೂರಾರು ರೈತರಿಗೆ ಸರ್ಕಾರದಿಂದ ಹಣ ಪಾವತಿಯಾಗಿಲ್ಲ. ಜಿಲ್ಲೆಯಲ್ಲಿ ಈಗಾಗಲೇ ಅಲ್ಲಲ್ಲಿ ಮಳೆ ಸುರಿಯುತ್ತಿದ್ದು, ಮುಂಗಾರು ಬಿತ್ತನೆಗೆ ರೈತರಿಗೆ ಹಣದ ಅವಶ್ಯಕತೆ ಇದೆ. ಆದಷ್ಟು ಬೇಗನೆ ತೊಗರಿ ಹಣ ಪಾವತಿಸುವಂತೆ ರೈತರು ಒತ್ತಾಯಿಸಿದ್ದಾರೆ.

Intro:ಸ್ಲಗ್: ಮುಂಗಾರು ಹತ್ತಿರ ಬಂದರೂ, ಇನ್ನು ಪಾವತಿಯಾಗದ ಹಿಂಗಾರಿ ತೊಗರಿ ಹಣ
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 04-೦6-2019
ಸ್ಥಳ: ರಾಯಚೂರು
ಆಂಕರ್: ರಾಯಚೂರು ಜಿಲ್ಲೆಯ ಸತತವಾಗಿ ಬರಗಾಲ ಆವರಿಸುತ್ತಿದೆ. ಕಳೆದ ವರ್ಷ ಮುಂಗಾರು-ಹಿಂಗಾರು ಮಳೆ ಕೈಕೊಟ್ಟಿದ್ರೂ, ಹಿಂಗಾರು ವೇಳೆ ಜಿಲ್ಲೆಯ ಕೆಲವು ಕಡೆ ಅಲಲ್ಲ ಮಳೆ ಸುರಿದಿತ್ತು. ಆಗ ರೈತರು ತೊಗರಿ ಬಿತ್ತನೆ ಮಾಡಿಕೊಂಡು ತೊಗರಿ ಬೆಳೆದಿದ್ರು. ಬೆಳೆದ ತೊಗರಿಯನ್ನ ಮಾರಾಟ ಮಾಡಬೇಕಾದ್ರೆ ಮಾರುಕಟ್ಟೆಯಲ್ಲಿ ವೈಜ್ಞಾನಿಕ ಬೆಲೆಯಿಲ್ಲದಾಗ, ಸರಕಾರದಿಂದ ತೊಗರಿ ಖರೀದಿ ಕೇಂದ್ರ ಆರಂಭಿಸಿತ್ತು. ತೊಗರಿ ಕೇಂದ್ರದಲ್ಲಿ ರೈತರು ಮಾರಾಟ ಮಾಡಿದ್ರು. ಆದ್ರೆ ಆರು ತಿಂಗಳು ಗತಿಸಿದ್ರೂ ಇನ್ನು ಹಲವು ರೈತರಿಗೆ ಬ್ಯಾಂಕ್ ಖಾತೆಯ ತಾಂತ್ರಿಕ ತೊಂದರೆಯಿದ ಹಣ ಪಾವತಿಯಾಗಿಲ್ಲ. ಈ ಕುರಿತು ಸ್ಟೋರಿ ಇಲ್ಲಿದೆ ನೋಡಿ.
Body:ವಾಯ್ಸ್ ಓವರ್.1: ರಾಯಚೂರು ಜಿಲ್ಲೆಯ ಹಿಂಗಾರು ಸಮಯದಲ್ಲಿ ಬೆಳೆದ ತೊಗರಿಯನ್ನ ಸರಕಾದಿಂದ ಜಿಲ್ಲೆಯಾದ್ಯಂತ 2019ರ ಜ.14ರಿಂದ ಪ್ರಾರಂಭಿಸಲಾಯಿತು. 24 ತೊಗರಿ ಖರೀದಿ ಕೇಂದ್ರಗಳಲ್ಲಿ 11360 ನೊಂದಾಯಿತ ರೈತರು ಏ.10 ರವರೆಗೆ ಮಾರಾಟಕ್ಕೆ ಅರ್ಹತೆ ಪಡೆದುಕೊಂಡಿದ್ದರು. ಆದ್ರೆ 6421 ರೈತರು ಮಾರಾಟ ಮಾಡಿದ್ದು, ತಲಾ ಒಬ್ಬ ರೈತರಿಂದ 10 ಕ್ವಿಂಟಾಲ್ ಯಂತೆ ಒಟ್ಟು 56167.50 ಕ್ವಿಂಟಲ್ ತೊಗರಿಯನ್ನ ಖರೀದಿ ಮಾಡಲಾಗಿತ್ತು.
ವಾಯ್ಸ್ ಓವರ್.2: ಇನ್ನು ಸರಕಾರ ಕ್ವಿಂಟಾಲ್ ತೊಗರಿಗೆ 6100 ರೂ.ಯಂತೆ ತೊಗರಿಯನ್ನ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ ಹಲವು ರೈತರಿಗೆ ಮಾರಾಟ ಮಾಡಿದ್ದಾರೆ. ಆದ್ರೆ ಇನ್ನು ಸುಮಾರು ಮೂವರೆ ಕೋಟಿ ರೂಪಾಯಿ ಮೊತ್ತದ 1000ಕ್ಕೂ ಕ್ವಿಂಟಾಲ್ ತೊಗರಿ ಮಾರಾಟ ಮಾಡಿದ ರೈತರಿಗೆ ತೊಗರಿ ಹಣ ಪಾವತಿಯಾಗಿಲ್ಲ. ಇದರಿಂದಾಗಿ ರೈತರು ತೊಂದ್ರೆ ಅನುಭವಿಸುವಂತಾಗಿದ್ದು, ಅದಷ್ಟು ಬೇಗ ಹಣ ಪಾವತಿ ಮಾಡಬೇಕು. ಇಲ್ಲದಿದ್ದರೆ ಹೋರಾಟ ನಡೆಸುವುದಾಗಿ ರೈತರು ಎಚ್ಚರಿಸಿದ್ರೆ.
ವಾಯ್ಸ್ ಓವರ್.3: ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಮಾನ್ಯತೆ ಹೊಂದಿದ್ದ ನಾಫೇಡ್ ಸಂಸ್ಥೆ, ರಾಜ್ಯ ಮಾರ್ಕೆಟಿಂಗ್ ಫೆಡರೇಶನ್ ಸಹಯೋಗದಲ್ಲಿ ಜಿಲ್ಲೆಯಲ್ಲಿ 24 ಖರೀದಿ ಕೇಂದ್ರಗಳನ್ನು ತೆರಯಲಾಗಿತ್ತು. ತೊಗರಿ ಮಾರಾಟದ ಸಂದರ್ಭದಲ್ಲಿ ರೈತರು ರಾಜ್ಯ ಮಾರ್ಕೆಟಿಂಗ್ ಫೆಡರೇಶನ್ಗೆ ರೈತರು ಪಹಣಿ, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಜಿರಾಕ್ಸ್ ಪ್ರತಿಯನ್ನೂ ಸಲ್ಲಿಸಿದ್ದರು. ಆದರೆ, ಇದೀಗ ಅದೇ ದಾಖಲೆಗಳಲ್ಲಿನ ಕೆಲವೊಂದು ತಾಂತ್ರಿಕ ತೊಂದರೆ ಎದುರಾಗಿದೆ. ಇದರ ಪರಿಣಾಮ ತೊಗರಿ ಮಾರಾಟ ಮಾಡಿದ ರೈತರಿಗೆ ಪಾವತಿಯಾಗಬೇಕಾದ ಹಣ ಪಾವತಿಯಾಗದೆ ಇಲಾಖೆ ಖಾತೆಯಲ್ಲಿ ಜಮಾವಿದೆ. ಆದ್ರೆ ಇತ್ತ ತಮ್ಮ ಖಾತೆಗೆ ಹಣ ಬಂದಿಲ್ಲವೆಂದು ರೈತರು ನಿತ್ಯ ಖರೀದಿ ಮಾಡಿದ ಕೇಂದ್ರ ಓಡಾಡುತ್ತಿದ್ದಾರೆ. ಹಣ ಬರದಿರುವ ಮಾಹಿತಿ ಪಡೆದುಕೊಂಡು ಇಲಾಖೆಯ ಅಧಿಕಾರಿಗಳು ಸಹ ಆಗಿರುವ ತಾಂತ್ರಿಕ ಸಮಸ್ಯೆಯನ್ನ ಬಗೆಹರಿಸುವ ಮೂಲಕ ಹಣವನ್ನ ಪಾವತಿ ಮಾಡಲಾಗುತ್ತಿದೆ. ರೈತರು ನೀಡಿರು ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಹೆಸರಿನಲ್ಲಿ ಸ್ವಲ್ಪ ವ್ಯತ್ಯಾಸ ಬಂದ್ರೆ, ಹಣ ಪಾವತಿಯಾಗುವುದಿಲ್ಲ. ಹೀಗಾಗಿ ಸಂಬಂಧಿಸಿದ ರೈತರಿಗೆ ಸಮರ್ಪಕವಾದ ದಾಖಲೆಗಳನ್ನ ಪಡೆದುಕೊಂಡು ಹಣವನ್ನ ಪಾವತಿಸುವ ಕಾರ್ಯ ನಡೆದಿದೆ. ಅಂತಾರೆ ಕೆಎಸ್ ಸಿಎಂಎಫ್ ನೋಡೆಲ್ ಅಧಿಕಾರಿ ಭಗವಂತ ಹೇಳುತ್ತಿದ್ದಾರೆ. ಒಟ್ನಿಲ್ಲಿ, ಹಿಂಗಾರಿಗೆ ತೊಗರಿ ಬೆಳೆದ ರೈತರಿಗೆ ಮುಂಗಾರು ಬಂದರೂ, ಇನ್ನೂ ನೂರಾರು ರೈತರಿಗೆ ಸರಕಾರದಿಂದ ಖರೀದಿ ಮಾಡಿದ್ದಂತೆ ತೊಗರಿ ಹಣ ಪಾವತಿಯಾಗಿಲ್ಲ. ಜಿಲ್ಲೆಯಲ್ಲಿ ಈಗಾಗಲೇ ಅಲ್ಲಲ್ಲ ಮಳೆ ಸುರಿಯುತ್ತಿದ್ದು, ಮುಂಗಾರು ಬಿತ್ತನೆಗೆ ರೈತರಿಗೆ ಹಣದ ಅವಶಕತೆಯಿದ್ದು, ಅದಷ್ಟು ಬೇಗನೆ ರೈತರ ತೊಗರಿ ಹಣ ಪಾವತಿಸುವಂತೆ ರೈತರು ಒತ್ತಾಯಿಸಿದ್ದಾರೆ.
Conclusion:ಬೈಟ್.1: ಲಕ್ಷ್ಮಣಗೌಡ, ಕಡ್ಗಂದೊಡ್ಡಿ, ರೈತ ಸಂಘದ ಮುಖಂಡ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.