ಲಿಂಗಸುಗೂರು (ರಾಯಚೂರು): ಅಕಾಲಿಕ ಮಯಿಂದಾಗಿ ಲಿಂಗಸುಗೂರು ಪುರಸಭೆಯ ಬಹುತೇಕ ವಾರ್ಡ್ಗಳಲ್ಲಿ ಚರಂಡಿ ನೀರು ಮಳೆ ನೀರಲ್ಲಿ ಬೆರೆತು ರಸ್ತೆ ಮೇಲೆಯೇ ಹರಿಯಿತು. ಪರಿಣಾಮ, ದುರ್ನಾತದಿಂದಾಗಿ ಜನರು ಮೂಗಿ ಮುಚ್ಚಿ ಓಡಾಡುವ ಪರಿಸ್ಥಿತಿ ಉದ್ಭವಿಸಿದೆ.
ಕೊರೊನಾ ನೆಪದಲ್ಲಿ ಪುರಸಭೆ ಚರಂಡಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿಲ್ಲ. ಈ ದುಸ್ಥಿತಿಗೆ ಪುರಸಭೆ ನೇರ ಹೊಣೆ ಎಂದು ಸಾರ್ವಜನಿಕರು ದೂರಿದ್ದಾರೆ.
ಚರಂಡಿಗಳ ಸ್ವಚ್ಛತೆಯ ಜೊತೆಗೆ ಘನತ್ಯಾಜ್ಯ ವಿಲೇವಾರಿ, ಸಮರ್ಪಕ ಕುಡಿಯುವ ನೀರು ಪೂರೈಸುವಂತಹ ಕೆಲಸಗಳತ್ತ ಗಮನ ಹರಿಸಿ ನಾಗರಿಕರ ಹಿತರಕ್ಷಣೆಗೆ ಮುಂದಾಗಬೇಕು ಎಂದು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಪುರಸಭೆಯನ್ನು ಒತ್ತಾಯಿಸಿದ್ದಾರೆ.