ರಾಯಚೂರು: 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕನೊಬ್ಬ ಸಂಗ್ರಹಿಸಿಟ್ಟಿದ್ದ ಹಣವನ್ನ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವ ಮೂಲಕ ಮಾದರಿಯಾಗಿದ್ದಾನೆ.
ಜಿಲ್ಲೆಯ ಮಸ್ಕಿ ಪಟ್ಟಣದ ಮಹಾಂತಮ್ಮ ಮತ್ತು ಲಿಂಗನಗೌಡ ಭಯ್ಯಾಪುರ ದಂಪತಿ ಪುತ್ರ ಶಶಿಧರ ಹಿರೇಮಠ 3,565 ರೂ ದೇಣಿಗೆ ನೀಡಿದ್ದಾನೆ. ಮನೆಯಲ್ಲಿ ಪೊಷಕರು ಹಾಗೂ ಸಂಬಂಧಿಕರು ಆಗಾಗ ನೀಡುವ ಹಣವನ್ನ ಹುಂಡಿಯಲ್ಲಿ ಹಾಕಿ ಕೂಡಿಟ್ಟುಕೊಂಡಿದ್ದ.
ಕೊರೊನಾ ವೈರಸ್ನಿಂದ ಸದ್ಯದ ಮಟ್ಟಿಗೆ ಜಗತ್ತು ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತನ್ನಿಂದಾಗುವ ಸಹಾಯವನ್ನ ಮಾಡಬೇಕು ಎಂಬ ಸದ್ದುದೇಶದಿಂದ ಚೆಕ್ ಮೂಲಕ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾನೆ.