ರಾಯಚೂರು: ಕ್ಯಾನ್ಸರ್ ಟ್ಯೂಮರ್ ಕಾಯಿಲೆಯಿಂದ ನರಳುತ್ತಿದ್ದ ಮಹಿಳೆಗೆ, ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ 3 ಕೆಜಿ ತೂಕದ ಗಡ್ಡೆ ಹೊರತೆಗೆಯುವ ಮೂಲಕ ನಗರದ ಖಾಸಗಿ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ನಗರದ ಗಂಜ್ ಸರ್ಕಲ್ ಬಳಿಯಿರುವ ಎಂ.ಕೆ ಭಂಡಾರಿ ಆಸ್ಪತ್ರೆಯ ವೈದ್ಯರು ಸತತ ಮೂರು ಗಂಟೆಗಳ ಕಾಲ ನಿರಂತರ ಶಸ್ತ್ರ ಚಿಕಿತ್ಸೆ ಮಾಡಿ, ಮಹಿಳೆಯ ಹೊಟ್ಟೆಯಲ್ಲಿದ್ದ ಕ್ಯಾನ್ಸರ್ ಗಡ್ಡೆಯನ್ನು ಹೊರತೆಗೆದಿದ್ದಾರೆ. ಸಿಂಧನೂರು ತಾಲೂಕಿನ ಬಳಗಾನೂರು ಗ್ರಾಮದ ಬೇಗಂ ಬಿ ಎಂಬುವರು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಹಲವು ಆಸ್ಪತ್ರೆಗಳಿಗೆ ಅಲೆದಾಡಿ, ನಂತರ ಕೊನೆಯದಾಗಿ ರಾಯಚೂರಿನಲ್ಲಿರುವ ಈ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಸಾಮಾನ್ಯವಾಗಿ ಎರಡ್ಮೂರು ಕೆ.ಜಿ.ಯ ಕ್ಯಾನ್ಸರ್ ಗಡ್ಡೆಗಳನ್ನು ತೆಗೆಯಬಹುದು. ಬೇಗಂ ಅವರ ಕ್ಯಾನ್ಸರ್ನ ಭಾಗದಿಂದ ಕಿಡ್ನಿ, ಹೃದಯಕ್ಕೆ, ಮತ್ತು ಪಿತ್ತಕೋಶಕ್ಕೆ ರಕ್ತ ಸಂಚರಿಸುವ ಸಾಕಷ್ಟು ನರಗಳು ಇರುತ್ತವೆ. ಇವುಗಳಿಗೆ ತೊಂದರೆ ಆಗದಂತೆ ಕ್ಯಾನ್ಸರ್ ಗಡ್ಡೆಯನ್ನು ತೆಗೆಯೋದು ಒಂದು ಸವಾಲಿನ ಕೆಲಸ ಆಗಿತ್ತು. ಆದರೆ ಇದನ್ನು ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿಯ ಸಹಕಾರದಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ತೆಗೆದಿದ್ದೇವೆ ಎಂದು ಆಸ್ಪತ್ರೆಯ ವೈದ್ಯ ಡಾ. ರಮೇಶ್ ಮಾಹಿತಿ ನೀಡಿದರು.