ETV Bharat / state

ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮ: ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ...

ರಾಯಚೂರು ತಾಲೂಕಿನ ಕೆಲ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಜಿಲ್ಲಾಡಳಿತದಿಂದ ಸಕಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಹೇಳಿದರು.

author img

By

Published : Oct 18, 2020, 6:17 PM IST

raichur
ಶಕ್ತಿ ನಗರದ ಪ್ರವಾಸಿ ಮಂದಿರದಲ್ಲಿ ಎನ್.ಡಿ.ಆರ್.ಎಫ್ ತಂಡದೊಂದಿಗೆ ಸಭೆ

ರಾಯಚೂರು: ಕೃಷ್ಣಾ ಹಾಗೂ ಭೀಮಾ ನದಿಯಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದ ತಾಲೂಕಿನ ಕೆಲ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಜಿಲ್ಲಾಡಳಿತದಿಂದ ಸಕಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಹೇಳಿದರು.

ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ

ಶಕ್ತಿ ನಗರದ ಪ್ರವಾಸಿ ಮಂದಿರದಲ್ಲಿ ಎನ್.ಡಿ.ಆರ್.ಎಫ್ ತಂಡದೊಂದಿಗೆ ಸಭೆಯ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಸುರಿದ ಮಳೆಯಿಂದ ಭೀಮಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಸೊನ್ನಾ ಬ್ಯಾರೆಜ್​ನಿಂದ ನಿಗದಿತ 8 ಲಕ್ಷ ಕ್ಯೂಸ್ಸೆಕ್ಸ್​ ನೀರು ನದಿಗೆ ಬಿಟ್ಟ ಪರಿಣಾಮ ನೆರೆಯ ಜಿಲ್ಲೆಗಳಾದ ಕಲಬುರಗಿ, ಯಾದಗಿರಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಅಪಾರ ಪ್ರಮಾಣದ ನೀರು ಇಂದು ಮಧ್ಯರಾತ್ರಿ ಇಲ್ಲವೆ ಬೆಳಗ್ಗೆ ತಾಲೂಕಿನ ಗುರುರ್ಜಾಪುರ ಹತ್ತಿರದ ಕೃಷ್ಣಾ ಭೀಮಾ ಸಂಗಮ ಪ್ರದೇಶ ಸೇರುವುದರಿಂದ ತಾಲೂಕಿನ ಕೆಲ ಗ್ರಾಮಗಳಿಗೆ ಪ್ರವಾಹ ಪರಿಸ್ಥಿತಿ ಎದರಾಗಲಿದ್ದು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದರು.

ಕಳೆದ ವರ್ಷ ಪ್ರವಾಹದಲ್ಲಿ 9.50ಲಕ್ಷ ಕ್ಯೂಸೆಕ್ಸ್​​ ನೀರು ಬಂದ ಸಮಯದಲ್ಲಿ ಆದ ಹಾನಿ ಹಾಗೂ ಪರಿಹಾರ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಯೊಜನೆ ರೂಪಿಸಲಾಗುತ್ತಿದ್ದು, ಸಂಗಮ ಪ್ರದೇಶದ ಹತ್ತಿರ ಇರುವ ಗುರುರ್ಜಾಪುರ ಗ್ರಾಮಕ್ಕೆ ನೀರು ಬರುವ ಸಾಧ್ಯತೆ ಹೆಚ್ಚಿದ್ದು ಈಗಾಗಲೇ ಗ್ರಾಮದ ಜನರನ್ನು ಯಲ್ದಾಪುರ ಕ್ಕೆ ಸ್ಥಳಾಂತರಕ್ಕೆ ಸಾರಿಗೆ ಬಸ್​ಗಳ ವ್ಯವಸ್ಥೆ ಮಾಡಿದ್ದು, ಇಂದು ರಾತ್ರಿ ವೇಳೆಗೆ ಸ್ಥಳಾಂತರ ಮಾಡಲಾಗುವುದು ಎಂದರು.

ಉಳಿದ ನಾಲ್ಕು ಗ್ರಾಮಗಳಾದ ದೊಂಗ, ರಾಮಪೂರ, ಆತ್ಕೂರ್, ಕೃಷ್ಣಾ ಗ್ರಾಮಗಳು ಎತ್ತರದ ಪ್ರದೇಶದಲ್ಲಿ ಇರುವುದರಿಂದ ಸುಮಾರು 50ಕ್ಕೂ ಹೆಚ್ಚು ಮನೆಗಳು ಸ್ಥಳಾಂತರ ಮಾಡಬೇಕಾಗುತ್ತದೆ. ಜಿಲ್ಲಾಡಳಿತ ಇದಕ್ಕೆ ಸಕಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.