ETV Bharat / state

ರಾಯಚೂರಿನಲ್ಲಿ ಭಾರಿ ಮಳೆ.. ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಅಡಚಣೆ - ಹೊಸಹಳ್ಳಿ ಕ್ಯಾಂಪ್

ಬಿಸಿಲೂರು ರಾಯಚೂರು ಜಿಲ್ಲೆಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಅಡ್ಡಿಯುಂಟಾಗಿದೆ.

ರಾಯಚೂರಿನಲ್ಲಿ ಭಾರಿ ಮಳೆ
ರಾಯಚೂರಿನಲ್ಲಿ ಭಾರಿ ಮಳೆ
author img

By

Published : May 1, 2023, 6:53 PM IST

ಬಿಜೆಪಿ ಅಭ್ಯರ್ಥಿ ಕೆ ಕರಿಯಪ್ಪ ಅವರು ಮಾತನಾಡಿದರು

ರಾಯಚೂರು : ಜಿಲ್ಲೆಯ ಸಿಂಧನೂರು ತಾಲೂಕಿನ ಹೊಸಹಳ್ಳಿ ಕ್ಯಾಂಪ್ ಹತ್ತಿರ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರ ಪ್ರಚಾರ ಕಾರ್ಯಕ್ರಮ ಆಯೋಜಿಸಲಾಗಿದೆ. ಆದರೆ, ಕಳೆದ ಎರಡ್ಮೂರು ದಿನಗಳಿಂದ ಜಿಲ್ಲೆಯಾದ್ಯಂತ ಭಾರಿ ಗುಡುಗು-ಮಿಂಚು, ಬಿರುಗಾಳಿಯೊಂದಿಗೆ ಸುರಿದ ಮಳೆಯಿಂದಾಗಿ ಅಡಚಣೆ ಎದುರಾಗಿದೆ.

ಪರಿಣಾಮ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಬೃಹತ್ ಪೆಂಡಾಲ್ ಹಾಕಲಾಗುತ್ತಿದೆ. ಬಿರುಗಾಳಿಯಿಂದ ಪೆಂಡಾಲ್​ಗಾಗಿ ಹಾಕಿದ ಕಂಬಗಳು, ಮುಖ್ಯವೇದಿಕೆ ಕುಸಿದಿದೆ. ಕಾರ್ಯಕ್ರಮ ನಡೆಯುವ ಮೈದಾನದಲ್ಲಿ ನೀರು ನಿಂತಿದೆ. ಇದರಿಂದ ತೊಂದರೆಯಾಗುತ್ತಿದ್ದು, ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುವ ಮೂಲಕ ಸಮಾವೇಶಕ್ಕಾಗಿ ತಯಾರಿಯನ್ನು ನಡೆಸುತ್ತಿದ್ದಾರೆ.

ಹೊಸಹಳ್ಳಿ ಕ್ಯಾಂಪ್ ಹತ್ತಿರ 36 ಎಕರೆ ಪ್ರದೇಶದಲ್ಲಿ ಪ್ರಧಾನಿ ಮೋದಿಯವರ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, 5 ಎಕರೆ ಪ್ರದೇಶವನ್ನು ಮುಖ್ಯವೇದಿಕೆ ಹಾಗೂ ಜನರು ಕುಳಿತುಕೊಳ್ಳಲು ಆಸನದ ವ್ಯವಸ್ಥೆಯನ್ನು ಕೈಗೊಳ್ಳುತ್ತಿದ್ದಾರೆ.

ಮೈದಾನದಲ್ಲಿ ನಿಂತ ನೀರು: ಕಳೆದ ಏಳೆಂಟು ದಿನಗಳಿಂದ ತಯಾರಿ ನಡೆದಿದ್ದು, ಸರಿಸುಮಾರು 5 ಲಕ್ಷ ಜನರನ್ನು ಸೇರಿಸುವ ಹಿನ್ನೆಲೆ ಈ ಸ್ಥಳ ಸೂಕ್ತವೆಂದು ಸಂಘಟಕರು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಈಗ ಮಳೆಯ ಪರಿಣಾಮದಿಂದ ಸ್ಥಳ ಅಸ್ತವ್ಯಸ್ತಗೊಂಡು, ಮೈದಾನದಲ್ಲಿ ನೀರು ನಿಲುಗಡೆಯಾಗಿದ್ದು, ಕೆಸರುಮಯವಾಗಿದೆ. ಇದರಿಂದ ಆಯೋಜಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಬಗ್ಗೆ ಸಿಂಧನೂರು ಬಿಜೆಪಿ ಅಭ್ಯರ್ಥಿ ಕೆ ಕರಿಯಪ್ಪ ಅವರು ಮಾತನಾಡಿದ್ದು, ಮಳೆಯಿಂದಾಗಿ ಎದುರಾಗಿರುವ ಈ ಸಮಸ್ಯೆಯನ್ನು ಸರಿಪಡಿಸುವ ಕೆಲಸವನ್ನು ಸಮಾವೇಶದ ಆಯೋಜಕರು ನಿರಂತರವಾಗಿ ನಡೆಸುತ್ತಿದ್ದಾರೆ. ಹೀಗಾಗಿ ಪ್ರಧಾನಿ ಮೋದಿಯವರ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಲಾಗುವುದು. ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಯ ಜನರು ಆಗಮಿಸಲಿದ್ದಾರೆ. ಇದಕ್ಕಾಗಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಳೆಯಿಂದಾಗಿ ಆಗಿರುವ ಎಲ್ಲವನ್ನು ಸರಿಪಡಿಸಲಾಗಿದ್ದು, ಅಗತ್ಯ ಸಿದ್ಧತೆ ಪೂರ್ಣಗೊಳಿಸಿಕೊಳ್ಳುತ್ತೇವೆ. ಎಂತಹ ಮಳೆ ಬಂದರೂ ಈಗ ವೇದಿಕೆಗೆ ಏನೂ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರಿ ಮಳೆಯಿಂದ ಅಮಿತ್​ ಶಾ ಅವರ ರೋಡ್ ಶೋ ರದ್ದು: ಇನ್ನೊಂದೆಡೆ ಧಾರಾಕಾರ ಮಳೆಯಿಂದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರೋಡ್ ಶೋ (ಏಪ್ರಿಲ್​ 21-2023) ರದ್ದಾಗಿತ್ತು. ಅಮಿತ್ ಶಾ ಅವರು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿಳ್ಳಮುನಿಶಾಮಪ್ಪ ಅವರ‌ ಪರ ರೋಡ್ ಶೋ ನಡೆಸಲು ಬಂದಿದ್ದರು.

ಅಂದು ಸಂಜೆ 4.30ಕ್ಕೆ ರೋಡ್ ಶೋ ನಿಗದಿಯಾಗಿತ್ತು. ಆದರೆ, ನಿಗದಿತ ಅವಧಿಗೆ ಅರ್ಧ ಗಂಟೆ ಮುಂಚೆಯೇ ಧಾರಾಕಾರ ಮಳೆ ಸುರಿಯಲಾರಂಭಿಸಿತ್ತು. ಮಳೆ ಕಡಿಮೆಯಾದ ಬಳಿಕ ರೋಡ್ ಶೋ ನಡೆಸಲು ಉದ್ದೇಶಿಸಿದ್ದರೂ ಮಳೆ ನಿಲ್ಲಲಿಲ್ಲ. ಜೊತೆಗೆ ರೋಡ್ ಶೋ ನಡೆಯಬೇಕಿದ್ದ ರಸ್ತೆಯಲ್ಲಿ ನೀರು ನಿಂತು ಕೆಸರಿನಂತಾಗಿತ್ತು.

ಈ ಹಿನ್ನೆಲೆಯಲ್ಲಿ ರೋಡ್ ಶೋ ರದ್ದುಪಡಿಸಲು ಬಿಜೆಪಿ ನಾಯಕರು ತೀರ್ಮಾನಿಸಿದ್ದರು. ಮಳೆಯ ಕಾರಣದಿಂದ ಅಮಿತ್ ಶಾ ಅವರು ವಿಮಾನ ನಿಲ್ದಾಣದಿಂದ ನೇರವಾಗಿ ಬೆಂಗಳೂರಿಗೆ ತೆರಳಿದ್ದರು. ಮಳೆಯ ಕಾರಣ ಕಾರ್ಯಕರ್ತರು ಆಗಮಿಸಲು ತಡವಾಯ್ತು. ಇದರಿಂದ ರೋಡ್ ಷೋ ಮುಂದೂಡಿದ್ದೇವೆ ಎಂದು ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಹೇಳಿದ್ದರು.

ಇದನ್ನೂ ಓದಿ : ಬಿರುಗಾಳಿ ಸಹಿತ ಭಾರಿ ಮಳೆ.. ಅಮಿತ್​ ಶಾ ಅವರ ರೋಡ್ ಶೋ ರದ್ದು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.