ರಾಯಚೂರು : ಮಠಕ್ಕೆ ದಾನಿಗಳು ನೀಡಿದ ಕಾಣಿಕೆಯಿಂದ 20 ಕೋಟಿ ರೂ.ಮೌಲ್ಯದ ಎರಡು ಚಿನ್ನದ ಪಾತ್ರೆಗಳನ್ನು ಮಠದ ಶ್ರೀಗಳು ತಯಾರಿಸಿದ್ದು, ಇದನ್ನು ರಾಯರಿಗೆ ಸಮರ್ಪಣೆ ಮಾಡಿದ್ದಾರೆ.
ಕಲಿಯುಗದ ಕಾಮಧೇನು ಎಂದೆ ಗುರುರಾಯರು ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಮಂತ್ರಾಲಯದಲ್ಲಿ ರಾಯರ 350ನೇ ಆರಾಧನೆ ಮಹೋತ್ಸವ ನಡೆಯುತ್ತಿದೆ. ಆ.21 ರಿಂದ ಆರಂಭವಾದ ರಾಯರ ಆರಾಧನೆ ಮಹೋತ್ಸವ ಆ. 27ರವರೆಗೂ ನಡೆಯಲಿದೆ. ಈ ನಿಟ್ಟಿನಲ್ಲಿ ಮಂತ್ರಾಲಯಕ್ಕೆ ಜನಸಾಗರವೇ ಹರಿದು ಬರುತ್ತಿದೆ.
ಶ್ರೀರಾಘವೇಂದ್ರ ಸ್ವಾಮಿಗಳನ್ನು ಸಾವಿರಾರು ಭಕ್ತ ಸಮೂಹ ಆರಾಧನೆ ಮಾಡುತ್ತಿದೆ. ಸಂಕಷ್ಟಗಳು, ಸಮಸ್ಯೆಗಳು ಎದುರಾದಾಗ ಅದನ್ನು ರಾಯರಲ್ಲಿ ಹೇಳಿಕೊಂಡು ಬೇಡಿಕೆ ಈಡೇರಿದಾಗ ಭಕ್ತ ಸಮೂಹ ಮಠಕ್ಕೆ ಕಾಣಿಕೆ, ದೇಣಿಗೆಯನ್ನು ಸಮರ್ಪಿಸಿದೆ.
ಹೀಗೆ ಮಠಕ್ಕೆ ಹರಿದು ಬಂದ ಕಾಣಿಕೆಯನ್ನು ಸಂಗ್ರಹಿಸಿ ಸುಮಾರು 20 ಕೋಟಿ ರೂ. ಮೌಲ್ಯದ ಎರಡು ಪಾತ್ರೆಗಳನ್ನು ಮಠದ ಪೀಠಾಧಪತಿಗಳು ತಯಾರಿಸಿ, ರಾಯರಿಗೆ ಅರ್ಪಿಸಿದ್ದಾರೆ. ಈ ಎರಡು ಚಿನ್ನದ ಪಾತ್ರೆಗಳನ್ನು ಪಂಚಾಮೃತ ಅಭಿಷೇಕಕ್ಕೆ ಬಳಕೆ ಮಾಡಲು ಶ್ರೀಗಳು ತೀರ್ಮಾನಿಸಿದ್ದಾರೆ.
ಓದಿ: ಸೆ.15ರೊಳಗೆ ಎಲ್ಲ ಶಾಲೆಗಳಿಗೆ ಪಠ್ಯ ಪುಸ್ತಕ ಪೂರೈಕೆಗೆ ಕ್ರಮ: ಸಚಿವ ಬಿ.ಸಿ.ನಾಗೇಶ್