ETV Bharat / state

ಮತ್ತೆ ಮಹಾನಗರಗಳಿಗೆ ವಲಸೆ ಹೊರಟ ಕಾರ್ಮಿಕರು, ಸಾರಿಗೆ ಬಸ್‌ಗಳಿಗೆ ಡಿಮ್ಯಾಂಡ್..

author img

By

Published : Jun 10, 2020, 6:06 PM IST

Updated : Jun 10, 2020, 7:09 PM IST

ಕೆಲವರು ಸ್ವತಃ ವಾಹನಗಳ ಮೂಲಕ ಹೊರಟರೆ ಇನ್ನೂ ಸಾರಿಗೆ ಸಂಸ್ಥೆಯ ಬಸ್‌ಗಳ ಮೂಲಕ ತೆರಳುತ್ತಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಕಳೆದ ಮೇ 20ರಿಂದ ನಿನ್ನೆಯವರೆಗೆ 477 ಬಸ್‌ಗಳು ಬೆಂಗಳೂರಿಗೆ ತೆರಳಿದ್ದು, ಸರಿಸುಮಾರು 10 ಸಾವಿರ ಪ್ರಯಾಣಿಕರು ಪ್ರಯಾಣಿಸಿದ್ದಾರೆಂದು ಅಂದಾಜಿಸಲಾಗಿದೆ.

Demand for migrant workers and transport buses again rachichur
ಮತ್ತೆ ಮಹಾನಗರಗಳಿಗೆ ವಲಸೆ ಹೊರಟ ಕಾರ್ಮಿಕರು, ಸಾರಿಗೆ ಬಸ್ ಗಳಿಗೆ ಡಿಮ್ಯಾಂಡ್

ರಾಯಚೂರು : ಕೊರೊನಾ ಲಾಕ್‌ಡೌನ್ ಸಡಲಿಕೆ ಮಾಡಿರುವುದೇ ತಡ ಕಾರ್ಮಿಕರು ಮತ್ತೆ ವಲಸೆ ತೆರಳುವುದು ಶುರುವಾಗಿದೆ. ಇದರಿಂದಾಗಿ ಸಹಜವಾಗಿಯೇ ಸಾರಿಗೆ ಬಸ್‌ಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ.

ಮತ್ತೆ ಮಹಾನಗರಗಳಿಗೆ ವಲಸೆ ಹೊರಟ ಕಾರ್ಮಿಕರು, ಸಾರಿಗೆ ಬಸ್‌ಗಳಿಗೆ ಡಿಮ್ಯಾಂಡ್..

ಕೊರೊನಾ ಲಾಕ್‌ಡೌನ್‌ನಿಂದಾಗಿ ರಾಯಚೂರು ಜಿಲ್ಲೆಯಿಂದ ತೆರಳಿದ ಸುಮಾರು 60 ಸಾವಿರ ವಲಸೆ ಕಾರ್ಮಿಕರು ವಾಪಸ್ ಆಗಿದ್ದರು. ಇದೀಗ ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಿಕೆ ಜಾರಿ ಬಳಿಕ ಜಿಲ್ಲೆಯ ಕೂಲಿ ಕಾರ್ಮಿಕರು ಮಹಾನಗರಗಳಿಗೆ ವಲಸೆ ಹೊರಟಿದ್ದಾರೆ. ಜಿಲ್ಲೆಯ ಲಿಂಗಸೂಗೂರು, ದೇವದುರ್ಗ, ಸಿಂಧನೂರು, ಮಾನವಿ, ಮಸ್ಕಿ, ಸಿರವಾರ, ರಾಯಚೂರು ತಾಲೂಕುಗಳಿಂದ ಕೂಲಿ ಕಾರ್ಮಿಕರು ವಲಸೆ ಹೋಗುತ್ತಿದ್ದಾರೆ.

demand-for-migrant-workers-and-transport-buses-again-rachichur

ಕೆಲವರು ಸ್ವತಃ ವಾಹನಗಳ ಮೂಲಕ ಹೊರಟರೆ ಇನ್ನೂ ಸಾರಿಗೆ ಸಂಸ್ಥೆಯ ಬಸ್‌ಗಳ ಮೂಲಕ ತೆರಳುತ್ತಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಕಳೆದ ಮೇ 20ರಿಂದ ನಿನ್ನೆಯವರೆಗೆ 477 ಬಸ್‌ಗಳು ಬೆಂಗಳೂರಿಗೆ ತೆರಳಿದ್ದು, ಸರಿಸುಮಾರು 10 ಸಾವಿರ ಪ್ರಯಾಣಿಕರು ಪ್ರಯಾಣಿಸಿದ್ದಾರೆಂದು ಅಂದಾಜಿಸಲಾಗಿದೆ. ಜಿಲ್ಲೆಯ ಆಯಾ‌ ತಾಲೂಕುಗಳಿಂದ ಬಸ್‌‌ಗಳು ಹೋಗುತ್ತಿದ್ದು, ಮೇ 8ರಂದು ಒಂದೇ ದಿನ 43 ಬಸ್‌ಗಳು ರಾಜಧಾನಿಗೆ ತೆರಳಿವೆ. ಈ ಬಸ್‌ಗಳಲ್ಲಿ ಪ್ರಯಾಣಿಸಿರುವವರು ಬಹುತೇಕ ಕೂಲಿ ಕಾರ್ಮಿಕರಾಗಿದ್ದಾರೆ.

ಜಿಲ್ಲೆಯ ಮಹಾನಗರಗಳಿಗೆ ತೆರಳುವ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನಿಗದಿ ಪ್ರಯಾಣಿಕರು ತೆರಳುತ್ತಿದ್ದಾರೆ. ಆದರೆ, ವಾಪಸ್ ಬರುವಾಗ ನಿರೀಕ್ಷೆಯಂತೆ ಪ್ರಯಾಣಿಕರು ಬರುತ್ತಿಲ್ಲ. ಸದ್ಯ ಕೊರೊನಾ ಲಾಕ್‌ಡೌನ್ ಶುರುವಾಗಿನಿಂದ ಈವರೆಗೆ ರಾಯಚೂರು ಜಿಲ್ಲೆಯ ಎನ್‌ಇ‌ಕೆ‌ಎಸ್‌ಆರ್‌ಟಿ ವಿಭಾಗಕ್ಕೆ ಬರೋಬ್ಬರಿ 55 ಕೋಟಿ ರೂ. ನಷ್ಟ ಸಂಭವಿಸಿದೆ. ಸದ್ಯ ಇದೀಗ ಬಸ್ ಸಂಚಾರದಿಂದ ಚೇತರಿಕೊಳ್ಳುವ ನಿರೀಕ್ಷೆಯಲ್ಲಿ ಸಾರಿಗೆ ಇಲಾಖೆಯಿದೆ.

ಕೊರೊನಾ ಲಾಕ್‌ಡೌನ್‌ನಿಂದ ಜಿಲ್ಲೆಯಿಂದ ತೆರಳಿದ ವಲಸೆ ಕಾರ್ಮಿಕರು ಮರಳಿ ಗೂಡು ಸೇರಿದ್ದಾರೆ. ಆದರೆ, ಹೊಟ್ಟೆ ಪಾಡಿಗಾಗಿ ಕೆಲಸ ಅರಿಸಿ ಜಿಲ್ಲೆಯ ಕೂಲಿ ಕಾರ್ಮಿಕರು ಮತ್ತೆ ವಲಸೆ ಶುರು ಮಾಡಿದ್ದರು. ಮಳೆ ನಿಂತರು, ಮಳೆ ಹನಿ ನಿಲ್ಲಲ್ಲ ಎಂಬಂತೆ ವಲಸೆ ಹೋಗುವುದು ನಿಲ್ಲದಂತಾಗಿದೆ. ಇತ್ತ ಸರ್ಕಾರಗಳು ವಲಸೆ ಹೋಗದಂತೆ ಹಲವು ಯೋಜನೆಗಳು ಜಾರಿಗೊಳಿಸಿದರು. ಪರಿಣಾಮಕಾರಿ ಜಾರಿಗೊಳಿಸದೆ ಇರುವುದು ಮೇಲ್ನೋಟಕ್ಕೆ ಕಂಡು‌ ಬರುತ್ತಿದೆ.

Last Updated : Jun 10, 2020, 7:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.