ರಾಯಚೂರು: ಲಿಂಗಸುಗೂರು ಪುರಸಭೆ ವ್ಯಾಪ್ತಿಯಲ್ಲಿ 2ನೇ ದಿನವು ಲಾಕ್ಡೌನ್ ಸಡಿಲಿಕೆ ವಿಸ್ತರಣೆ ಮಾಡುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿದ್ದು ವರ್ತಕರು, ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯನ್ನು ಹಸಿರು ವಲಯ ಎಂದು ಘೋಷಿಸಿ ಮೇ 3ರವರೆಗೆ ಸ್ಟೇಷನರಿ, ಜೆರಾಕ್ಸ್, ಕನ್ನಡಕ ಅಂಗಡಿ, ಹಾರ್ಡ್ವೇರ್, ಫ್ಲೈವುಡ್, ರೈಸ್ಮಿಲ್, ಹಿಟ್ಟಿನ ಗಿರಣಿ, ಆಯಿಲ್ ಮಿಲ್, ಎಲೆಕ್ಟ್ರಿಕ್, ಟಯರ್ ಟ್ಯೂಬ್, ಟೈರ್ ಸೇರಿದಂತೆ ಇತರ ಅಂಗಡಿ ತೆರೆಯಲು ಅನುಮತಿ ನೀಡಿ ಆದೇಶ ಹೊರಡಿಸಿದೆ. ಎರಡನೇ ದಿನವೂ ಸರ್ಕಾರ, ಜಿಲ್ಲಾಧಿಕಾರಿ ಆದೇಶ ಪಾಲನೆ ಆಗಬಹುದು ಎಂದುಕೊಂಡು ನಾಗರಿಕರು ಬೆಳಗಿನ ಜಾವವೇ ಬಹುತೇಕ ಅಂಗಡಿಗಳ ಮುಂದೆ ಕಾದು ಕುಳಿತಿದ್ದರು. ವರ್ತಕರು ಪುರಸಭೆ ಸಿಬ್ಬಂದಿ ಆದೇಶಕ್ಕೆ ಕಾದು ಕುಳಿತರೂ ಅಂಗಡಿ ತೆರೆಯಲು ಅವಕಾಶ ನೀಡದೆ ಹೋದಾಗ ಬೇಸರ ವ್ಯಕ್ತಪಡಿಸಿದರು.
ಇನ್ನು ಲಾಕ್ಡೌನ್ ಸಡಿಲಿಕೆ ಎಂದ ಮಾಹಿತಿ ಮೇರೆಗೆ ಲಿಂಗಸುಗೂರದ ಪ್ರಮುಖ ರಸ್ತೆಗಳು ವಾಹನ, ಜನ ದಟ್ಟಣೆಯಿಂದ ಗಿಜಗುಡುವಂತಾಗಿತ್ತು. ಕೆಲ ವರ್ತಕರು ಬಾಗಿಲು ತೆರೆದು ಕದ್ದುಮುಚ್ಚಿ ವ್ಯವಹಾರ ಮಾಡುವ ಮೂಲಕ ಲಾಕ್ಡೌನ್ ಉಲ್ಲಂಘಿಸಿದ್ದು ಕಂಡು ಬಂತು.