ರಾಯಚೂರು : ಜಿಲ್ಲೆಯಲ್ಲಿ ವರುಣನ ಆರ್ಭಟದಿಂದ ಬೆಳೆ ಹಾನಿಯಾಗುತ್ತಿದ್ರೆ, ಮತ್ತೊಂದು ಕಡೆ ಕೋತಿ ಹಾವಳಿಯಿಂದ ರೈತ ಬೆಳೆದ ಹತ್ತಿ ಬೆಳೆ ನಾಶವಾಗುತ್ತಿದೆ.
ತಾಲೂಕಿನ ಯರಗೇರಾ ಗ್ರಾಮದ ಬಳಿಯ ಸ್ನಾತ್ತಕೋತ್ತರ ಕೇಂದ್ರ ಬಳಿ ರೈತ 20 ಎಕರೆ ಹೊಲದಲ್ಲಿನ ಹತ್ತಿ ಬೆಳೆಯನ್ನು ಕೋತಿಗಳು ನಾಶ ಮಾಡಿವೆ. ರೈತ ಶಿವರಾಜ್ ಕೃಷ್ಣ, ಸವಾರೆಮ್ಮ ಹನುಮಂತಪ್ಪ, ತಿಪ್ಪಯ್ಯ ಹುಲಿಗೆಪ್ಪ, ನರಸಪ್ಪ ಹುಲಿಗೆಪ್ಪ ಹಾಗೂ ನಲ್ಲರೆಡ್ಡಿ ಶಿವಶಂಕರ ರೆಡ್ಡಿ ಎಂಬುವರ ಹತ್ತಿ ಬೆಳೆಯನ್ನು ಕಪಿಗಳು ಹಾಳುಗೆಡವಿವೆ.
ಹಗಲು-ರಾತ್ರಿ ಎನ್ನದೇ ಕಾದರೂ ಸಹ ಕೋತಿಗಳ ಹಿಂಡು ಹೊಲದ ಮೇಲೆ ದಾಳಿ ನಡೆಸಿ ಬೆಳೆ ತಿಂದು ಟವರ್ ಏರಿ ಕುಳಿತುಕೊಳ್ಳುತ್ತಿವೆ. ಬೆಳೆ ನಷ್ಟ ಪರಿಹಾರ ಒದಗಿಸುವ ಜತೆಗೆ ಕೋತಿಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿಯುವಂತೆ ರೈತರು ಒತ್ತಾಯಿಸಿದ್ದಾರೆ.