ರಾಯಚೂರು: ನದಿಯಲ್ಲಿ ನೀರು ಕುಡಿಯಲು ತೆರಳಿದ ಬಾಲಕ ಮೊಸಳೆ ಬಾಯಿಗೆ ಆಹಾರವಾಗಿರುವ ದಾರುಣ ಘಟನೆ ರಾಯಚೂರು ತಾಲೂಕಿನ ಡೊಂಗಾರಾಂಪುರದಲ್ಲಿ ನಡೆದಿದೆ. ಮಲ್ಲಿಕಾರ್ಜುನ (12) ಮೊಸಳೆ ದಾಳಿಗೆ ಬಲಿಯಾದ ಬಾಲಕ ಎಂದು ಗುರುತಿಸಲಾಗಿದೆ.
ಶಾಲೆಗೆ ರಜೆ ಇದ್ದ ಕಾರಣ ಮಲ್ಲಿಕಾರ್ಜುನ ಹಾಗೂ ಆತನ ಸ್ನೇಹಿತರು ದನ ಕಾಯಲು ತೆರಳಿದ್ದಾರೆ. ಈ ವೇಳೆ ಬಾಲಕ ನೀರು ಕುಡಿಯಲು ಕೃಷ್ಣ ನದಿಗೆ ಬದಿದ್ದಾನೆ. ನೀರು ಕುಡಿಯುವ ವೇಳೆ ನದಿಯಲ್ಲಿ ಅಡಗಿದ್ದ ಮೊಸಳೆ ಏಕಾಏಕಿ ಬಾಲಕನ ಮೇಲೆ ದಾಳಿ ನಡೆಸಿದೆ. ಬಳಿಕ ಆತನನ್ನು ನೀರಿನೊಳಗೆ ಎಳೆದೊಯ್ದಿದೆ. ಘಟನೆ ಬಳಿಕ ಗ್ರಾಮಸ್ಥರು ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದು, ಇಂದು ಬೆಳಗ್ಗೆ ಡಿ.ರಾಂಪುರ ಬಳಿ ಬಾಲಕನ ತಲೆ ಭಾಗ ಮಾತ್ರ ಪತ್ತೆಯಾಗಿದೆ.
ಘಟನೆ ಸಂಬಂಧ ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![Crocodile attacks and killed 12 year child in Raichur krishna river](https://etvbharatimages.akamaized.net/etvbharat/prod-images/kn-rcr-02-moosalle-dalli-photo3-ka10035_03122020082538_0312f_1606964138_874.jpeg)