ರಾಯಚೂರು: ಕೊಳಚೆ ನೀರು ಶುದ್ಧೀಕರಣ ಘಟಕದಲ್ಲಿ ಮೊಸಳೆಯಂದು ಕಾಣಿಸಿಕೊಂಡು ಸ್ಥಳೀಯ ಜನರಲ್ಲಿ ಆತಂಕ ಮೂಡಿಸಿರುವ ಘಟನೆ ರಾಯಚೂರಿನ ಹೊಸೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ರಾಯಚೂರು ಹೊರವಲಯದಲ್ಲಿ ನಗರಸಭೆ ನಿರ್ವಹಣೆ ಮಾಡುವ ಕೊಳಚೆ ಶುದ್ಧೀಕರಣ (ಎಸ್‌ಟಿ) ಘಟಕದಲ್ಲಿ ಕಳೆದ 20 ದಿನಗಳಿಂದ ನೀರಿನಲ್ಲಿ ಮೊಸಳೆ ಕಾಣಿಸಿಕೊಂಡಿದ್ದು, ಶುದ್ಧೀಕರಣ ಘಟಕದಲ್ಲಿ ನಿತ್ಯ ಓಡಾಡುತ್ತಿದೆ. ಮೊಸಳೆ ಹೆಜ್ಜೆ ಗುರುತು ಸಹ ಪತ್ತೆಯಾಗಿದೆ. ಇದರಿಂದ ಹೊಸೂರು, ರಾಂಪುರ ಹಾಗೂ ಸುತ್ತಮುತ್ತಲಿನ ಹೊಲ-ಗದ್ದೆಗಳಲ್ಲಿ ಕೆಲಸ ಮಾಡುವ ನಾಗರಿಕರು ಆತಂಕಕ್ಕೊಳಗಾಗಿದ್ದಾರೆ.
ಮೊಸಳೆಯನ್ನ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡುವಂತೆ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಇದೂವರೆಗೆ ಕ್ರಮ ಕೈಗೊಳ್ಳದೇ ಇರುವುದು ಸ್ಥಳೀಯರಲ್ಲಿ ಆಕ್ರೋಶ ಉಂಟಾಗಿದೆ.