ರಾಯಚೂರು: ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಹುಂಡಿ ಎಣಿಕೆ ಮಾಡಲಾಗಿದ್ದು, ಕಳೆದ 36 ದಿನಗಳ ಅವಧಿಯಲ್ಲಿ ಹುಂಡಿಗೆ ಜಮೆಯಾದ ಹಣ ಎಣಿಕೆ ಕಾರ್ಯವನ್ನು ಇಂದು ಶ್ರೀ ಮಠದಲ್ಲಿ ಮಾಡಲಾಗಿದೆ.
ತುಂಗಾತೀರದಲ್ಲಿ ನೆಲೆಸಿರುವ ಕಲಿಯುಗದ ಕಾಮಧೇನು, ಭಕ್ತರ ಕಲ್ಪವೃಕ್ಷ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನಕ್ಕಾಗಿ ದೇಶದ ಮೂಲೆ ಮೂಲೆಗಳಿಂದ ದಿನವು ಸಾವಿರಾರು ಜನ ಶ್ರೀಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆಯುತ್ತಾರೆ. ಅಲ್ಲದೇ ಶ್ರೀಮಠಕ್ಕೆ ಬರುವಂತಹ ಭಕ್ತರು ಕಾಣಿಕೆ ಮುಡುಪುಗಳನ್ನೂ ಅರ್ಪಿಸುತ್ತಾರೆ.
ಹೀಗೆ ಕಳೆದ 36 ದಿನಗಳಲ್ಲಿ ದೇವಸ್ಥಾನಕ್ಕೆ ಬಂದಂತಹ ಭಕ್ತರಿಂದ ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆಯ ಹಣವನ್ನು ಇಂದು ಎಣಿಕೆ ಮಾಡಲಾಗಿದ್ದು, 3,13,33,093 ರೂ. ಹಣ ಹುಂಡಿಯಲ್ಲಿ ಸಂಗ್ರಹವಾಗಿದೆ ಎಂದು ಶ್ರೀಮಠದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು, ಹುಂಡಿ ಎಣಿಕೆ ಕಾರ್ಯದಲ್ಲಿ ನೂರಾರು ಸ್ವಯಂ ಸೇವಕರು ಭಾಗಿಯಾಗಿದ್ದರು.
ಇದನ್ನೂ ಓದಿ: 36 ದಿನಗಳಲ್ಲೇ ಮಲೆಮಹದೇಶ್ವರನಿಗೆ ಹರಿದುಬಂತು ಕೋಟ್ಯಂತರ ಕಾಣಿಕೆ