ರಾಯಚೂರು: ಜಿಲ್ಲೆಯಲ್ಲಿಂದು 120 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,822ಕ್ಕೆ ಏರಿಕೆಯಾಗಿದೆ.
ರಾಯಚೂರು ತಾಲೂಕಿನಲ್ಲಿ -80, ಮಾನವಿ -31, ಲಿಂಗಸೂಗೂರು- 2, ದೇವದುರ್ಗ-5, ಸಿಂಧನೂರು ತಾಲೂಕಿನ ಇಬ್ಬರು ಸೇರಿ ಒಟ್ಟು 120 ಮಂದಿಗೆ ಕೊರೊನಾ ಸೋಂಕು ವಕ್ಕರಿಸಿದೆ.
ಈವರೆಗೆ ಪತ್ತೆಯಾಗಿರುವ ಸೋಂಕಿತರ ಪೈಕಿ 958 ಜನರು ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 844 ಸಕ್ರಿಯ ಪ್ರಕರಣಗಳಿವೆ.