ETV Bharat / state

ಬಿಸಿಲೂರಿಗೆ ಅಂಟಿದ ‘ಮಹಾ’ ಸೋಂಕು : ರಾಯಚೂರಿನಲ್ಲಿ 15 ಕೊರೊನಾ ಪಾಸಿಟಿವ್ - Raichuru Corona news

ನಿನ್ನೆ ಬಂದಿರುವ ಪ್ರಯೋಗಾಲಯದ ವರದಿಯಲ್ಲಿ 15 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ರಾಯಚೂರಿನಲ್ಲಿ 15 ಕೊರೊನಾ ಪಾಸಿಟಿವ್
ರಾಯಚೂರಿನಲ್ಲಿ 15 ಕೊರೊನಾ ಪಾಸಿಟಿವ್
author img

By

Published : Jun 21, 2020, 2:40 AM IST

ರಾಯಚೂರು : ಜಿಲ್ಲೆಯಲ್ಲಿ ನಿನ್ನೆ ಒಂದೇ 15 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಜಿಲ್ಲೆಯ ಸೋಂಕಿತರ ಸಂಖ್ಯೆ 429 ಕ್ಕೆ ಏರಿಕೆಯಾಗಿದೆ. ಜಿಲ್ಲೆಗೆ ಮರಳಿದ 14 ವಲಸೆ ಕಾರ್ಮಿಕರಲ್ಲಿ ಸೋಂಕು ದೃಢಪಟ್ಟಿದ್ದು, ಒಂದು ಸಾರಿ(SARI) ಪ್ರಕರಣ ಪತ್ತೆಯಾಗಿದೆ.

ಸೋಂಕಿತರನ್ನ ಓಪೆಕ್ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ. ನಿನ್ನೆ ಪತ್ತೆಯಾಗಿರುವ 15 ಜನರ ಪೈಕಿ ಮಹಾರಾಷ್ಟ್ರದಿಂದ ಮರಳಿದ 14 ವಲಸೆ ಕಾರ್ಮಿಕರಿದ್ದಾರೆ. ಜಿಲ್ಲೆಗೆ ಬಂದ ಬಳಿಕ ಇವರ ಗಂಟಲು ದ್ರವವನ್ನ ಕೊರೊನಾ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಪ್ರಯೋಗಾಲಯದ ವರದಿಯಲ್ಲಿ 14 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಅಲ್ಲದೇ ಪಿ-8663, 35 ವರ್ಷದ ಮಹಿಳೆ‌ಯಲ್ಲಿ ಸೋಂಕು ಕಂಡು ಬಂದಿದ್ದು, ಇದು ಸಾರಿ ಪ್ರಕರಣವೆಂದು ಗುರುತಿಸಲಾಗಿದೆ.

ಜಿಲ್ಲೆಯಲ್ಲಿ ಇದುವರೆಗೂ 429 ಜನರಲ್ಲಿ ಸೋಂಕು ಕಂಡುಬಂದಿದೆ. ಇವರಲ್ಲಿ 237 ಜನರು ಗುಣಮುಖವಾಗಿ ಬಿಡುಗಡೆ‌ ಹೊಂದಿದ್ದು, ಇನ್ನುಳಿದ 190 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.