ರಾಯಚೂರು : ಜಿಲ್ಲೆಯ ಲಿಂಗಸುಗೂರು ತಾಲೂಕಿನ ಬಹುತೇಕ ರೇಷ್ಮೆ ಬೆಳೆಗಾರ ರೈತರು ಕೊರೊನಾ ಕರಿನೆರಳಿನ ಸಂಕಷ್ಟಕ್ಕೆ ನಲುಗಿದ್ದಾರೆ. ನಿರೀಕ್ಷಿತ ದರ ಸಿಗದೇ ಕಂಗಾಲಾಗಿದ್ದಾರೆ.
ತಾಲ್ಲೂಕಿನಲ್ಲಿ 390 ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ 400 ರೈತರು ರೇಷ್ಮೆ ಬೆಳೆ ಬೆಳೆಯುವ ಮೂಲಕ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ರೇಷ್ಮೆ ಬೆಳೆಯುವ ಕೀರ್ತಿ ಉಮ್ಮಡಿಸಿದ್ದರು. ಈಗಾಗಲೆ ಭಾಗಶಃ ರೈತರು ಬೆಳೆ ಪಡೆದುಕೊಂಡಿದ್ದು, ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ರೇಷ್ಮೆಗೂಡು ರೂ. 510 ರಿಂದ ರೂ 560 ವರೆಗೆ ಮಾರಾಟ ಮಾಡಿದ್ದಾರೆ.
ಕೊರೊನಾ ಭೀತಿಯಿಂದ ಮಾರುಕಟ್ಟೆ ಬಂದಾಗಿದ್ದು, ಸ್ಥಳೀಯ ಅಧಿಕಾರಿಗಳ ಸಹಕಾರದಿಂದ ಪರವಾನಗಿ ಪಡೆದು ಹೋಗುವ ರೈತರ ಮಾಲನ್ನು ಗೂಡು ಖರೀದಿ ಮಾಡುವ ವ್ಯಾಪಾರಿಗಳು ರೂ. 160 ರಿಂದ ರೂ. 220 ವರೆಗೆ ಖರೀದಿ ಮಾಡುತ್ತಿರುವುದು ನಷ್ಟ ಅನುಭವಿಸುವಂತಾಗಿದೆ. ಮಾರುಕಟ್ಟೆ ಬಂದ್ ಅಗಿರುವುದನ್ನೇ ಬಂಡವಾಳ ಮಾಡಿಕೊಂಡ ಡೋಲರ್ಸ್ ರೈತರನ್ನೇ ಬ್ಲಾಕ್ಮೇಲ್ ಮಾಡುತ್ತಿದ್ದು, ಸರ್ಕಾರ ರೈತರ ನೆರವಿಗೆ ಮುಂದೆ ಬರಬೇಕು ಎಂದು ರೇಷ್ಮೆ ಬೆಳೆಗಾರರು ಆಗ್ರಹಪಡಿಸಿದ್ದಾರೆ.