ರಾಯಚೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣಾ ಅಭಿಯಾನಕ್ಕೆ ರಾಯಚೂರಿನಲ್ಲಿ ನಗರದ ಕಿಲ್ಲೇ ಬೃಹನ್ಮಠದ ಪೀಠಾಧಿಪತಿ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣಾ ಅಭಿಯಾನ ಇಂದಿನಿಂದ ಆರಂಭವಾಗಿದ್ದು, ಸಾರ್ವಜನಿಕರು ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಬಹುದಾಗಿದೆ. ಈ ವೇಳೆ ಮಾತನಾಡಿದ ಕಿಲ್ಲೇ ಮಠದ ಶ್ರೀಗಳು, ಸಾಕಷ್ಟು ವರ್ಷಗಳ ಹೋರಾಟದ ಫಲವಾಗಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಇದಕ್ಕೆ ಜಾತಿ-ಮತ, ಪಂಥ ಎನ್ನುವ ಭೇದ ಭಾವ ಯಾವುದೂ ತಡೆಯಾಗದೆ ತನು-ಮನ-ಧನವನ್ನು ಸಮರ್ಪಿಸಬೇಕು ಎಂದರು.
ಅಭಿಯಾನಕ್ಕೂ ಮುನ್ನ ನಗರದ ರೈಲ್ವೆ ನಿಲ್ದಾಣ ರಸ್ತೆ ಸಮೀಪವಿರುವ ರಾಮಮಂದಿರದಲ್ಲಿ ವಿಶೇಷ ಪೂಜೆ ನೆರವೇರಿತು.