ರಾಯಚೂರು: ನಾರಾಯಣಪುರ ಬಲದಂಡೆ ನಾಲೆ ಯೋಜನೆ(ಎನ್‌ಆರ್‌ಬಿಸಿ) 5ಎ ಕಾಲುವೆ ನಿರ್ಮಾಣ ವಿಚಾರವಾಗಿ ಸರ್ಕಾರವು ತಾಂತ್ರಿಕ ತಜ್ಞರ ಸಮಿತಿಯನ್ನು ನೇಮಕ ಮಾಡಲು ಅನುಮೋದಿಸಿದೆ.

ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ಹೊರವಲಯದಲ್ಲಿ ಎನ್‌ಆರ್‌ಬಿಸಿ 5ಎ ಕಾಲುವೆ ನಿರ್ಮಾಣ ಹೋರಾಟ ಸಮಿತಿಯಿಂದ ರೈತರು ಧರಣಿ ನಡೆಸುತ್ತಿದ್ದಾರೆ. ಸರ್ಕಾರ ಕಾಲುವೆ ನಿರ್ಮಾಣ ವಿಚಾರಕ್ಕಾಗಿ ನಿವೃತ್ತ ವ್ಯವಸ್ಥಾಪಕ ಕ್ಯಾಪ್ಟನ್ ರಾಜಾರಾವ್ ಅಧ್ಯಕ್ಷರನ್ನು ನೇಮಿಸಿ ಇನ್ನುಳಿದಂತೆ ಸದಸ್ಯರು ಹಾಗೂ ಮೂವರು ರೈತರು, ವಿಶೇಷ ಆಹ್ವಾನಿತರ ಸಮಿತಿ ರಚಿಸುವ ಮೂಲಕ ಅನುಮೋದಿಸಿದೆ.
ಈ ಸುದ್ದಿಯನ್ನೂ ಓದಿ: ಆಮೆಗತಿಯಲ್ಲಿ ಸಾಗುತ್ತಿರುವ ಸಿಸಿ ರಸ್ತೆ ಕಾಮಗಾರಿ.. ಆಕ್ರೋಶ ವ್ಯಕ್ತಪಡಿಸುತ್ತಿರುವ ಚಿತ್ರದುರ್ಗ ಜನತೆ
ಎನ್‌ಆರ್‌ಬಿಸಿ 5ಎ ಕಾಲುವೆ ನಿರ್ಮಿಸಿದರೆ ಮಸ್ಕಿ ತಾಲೂಕಿನ ಸರಿಸುಮಾರು 58 ಹಳ್ಳಿಗಳಿಗೆ ಯೋಜನೆ ಲಾಭವಾಗಲಿದೆ. ಈ ಮೂಲಕ ರೈತರ ವ್ಯವಸಾಯಕ್ಕೆ ಅನುಕೂಲವಾಗಲಿದೆ. ಕಾಲುವೆ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಆದರೆ ಈ ಭಾಗದ ಚುನಾಯಿತ ಸರ್ಕಾರ, ಶಾಸಕರ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಇದು ಸಾಧ್ಯವಾಗಿಲ್ಲ. ಇದೀಗ ಈ ನಿರ್ಲಕ್ಷ್ಯವನ್ನು ಖಂಡಿಸಿ ರೈತರು ನಿರಂತರ ಧರಣಿ ನಡೆಸುತ್ತಿದ್ದಾರೆ