ETV Bharat / state

ಕಾಂಗ್ರೆಸ್​ನವರಿಗೆ ರಾಷ್ಟ್ರಪ್ರಜ್ಞೆ ಇಲ್ಲ.. ಆರಗ ಜ್ಞಾನೇಂದ್ರ

author img

By

Published : Aug 13, 2022, 5:37 PM IST

ಪ್ರಿಯಾಂಕ್​ ಖರ್ಗೆ ಪ್ರಚಾರ ಖರ್ಗೆಯಾಗಿದ್ದಾರೆ. ಪ್ರಚಾರಕ್ಕಾಗಿ ಏನೇನೊ ಮಾತನಾಡುತ್ತಾರೆ. ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಸಚಿವ ಆರಗ ಜ್ಞಾನೇಂದ್ರ.

Home Minister Araga Jnanendra talked to media
ಗೃಹ ಸಚಿವ ಆರಗ ಜ್ಞಾನೇಂದ್ರ

ರಾಯಚೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾಗೂ ಕಾಂಗ್ರೆಸ್​ನವರಿಗೆ ನಾಡಿನ ಪ್ರಜ್ಞೆ, ರಾಷ್ಟ್ರೀಯ ಪ್ರಜ್ಞೆ ಇಲ್ಲವೆಂದು ಗೃಹ‌ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಮಂತ್ರಾಲಯದಲ್ಲಿ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಎಲ್ಲದರ ಬಗ್ಗೆ ನಿಕೃಷ್ಟವಾಗಿ ಮಾತನಾಡುವುದು ಸಿದ್ದರಾಮಯ್ಯನವರ ಚಾಳಿ. ಕಾಂಗ್ರೆಸ್​ನವರು ಧರ್ಮದ ಆಧಾರದ ಮೇಲೆ ದೇಶವನ್ನು ಒಡೆದಿದ್ದಾರೆ. ತಿರಂಗಾ ರಾಷ್ಟ್ರೀಯ ಭಾವನೆ ಮೂಡಿಸುತ್ತದೆ. ಎಲ್ಲೆಡೆ ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ. ಆರ್​ಎಸ್​ಎಸ್​ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್​ನಿಂದ ಪಾಠ ಕಲಿಯುವಂತದ್ದು ಏನೂ ಇಲ್ಲ. ನಮ್ಮನ್ನೆಲ್ಲ ಆರ್​ಎಸ್​ಎಸ್​ ಶಾಖೆಯಲ್ಲೇ ಸಂಸ್ಕಾರ ತುಂಬಿ ದೇಶ ಸೇವೆಗೆ ಬಿಟ್ಟಿದ್ದಾರೆ ಎಂದರು.

ಸರ್ಕಾರದಲ್ಲಿ ಉದ್ಯೋಗ ಮಾಡಬೇಕಾದರೆ ಮಂಚ ಏರಬೇಕು ಎನ್ನುವ ಪ್ರಿಯಾಂಕ್​ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ‌ಪ್ರಿಯಾಂಕ್​ ಖರ್ಗೆ ಪ್ರಚಾರ ಖರ್ಗೆಯಾಗಿದ್ದಾರೆ. ಪ್ರಚಾರಕ್ಕಾಗಿ ಏನೇನೊ ಮಾತನಾಡುತ್ತಾರೆ. ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಪಿಎಸ್​ಐ ಹಗರಣದಲ್ಲಿ ತಮಗೆ ಏನೋ ಗೊತ್ತಿದೆ ಎಂದರು. ದಾಖಲಾತಿ ಕೇಳಿದರೆ ಓಡಿ ಹೋದರು ಎಂದು ವ್ಯಂಗ್ಯವಾಡಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿದರು

ಮಂಗಳೂರು ಗಲಾಟೆ ಪ್ರಕರಣ ಸಂಬಂಧ ಮೂರು ಜನ ತಪ್ಪಿಸಿಕೊಂಡವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆದಿದೆ. ಇದರ ಹಿಂದಿನ ಮತಾಂಧ ಸಂಘಟನೆಗಳನ್ನು ಎನ್​ಐಎ ವಿಚಾರಣೆ ಮಾಡುತ್ತಿದೆ. ಈದ್ಗಾ ಮೈದಾನ ಕಂದಾಯ ಇಲಾಖೆ ಆಸ್ತಿ ಅಂತ ಹೇಳಿಯಾಗಿದೆ. ಕಂದಾಯ ಇಲಾಖೆ ಏನು ಹೇಳುತ್ತದೆಯೋ ಅದಕ್ಕೆ ನಮ್ಮ ಇಲಾಖೆ ಶಾಂತಿ ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡುತ್ತೆ ಎಂದರು.

ಮಧ್ಯಾರಾಧನೆ ಹಿನ್ನೆಲೆಯಲ್ಲಿ, ತಿರುಮಲ ತಿರುಪತಿ ದೇವಾಲಯದಿಂದ ಬಂದ ಶೇಷವಸ್ತ್ರವನ್ನು ಸ್ವೀಕರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಶೇಷವಸ್ತ್ರವನ್ನು ತಮ್ಮ ಶಿರದ ಮೇಲೆ ಇರಿಸಿಕೊಂಡು ಬಳಿಕ ಶ್ರೀಮಠ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರಿಗೆ ಹಸ್ತಾಂತರಿಸಿದರು.

ಇದನ್ನೂ ಓದಿ : ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ: ಸಮಾಜ ಇದನ್ನು ಖಂಡಿಸುತ್ತಿದೆ ಎಂದ ಪ್ರಹ್ಲಾದ್ ಜೋಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.