ETV Bharat / state

ಒಪೆಕ್​ಗೆ ಹಂದಿಗಳು ನುಗ್ಗಿದ ಪ್ರಕರಣ: ಮಾಲೀಕನ ವಿರುದ್ಧ ದೂರು - Raichur Kovid Hospital

ರಾಯಚೂರು ಜಿಲ್ಲೆಯಲ್ಲಿ ಕೊರೊನಾ ರೋಗಿಗಳಿಗಾಗಿ ಇರುವ ಒಪೆಕ್​ ಆಸ್ಪತ್ರೆ ಆವರಣದಲ್ಲಿ ಹಂದಿಗಳು ಕಾಣಿಸಿಕೊಂಡ ಘಟನೆಗೆ ಸಂಬಂಧಪಟ್ಟಂತೆ ಹಂದಿ ಮಾಲೀಕರ ವಿರುದ್ಧ ದೂರು ದಾಖಲಾಗಿದೆ.

dsd
ಹಂದಿ ಸಾಕಾಣಿಕೆದಾರರ ವಿರುದ್ಧ ದೂರು
author img

By

Published : Aug 30, 2020, 1:02 PM IST

ರಾಯಚೂರು: ಜಿಲ್ಲಾ ಕೊರೊನಾ ಆಸ್ಪತ್ರೆ ಒಪೆಕ್​ನಲ್ಲಿ ತ್ಯಾಜ್ಯ ವಸ್ತು ಸಂಗ್ರಹಾಲಯದಲ್ಲಿ ಹಂದಿಗಳು ಕಾಣಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂದಿ ಸಾಕಣಿಕೆದಾರರ ವಿರುದ್ಧ ನಗರದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳೆದ ವಾರ ಜಿಲ್ಲಾ ಒಪೆಕ್ ಆಸ್ಪತ್ರೆಯ G-7ವಾರ್ಡಿನಲ್ಲಿ ಕಸ ಶೇಖರಣೆ ಸ್ಥಳದಲ್ಲಿ ಹಂದಿಗಳು ಕಾಣಿಸಿಕೊಂಡಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಸ್ಯಾನಿಟರಿ ಇನ್ಸ್‌ಪೆಕ್ಟರ್ ನಾಗಪ್ಪ ಅವರು ಹಂದಿ ಸಾಕಾಣಿಕೆದಾರ ನರಸಿಂಹಲು (30) ಎಂಬಾತನ ವಿರುದ್ಧ ದೂರು ಕೊಟ್ಟಿದ್ದಾರೆ.

ದೂರಿನಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಂಭವವಿದ್ದು, ನಗರಸಭೆಯಿಂದ ಆಸ್ಪತ್ರೆ ಆವರಣದಲ್ಲಿ ಹಂದಿಗಳನ್ನು ಬಿಡಬಾರದು ಎಂದು ಎಚ್ಚರಿಕೆ ನೀಡಲಾಗಿತ್ತು. ಆದರೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಈ ಘಟನೆ ಸಂಭವಿಸಿದೆ. ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡಲು ಇರುವ ಆಸ್ಪತ್ರೆ ಆವರಣದಲ್ಲಿ ಹಂದಿಗಳನ್ನು ಬಿಟ್ಟಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.