ETV Bharat / state

ವಾಟ್ಸಪ್​​ನಲ್ಲಿ ಕೋಮು ಪ್ರಚೋದನೆ ವಿಡಿಯೋ.. ಇಬ್ಬರ ಬಂಧನ

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಹಾಲಭಾವಿ ಬಳಿ ನಾರಾಯಣಪುರ ಬಲದಂಡೆ ಆಧುನೀಕರಣ ಕಾಮಗಾರಿ ಕೆಲಸಕ್ಕೆ ಬಂದಿರುವ ಇಬ್ಬರು ಯುವಕರು ವಾಟ್ಸಪ್ ಸ್ಟೇಟಸ್ ನಲ್ಲಿ ಕೋಮು ಪ್ರಚೋದನೆ ಮಾಡುವಂತ ವಿಡಿಯೋ ತುಣುಕು ಹಾಕಿದ್ದಾರೆ.

ವಾಟ್ಸಪ್ ನಲ್ಲಿ ಕೋಮು ಪ್ರಚೋದನೆ ವಿಡಿಯೋ, ಇಬ್ಬರು ಯುವಕರ ಬಂಧನ

author img

By

Published : Aug 5, 2020, 9:03 PM IST

ಲಿಂಗಸುಗೂರು: ದೇಶಾದ್ಯಂತ ಅಯೋಧ್ಯೆ ರಾಮಮಂದಿರ ಭೂಮಿ ಪೂಜೆಗೆ ಸಂಬಂಧಿಸಿದಂತೆ ಪೂಜೆ-ಪುನಸ್ಕಾರ, ರಾಮ ನಾಮ ಜಪ ನಡೆಯುತ್ತಿದ್ದಾಗ ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆ ತರುವಂಥ ಕೃತ್ಯ ಜರುಗಿದ ಬಗ್ಗೆ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಹಾಲಭಾವಿ ಬಳಿ ನಾರಾಯಣಪುರ ಬಲದಂಡೆ ಆಧುನೀಕರಣ ಕಾಮಗಾರಿ ಕೆಲಸಕ್ಕೆ ಬಂದಿರುವ ಇಬ್ಬರು ಯುವಕರು ವಾಟ್ಸ್​ಪ್​ ಸ್ಟೇಟಸ್​ನಲ್ಲಿ ಕೋಮು ಪ್ರಚೋದನೆ ಮಾಡುವಂಥ ವಿಡಿಯೋ ತುಣುಕು ಹಾಕಿದ್ದಾರೆ. ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆಯೇ ಯುವಕರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಯಾದಗಿರಿ ಜಿಲ್ಲೆ ಕಾಂಡಿಕೇರಿ ಗ್ರಾಮದ ಚಿನ್ನುಮಿಯಾ ಬಳಿಗೇರ ಹಾಗೂ ಕಲಬುರ್ಗಿ ಜಿಲ್ಲೆ ಕೊರಳ್ಳಿ ಗ್ರಾಮದ ಬಾಬು ಮುಲ್ಲಾ ಎಂದು ಗುರುತಿಸಲಾಗಿದೆ.

ವಿಡಿಯೋ ಕ್ಲಿಪ್ ನಲ್ಲಿ ವಿಶ್ವ ಹಿಂದೂ ಪರಿಷತ್​ನವರೆ, ಭಜರಂಗದಳದವರೇ, ನರೇಂದ್ರ ಮೋದಿಯವರೇ ನೀವು ಕೇಳಿಸಿಕೊಳ್ಳಿ.. ಈ ದೇಶ ನಿಮ್ಮದಲ್ಲ.. ನೀವು ಒಂದು ಮಸೀದಿ ಕೆಡವಿದರೆ, ನಾವು ಸಾವಿರ ದೇವಸ್ಥಾನಗಳನ್ನು ಕೆಡವಿ ಮಸೀದಿ ಕಟ್ಟುತ್ತೇವೆ ಎಂದು ಹೇಳಲಾಗಿದೆ. ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆ ತರುವಂಥ ಕೃತ್ಯದ ಆರೋಪದ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.

ತಾಲ್ಲೂಕಿನಾದ್ಯಂತ ರಾಮನಾಮ ಜಪ ನಡೆಯುತ್ತಿದ್ದಾಗ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ವಹಿಸಿ ಆರೋಪಿಗಳನ್ನು ಬಂಧಿಸಿ ಆಗಬಹುದಾದ ಅಪರಾಧ ಕೃತ್ಯ ತಡೆಯುವಲ್ಲಿ ಯಶಸ್ವಿಯಾಗಿರುವ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.