ETV Bharat / state

ಕಲ್ಲಿದ್ದಲು ಕೊರತೆ: ಆರ್​ಟಿಪಿಎಸ್​ನ ಐದು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ - ರಾಯಚೂರು ಲೇಟೆಸ್ಟ್ ನ್ಯೂಸ್

ಕಲ್ಲಿದ್ದಲು ಸಮಸ್ಯೆಯಿಂದಾಗಿ ಆರ್​ಟಿಪಿಎಸ್​ನ ಐದು ಘಟಕಗಳು ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ.

rtps
ಆರ್​ಟಿಪಿಎಸ್​
author img

By

Published : Oct 12, 2021, 7:45 AM IST

Updated : Oct 12, 2021, 9:50 AM IST

ರಾಯಚೂರು: ಬೃಹತ್ ಶಾಖೋತ್ಪನ್ನ ಕೇಂದ್ರ (RTPS)ದ ಐದು ಘಟಕಗಳು ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ.

ತಾಲೂಕಿನ ಶಕ್ತಿನಗರದ ಆರ್‌ಟಿಪಿಎಸ್ ಕೇಂದ್ರದಲ್ಲಿ ಕಲ್ಲಿದ್ದಲು ಸಮಸ್ಯೆ ಉಲ್ಬಣಗೊಂಡಿದೆ. ಹೀಗಾಗಿ, ನಿನ್ನೆ 4 ಘಟಕಗಳನ್ನು ಸ್ಥಗಿತಗೊಳಿಸಿ, ಇನ್ನುಳಿದ ನಾಲ್ಕು ಘಟಕಗಳಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು.

ಆದರೆ, ಕಲ್ಲಿದ್ದಲಿನ ಕೊರತೆ ಹೆಚ್ಚಾಗಿದ್ದರಿಂದ ವಿದ್ಯುತ್ ಉತ್ಪಾದಿಸುತ್ತಿದ್ದ ನಾಲ್ಕು ಘಟಕಗಳ ಪೈಕಿ ಮತ್ತೊಂದನ್ನು ಸ್ಥಗಿತಗೊಳಿಸಲಾಗಿದೆ. ಆರ್​ಟಿಪಿಎಸ್​ನಲ್ಲಿ ಒಟ್ಟು 8 ಘಟಕಗಳಿವೆ. ಇವುಗಳು 1760 ಮೆಗಾ ವ್ಯಾಟ್(MW) ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ.

ಈಗ ಎಂಟು ಘಟಕಗಳ ಪೈಕಿ 2, 4, 6 ಘಟಕಗಳಿಂದ 490 ಮೆಗಾ ವ್ಯಾಟ್​ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

ಇದನ್ನೂ ಓದಿ: ಕಲ್ಲಿದ್ದಲು ಕೊರತೆ: ನಾಳೆಯಿಂದ ಕುಡಿತಿನಿ ಬಿಟಿಪಿಎಸ್ ಸ್ಥಗಿತ ಸಾಧ್ಯತೆ

ಇನ್ನುಳಿದ 1,3,5,7,8 ಘಟಕಗಳಲ್ಲಿ ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಅಭಾವ ಎದುರಾಗುವ ಸಾಧ್ಯತೆಯಿದೆ.

Last Updated : Oct 12, 2021, 9:50 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.