ರಾಯಚೂರು: ಜಿಲ್ಲೆಗೆ ನಾಳೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗಮಿಸಿಲಿದ್ದು, ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ.
ಸಿಎಂ ವಾಸ್ತವ್ಯ ಹೂಡಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ಬಣ್ಣ ಬಳಿದು, ಸುಂದರವಾದ ಚಿತ್ರಗಳನ್ನು ಚಿತ್ರಿಸುವ ಮೂಲಕ ಅಚ್ಚುಕಟ್ಟು ಮಾಡಲಾಗಿದೆ. ಆದರೆ ಈ ಶಾಲೆಯಲ್ಲಿ ಮೊದಲು ಇಷ್ಟೊಂದು ಸೌರ್ಕರ್ಯ ಇರಲಿಲ್ಲ.
1ರಿಂದ 7ನೇ ತರಗತಿವರೆಗಿನ ವಿದ್ಯಾಭ್ಯಾಸಕ್ಕೆ ಅವಕಾಶವಿರುವ ಶಾಲೆಯಲ್ಲಿ 147 ವಿದ್ಯಾರ್ಥಿಗಳಿದ್ದಾರೆ. 3 ಕಾಯಂ ಶಿಕ್ಷಕರು ಮತ್ತು ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ಈ ಮೊದಲು ಶಾಲೆಗೆ ಹೇಳಿಕೊಳ್ಳುವಂತೆ ಮೂಲಭೂತ ಸೌಕರ್ಯಗಳು ಇರಲಿಲ್ಲ.
ನಾಳೆ ಸಿಎಂ ಆಗಮಿಸುತ್ತಿರುವ ಹಿನ್ನೆಲೆ ಶಾಲೆಗೆ ಪ್ರತ್ಯೇಕ ಶೌಚಾಲಯ, ಸ್ನಾನದ ಕೋಣೆ ನಿರ್ಮಿಸಲಾಗಿದೆ. ರಾತ್ರಿ ಮಲಗುವ ಕೋಣೆಯಲ್ಲಿ ಲೈಟ್, ಫ್ಯಾನ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ವಿದ್ಯಾರ್ಥಿಗಳಿಗೆ ಆಟ ಮೈದಾನ, ಕಾಂಪೌಂಡ್ ನಿರ್ಮಿಸಲಾಗಿದೆ. ಶಾಲೆಗೆ ಅಂದ ಹೆಚ್ಚಿಸಲು ಭಿತ್ತಿ ಚಿತ್ರಗಳನ್ನು ಕೂಡ ಬಿಡಿಸಲಾಗಿದೆ.