ETV Bharat / state

ಆಸ್ಪತ್ರೆ ಸೇರುವ ಮುನ್ನ ಆ್ಯಂಬುಲೆನ್ಸ್​​​​​ನಲ್ಲಿ ಹೆರಿಗೆ: ರಾಜ್ಯದಲ್ಲೇ ರಾಯಚೂರು ನಂ1 - childbirth in an ambulance

ಆ್ಯಂಬುಲೆನ್ಸ್​​​​​ನಲ್ಲಿ ಆರೋಗ್ಯ ಕವಚ ಸಿಬ್ಬಂದಿ ಸುಲಭ ಹೆರಿಗೆ ಮಾಡುವ ಮೂಲಕ ರಾಜ್ಯದಲ್ಲಿ ನೂರಾರು ಹೆರಿಗೆಗಳನ್ನ ಮಾಡಿಸಿ ತಾಯಿ, ಮಗುವನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದರಲ್ಲಿ ರಾಯಚೂರು ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ.

ambulance
ಆಂಬ್ಯುಲೆನ್ಸ್
author img

By

Published : Oct 26, 2020, 8:17 PM IST

ರಾಯಚೂರು: 2020 ಜನವರಿಯಿಂದ ಸೆಪ್ಟೆಂಬರ್​​​​​​​​ ತಿಂಗಳವರೆಗೆ ಆ್ಯಂಬುಲೆನ್ಸ್​​​​​​ನಲ್ಲಿ ಆರೋಗ್ಯ ಕವಚ ಸಿಬ್ಬಂದಿ ಇದುವರೆಗೂ ಒಟ್ಟು 635 ಹೆರಿಗೆಗಳನ್ನು ಮಾಡಿಸಿದ್ದು, ಅದರಲ್ಲಿ ಇಡೀ ರಾಜ್ಯದಲ್ಲಿಯೇ ರಾಯಚೂರು ಜಿಲ್ಲೆಯಲ್ಲಿ 81 ಹೆರಿಗೆಗಳು ಆಗಿದ್ದು, ಆ್ಯಂಬುಲೆನ್ಸ್​​​​ನಲ್ಲಿ ಹೆರಿಗೆ ಆಗುವುದರಲ್ಲಿ ಪ್ರಥಮ ಸ್ಥಾನದಲ್ಲಿದೆ.

ಕಲಬುರಗಿಯಲ್ಲಿ 76 ಹೆರಿಗೆಗಳು ಆಗುವ ಮೂಲಕ 2ನೇ ಸ್ಥಾನದಲ್ಲಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಆಸ್ಪತ್ರೆಗಳು ಹತ್ತಿರ ಸಿಗುವುದರಿಂದ ಆ್ಯಂಬುಲೆನ್ಸ್​​ನಲ್ಲಿ 11 ಹೆರಿಗೆಗಳು ಮಾತ್ರ ನಡೆದಿವೆ. ಬಳ್ಳಾರಿಯಲ್ಲಿ 54, ಬೆಳಗಾವಿಯಲ್ಲಿ 59, ವಿಜಯಪುರದಲ್ಲಿ 64, ಉತ್ತರ ಕನ್ನಡದಲ್ಲಿ 33 ಹೆರಿಗೆಗಳು ಆ್ಯಂಬುಲೆನ್ಸ್​​​ನಲ್ಲೇ ಆಗಿದೆ.

ಆರೋಗ್ಯ ಕವಚ ಜಿಲ್ಲಾ ವ್ಯವಸ್ಥಾಪಕ ಗಣಪತಿ

ಗ್ರಾಮೀಣ ಪ್ರದೇಶದಲ್ಲಿ ದೂರದ ಆಸ್ಪತ್ರೆಗೆ ಗರ್ಭಿಣಿಯರನ್ನ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಗರ್ಭೀಣಿಗೆ ತೀವ್ರ ನೋವು ಕಾಣಸಿಕೊಂಡ ಸಂದರ್ಭದಲ್ಲಿ ಮಗು ಮತ್ತು ತಾಯಿಯ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಕವಚ ಸಿಬ್ಬಂದಿ ಗರ್ಭಿಣಿಯರ ಕುಟುಂಬಸ್ಥರ ಸಹಾಯದಿಂದ ಆ್ಯಂಬುಲೆನ್ಸ್​ನಲ್ಲಿ ಹೆರಿಗೆ ಮಾಡಿಸುತ್ತಾರೆ.

ರಾಜ್ಯದಲ್ಲಿ ಆರೋಗ್ಯ ಕವಚದಡಿ ಸರಿ ಸುಮಾರು 714 ಆ್ಯಂಬುಲೆನ್ಸ್​​​​​​​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸುಮಾರು 3,500 ಶುಶ್ರೂಷಕರು ಷಕರು ಮತ್ತು ಡ್ರೈವರ್​ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ 23 ಆ್ಯಂಬುಲೆನ್ಸ್​​​ಗಳಿದ್ದು, 90 ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ.

ಗ್ರಾಮಾಂತರ ಪ್ರದೇಶದಲ್ಲಿ ಆರೋಗ್ಯ ಕವಚ ಯೋಜನೆಯ ಆ್ಯಂಬುಲೆನ್ಸ್​​​​​ಗಳು ಸೂಕ್ತ ಸಮಯಕ್ಕೆ ಲಭ್ಯವಾಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.