ರಾಯಚೂರು: ಕೊರೊನಾ ಸೋಂಕು ತಡೆಗೆ ರಾಜ್ಯ ಸರ್ಕಾರ ರಾಜ್ಯವನ್ನು ಸಂಪೂರ್ಣ ಲಾಕ್ಡೌನ್ ಮಾಡಿದೆ.ಈ ಮಧ್ಯೆ ಎನ್ಆರ್ಸಿ, ಎನ್ಆರ್ಪಿ ತಿದ್ದುಪಡಿ ವಿರೋಧಿಸಿ ಧರಣಿ ನಡೆಸುತ್ತಿದ್ದ 60 ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜನವರಿ 26ರಿಂದ ಅನಿರ್ಧಿಷ್ಟಾವಧಿ ಧರಿಣಿ ನಡೆಸುತ್ತಿದ್ದ ಸಂವಿಧಾನ ಹಕ್ಕುಗಳ ನಾಗರಿಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಬಂಧಿಸಿಲಾಗಿದೆ. ಲಾಕ್ಡೌನ್ ಆದೇಶ ಉಲ್ಲಂಘನೆ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ಆರೋಪದಡಿ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಗರದ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಕೆಲವು ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಉಸ್ಮಾನಿಯಾ ಮಾರುಕಟ್ಟೆಯಲ್ಲಿ ಬೆಳಿಗ್ಗೆಯಿಂದ ನಡೆಯುತ್ತಿದ್ದ ವ್ಯಾಪಾರಕ್ಕೆ ಬ್ರೇಕ್ ಹಾಕಲಾಗಿದೆ. ನಿಯಮ ಮೀರಿ ರಸ್ತೆಗೆ ಇಳಿದವರನ್ನು ಪೊಲೀಸರು ತರಾಟೆ ತೆಗೆದುಕೊಳ್ಳುತ್ತಿದ್ದಾರೆ. ಕೆಲವು ಕಡೆ ಲಾಠಿ ಏಟು ನೀಡಿದ್ದಾರೆ.
ಔಷಧಿ ಅಂಗಡಿಗಳಲ್ಲಿ ಗುಂಪಾಗಿ ನಿಲ್ಲದೆ ಸರತಿಯಲ್ಲಿ ನಿಂತು, ಔಷಧಿ ಖರೀದಿಸುವಂತೆ ಸೂಚಿಸಲಾಗಿದೆ.