ETV Bharat / state

ಈಟಿವಿ ಭಾರತ ಫಲಶೃತಿ: ಸಿಂಧನೂರು - ಹಂಚಿನಾಳ ಗ್ರಾಮಕ್ಕೆ ಬಸ್​ ವ್ಯವಸ್ಥೆ - Raichur Latest News

ಇಂದಿನಿಂದ ಸಿಂಧನೂರು - ಹಂಚಿನಾಳ ಗ್ರಾಮಕ್ಕೆ ಬಸ್​ ವ್ಯವಸ್ಥೆ ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳು, ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.

Bus  facility  for Sindhanoor-hanchinala village
ಈಟಿವಿ ಭಾರತ ಫಲಶೃತಿ: ಸಿಂಧನೂರು-ಹಂಚಿನಾಳ ಗ್ರಾಮಕ್ಕೆ ಬಸ್​ ವ್ಯವಸ್ಥೆ
author img

By

Published : Jan 20, 2021, 9:11 AM IST

ರಾಯಚೂರು: ಈಟಿವಿ ಭಾರತ ಪ್ರಕಟಿಸಿದ ಸುದ್ದಿಯಿಂದ ಎಚ್ಚೆತ್ತ ಸಾರಿಗೆ ಇಲಾಖೆ ಅಧಿಕಾರಿಗಳು, ಸಿಂಧನೂರು - ಹಂಚಿನಾಳ ಗ್ರಾಮಕ್ಕೆ ಬಸ್​ ವ್ಯವಸ್ಥೆ ಕಲ್ಪಿಸಿದ್ದಾರೆ.

ಈಟಿವಿ ಭಾರತ ಫಲಶೃತಿ: ಸಿಂಧನೂರು-ಹಂಚಿನಾಳ ಗ್ರಾಮಕ್ಕೆ ಬಸ್​ ವ್ಯವಸ್ಥೆ

ಈ ಹಿಂದೆ ಸಿಂಧನೂರಿನಿಂದ ನಂಜಲದಿನ್ನಿ ಗ್ರಾಮಕ್ಕೆ ನಿತ್ಯ ಒಂದು ಸಾರಿಗೆ ಬಸ್ ಮಾತ್ರ ಸಂಚರಿಸುತ್ತಿತ್ತು. ಹಂಪನಾಳ, ಹಂಚಿನಾಳ (ಯು), ಕೊಂಬಾಳ, ಮುದ್ದಾಪುರ ಸೇರಿದಂತೆ ಸುಮಾರು 13 ಹಳ್ಳಿಗಳ ಮಾರ್ಗವಾಗಿ ಬರುವ ಈ ಬಸ್​ನಲ್ಲಿಯೇ ನೂರಾರು ವಿದ್ಯಾರ್ಥಿಗಳು ಕಾಲೇಜಿಗೆ ತೆರಳುತ್ತಿದ್ದರು. ಒಂದೊಂದು ದಿನ ಈ ಬಸ್​ನಲ್ಲೂ ಜಾಗವಿಲ್ಲದೇ, ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು.

ಓದಿ: ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಈ ಬಗ್ಗೆ ಈಟಿವಿ ಭಾರತದಲ್ಲಿ ಮಂಗಳವಾರ ವರದಿ ಬಿತ್ತರಿಸಲಾಗಿತ್ತು. ಇದನ್ನು ಗಮನಿಸಿದ ರಾಯಚೂರು ಜಿಲ್ಲಾಧಿಕಾರಿ, ಸಂಬಂಧಿಸಿದ ಸಾರಿಗೆ ಇಲಾಖೆ ಮೇಲಧಿಕಾರಿಳಿಗೆ ಬಸ್ ವ್ಯವಸ್ಥೆ ಒದಗಿಸುವಂತೆ ಸೂಚಿಸಿದ್ದಾರೆ. ಅದರಂತೆ ಇಂದಿನಿಂದ ಸಿಂಧನೂರು-ಹಂಚಿನಾಳ ಗ್ರಾಮಕ್ಕೆ ಬಸ್​ ವ್ಯವಸ್ಥೆ ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳು, ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.