ರಾಯಚೂರು: ಬಾವಿಯಲ್ಲಿ ಈಜಲು ಹೋಗಿ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ರಾಯಚೂರು ತಾಲೂಕಿನ ಸರ್ಜಾಪುರ ಗ್ರಾಮದ ಹೊರವಲಯದಲ್ಲಿ ನಿನ್ನೆ(ಮಂಗಳವಾರ) ನಡೆದಿದೆ. 6ನೇ ತರಗತಿಯಲ್ಲಿ ಓದುತ್ತಿದ್ದ ವರ್ಧನ (10) ಮೃತ ಬಾಲಕ.
ನಿತ್ಯ ದಿನ ಬಾಲಕರೆಲ್ಲ ಸೇರಿ ಬಾವಿಗೆ ಈಜಲು ತೆರಳುತ್ತಿದ್ದರು. ನಿನ್ನೆ ಸಹ ಈಜಲು ತೆರಳಿದ್ದರು. ವರ್ಧನ ಎಂದಿನಂತೆ ಈಜಾಡುತ್ತಿದ್ದಾಗ ಬಾವಿಯಲ್ಲಿ ಮುಳುಗಿ ಮೃತಪಟ್ಟದ್ದಾನೆ ಎನ್ನಲಾಗ್ತಿದೆ. ಅಲ್ಲದೇ ಸಾವಿಗೂ ಮುನ್ನ ಬಾಲಕ 10-15 ನಿಮಿಷಗಳ ಕಾಲ ಈಜಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ಸದ್ಯ ಗ್ರಾಮಸ್ಥರು ಮೃತದೇಹವನ್ನು ಹೊರ ತೆಗೆದಿದ್ದಾರೆ. ಬಾಲಕನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಯಾಪಲದಿನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.