ರಾಯಚೂರು: ಕಾಂಗ್ರೆಸ್ ನಾಟಕ ಕಂಪನಿಯೆಂದು ಟೀಕಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಎಐಸಿಸಿ ಕಾರ್ಯದರ್ಶಿ ಎನ್ ಎಸ್ ಬೋಸರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಪರ ಜನ ಜಾಗೃತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ರು.
ಪೌರತ್ವ ಕಾಯ್ದೆ ಬೆಂಬಲಿಸಿ ತಮ್ಮ ನಿಲುವು ಹೇಳುವುದಕ್ಕೆ ಜನರಲ್ಲಿ ಜಾಗೃತಿ ಮೂಡಿಸುವುದಕ್ಕೆ ನಮ್ಮ ತಕರಾರು ಇಲ್ಲ.ಆದರೆ, ಭಾಷಣ ಮಾಡುವ ವೇಳೆ ಕಾಂಗ್ರೆಸ್ ಪಕ್ಷವನ್ನು ಡ್ರಾಮಾ ಕಂಪನಿ ಎಂದು ಟೀಕಿಸುವುದು ಸರಿಯಲ್ಲ. ಇದೀಗ ಕೆಲ ರಾಜ್ಯಗಳಲ್ಲಿ ಜನರು ಬಿಜೆಪಿಯನ್ನು ವಿರೋಧಿಸಿರುವುದರಿಂದ ಬಿಜೆಪಿಗೆ ಕಾಂಗ್ರೆಸ್ನ ಬಗ್ಗೆ ನಡುಕು ಶುರುವಾಗಿದೆ ಎಂದು ಪ್ರಹ್ಲಾದ್ ಜೋಶಿಗೆ ಟಾಂಗ್ ಕೊಟ್ಟರು.
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವುದಕ್ಕೆ ನಮ್ಮ ವಿರೋಧವಿದೆ. ಕಾಯ್ದೆಗೆ ತಿದ್ದುಪಡಿ ತರುವಾಗ ತಜ್ಞರ ಅಭಿಪ್ರಾಯ ಸಂಗ್ರಹ ಮಾಡಿಲ್ಲ ಅಂತಾ ಮಾಜಿ ಎಂಎಲ್‌ಸಿಯೂ ಆಗಿರುವ ಬೋಸರಾಜ್ ಕಿಡಿಕಾರಿದರು.