ರಾಯಚೂರು: ಹಲವು ತಿಂಗಳಿನಿಂದ ಕೃಷಿಕರ ಆತಂಕಕ್ಕೆ ಕಾರಣವಾಗಿದ್ದ ಕರಡಿಯೊಂದು ಅರಣ್ಯ ಇಲಾಖೆ ಇಟ್ಟಿದ ಬೋನಿಗೆ ಬಿದ್ದಿದೆ.
ಮುದಗಲ್ಲ ಹೋಬಳಿಯ ಪಿಕಳಿಹಾಳ ಗುಡ್ಡದಲ್ಲಿ ಬೋನಿಗೆ ಬಿದ್ದ ಕರಡಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹೊಸಪೇಟೆ ಬಳಿಯ ಕರಡಿ ಧಾಮಕ್ಕೆ ಸಾಗಿಸಿದರು.
ಕೆಲ ದಿನಗಳಿಂದ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಮುದಗಲ್ಲ ಹೋಬಳಿ ವ್ಯಾಪ್ತಿಯ ಗುಡ್ಡಗಾಡು ಪ್ರದೇಶದಲ್ಲಿ ಕರಡಿಗಳು ಜಾಣಿಸಿಕೊಂಡ ಬಗ್ಗೆ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು.
ರಾಯಚೂರು: ಕುಖ್ಯಾತ ಮನೆಗಳ್ಳನ ಬಂಧಿಸಿದ ಸಿಂಧನೂರು ಗ್ರಾಮೀಣ ಠಾಣೆ ಪೊಲೀಸರು
ಕರಡಿಯ ಹೆಜ್ಜೆ ಗುರುತು ಆಧಾರದಲ್ಲಿ ಅತಿ ಹೆಚ್ಚು ತಿರುಗಾಟ ನಡೆಸಿದ ಪಿಕಳಿಹಾಳ ಗುಡ್ಡದ ಆಯಕಟ್ಟು ಸ್ಥಳದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬೋನ ಇರಿಸಿತ್ತು. ನಿರೀಕ್ಷೆಯಂತೆ ಶುಕ್ರವಾರ ಬೆಳಗಿನ ಜಾವ ಕರಡಿ ಬೋನ ಒಳಗಡೆ ಸಿಕ್ಕು ಹಾಕಿಕೊಂಡು ಕಿರುಚಾಟ ನಡೆಸಿದ್ದು ಕಂಡು ಬಂತು. ತಕ್ಷಣ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಪಶು ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿ ಕರಡಿಯ ಆರೋಗ್ಯ ತಪಾಸಣೆ ನಡೆಸಿ ಹೊಸಪೇಟೆ ಬಳಿಯ ಧರೋಜಿ ಕರಡಿ ಧಾಮಕ್ಕೆ ಸ್ಥಳಾಂತರಿಸಿ ಸುರಕ್ಷಿತವಾಗಿ ಬಿಟ್ಟು ಬರುವಲ್ಲಿ ಯಶಸ್ವಿಯಾಗಿದ್ದಾರೆ.