ETV Bharat / state

ಕೊರೊನಾ ಕರಿಛಾಯೆ: ಲಿಂಗಸುಗೂರಿನಲ್ಲಿ ಸರಳ ಬಕ್ರೀದ್ ಆಚರಣೆ

ಕೊರೊನಾ ವೈರಸ್ ಹರಡದಂತೆ ಸರ್ಕಾರ, ವಕ್ಫ್ ಬೋರ್ಡ್ ಸಮಿತಿ‌ ನಿರ್ದೇಶನದಂತೆ ಈದ್ಗಾ ಮೈದಾನಗಳಲ್ಲಿ ಆಚರಿಸಬೇಕಿದ್ದ ಸಾಮೂಹಿಕ ಪ್ರಾರ್ಥನೆಯನ್ನು ಕೇವಲ ಮಸೀದಿಗಳಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು.

Bakreed festival
ಬಕ್ರೀದ್ ಹಬ್ಬ
author img

By

Published : Aug 1, 2020, 4:34 PM IST

ಲಿಂಗಸುಗೂರು: ತ್ಯಾಗ ಬಲಿದಾನದ ಪ್ರತೀಕ ಬಕ್ರೀದ್ ಹಬ್ಬವನ್ನು ತಾಲೂಕಿನಲ್ಲಿ ಅತ್ಯಂತ ಸರಳವಾಗಿ ಆಚರಿಸಲಾಯಿತು.

ಕೊರೊನಾ ವೈರಸ್ ಹರಡದಂತೆ ಸರ್ಕಾರ, ವಕ್ಫ್ ಬೋರ್ಡ್ ಸಮಿತಿ‌ ನಿರ್ದೇಶನದಂತೆ ಈದ್ಗಾ ಮೈದಾನಗಳಲ್ಲಿ ಆಚರಿಸಬೇಕಿದ್ದ ಸಾಮೂಹಿಕ ಪ್ರಾರ್ಥನೆಯನ್ನು ಕೇವಲ ಮಸೀದಿಗಳಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಇಡೀ ಮುಸ್ಲಿಂ ಸಮುದಾಯ ಈ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿದ್ದು ಕಂಡು ಬಂತು.

ಮಸೀದಿಗಳಲ್ಲಿ ಕೊರೊನಾ ನಿಯಮವನ್ನು ಪಾಲನೆ ಮಾಡಿ ಬೆಳಗಿನ ಜಾವವೆ ಪ್ರಾರ್ಥನೆ ಸಲ್ಲಿಸಿ ಬಕ್ರೀದ್ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು.

ಮಸೀದಿಗಳಲ್ಲಿ ಗರಿಷ್ಠ 50 ಜನರಿಗೆ ಅವಕಾಶ ಕಲ್ಪಿಸಿ ಒಂದು ಮೀಟರ್ ಅಂತರ ಕಾಯ್ದುಕೊಳ್ಳಲಾಗಿತ್ತು. ಮಾಸ್ಕ್​​ ಮತ್ತು ಸ್ಯಾನಿಟೈಸರ್ ಬಳಸಲಾಯಿತು. ಬೆಳಗಿನ ಜಾವವೇ ಪ್ರಾರ್ಥನೆ ಸಲ್ಲಿಸಿ ವಿಶ್ವಕ್ಕೆ ವ್ಯಾಪಿಸಿದ ಕೊರೊನಾ ನಿರ್ಮೂಲನೆ ಆಗಿ ಮನುಕುಲಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದು ವಿಶೇಷವಾಗಿತ್ತು.

ಈ ಕುರಿತು ಮುದಗಲ್ಲ ಮುಸ್ಲಿಂ ಮುಖಂಡ ನಯೀಮ್ ಮಾತನಾಡಿ, ವಿಶ್ವದಾದ್ಯಂತ ಹರಡಿದ ಕೊರೊನಾ ವೈರಸ್ ನಿರ್ಮೂಲನೆ ಆಗಬೇಕು. ದೇಶದ ಜನತೆ ಶಾಂತಿ, ಸೌಹಾರ್ದತೆಯಿಂದ ಬದುಕಲು ಅಲ್ಹಾ ಎಲ್ಲರಿಗೂ ಆಶೀರ್ವದಿಸಲಿ ಎಂದು ಪ್ರಾರ್ಥಿಸಿದ್ದಾಗಿ ಈ ಟಿವಿ ಭಾರತ್​ ಜೊತೆ ಅನಿಸಿಕೆ ಹಂಚಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.