ರಾಯಚೂರು : ಚುನಾವಣಾ ಕರ್ತವ್ಯಕ್ಕೆ ಹಾಜರಾಗಿದ್ದ ಆಶಾ ಕಾರ್ಯಕರ್ತರಿಗೆ ಗೌರವಧನ ನೀಡಬೇಕೆಂದು ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಲಿಂಗಸುಗೂರಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಎಐಯುಟಿಯುಸಿ) ನೇತೃತ್ವದಲ್ಲಿ ಆಧಿಕಾರಿಗಳ ನಿರ್ಲಕ್ಷ್ಯ ವಿರೋಧಿಸಿ ಘೋಷಣೆ ಹಾಕಿದರು.
ಮತದಾನ ದಿನ ಮತಗಟ್ಟೆಗೆಯಲ್ಲಿ ಒಂದು ದಿನ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗೆ ಗೌರವಧನ ಪಾವತಿ ಮಾಡಲಾಗಿದೆ. ಅದ್ರೆ, ಚುನಾವಣೆ ಅವಧಿಯಲ್ಲಿ ಹಲವಾರು ದಿನ ಹಾಗೂ ಮತದಾನ ದಿನ ಕೆಲಸ ಮಾಡಿದ ನಮ್ಮವರ ಬಗ್ಗೆ ತಾತ್ಸಾರದಿಂದ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಓದಿ-ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ : ಡಾ.ಕೆ. ಸುಧಾಕರ್
ಸಂಘದ ಗೌರವಾಧ್ಯಕ್ಷ ಶರಣಪ್ಪ ಉದ್ಬಾಳ ಮಾತನಾಡಿ, ದುಡಿದ ದಿನದ ಗೌರವಧನ ಕೇಳಿದರೆ ಅಗೌರವದಿಂದ ಅಧಿಕಾರಿಗಳು ಉತ್ತರಿಸುತ್ತಾರೆ. ಆಶಾ ಸೇರಿದಂತೆ ಇತರೆ ಕಾರ್ಮಿಕ ವರ್ಗ ದುಡಿವ ಕೆಲಸಕ್ಕೆ ಗೌರವಧನ ನೀಡಲು ಅವಕಾಶವಿಲ್ಲ ಎಂಬ ಹಾರಿಕೆ ಉತ್ತರ ನೀಡುತ್ತಾರೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.