ರಾಯಚೂರು: ಜಿಲ್ಲೆಯ ಕಲಾವಿದನೊಬ್ಬ ಲಾಕ್ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡು ಜನಪದ ಶೈಲಿಯ ಆದಿವಾಸಿ ಜನರ ಕಲಾಕೃತಿಗಳನ್ನ ಬಿಡಿಸಿ ಇಂಡಿಯನ್ ರೆಕಾರ್ಡ್ ಬುಕ್ನಲ್ಲಿ ಹೆಸರು ದಾಖಲಿಸಿಕೊಂಡಿದ್ದಾರೆ.
A4 ಅಳತೆಯ ಪೇಪರ್ನಲ್ಲಿ 548 ಚಿತ್ರಗಳನ್ನು ಬಿಡಿಸಿ ಈಗ ಇಂಡಿಯನ್ ರೆಕಾರ್ಡ್ ಬುಕ್ನಲ್ಲಿ ತಮ್ಮ ಹೆಸರು ನಮೂದಿಸಿಕೊಂಡಿದ್ದಾರೆ. ಮೂಲತಃ ಸಿಂಧನೂರು ತಾಲೂಕಿನಾದ ಉಮೇಶ್ ಪತ್ತಾರ್, ಚಿತ್ರಕಲೆಯಲ್ಲಿ 5 ವರ್ಷದ ಪದವಿ ಪಡೆದಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಚಿತ್ರಕಲೆಯಲ್ಲಿ ಏನಾದರೂ ವಿಶೇಷ ಸಾಧನೆ ಮಾಡಬೇಕು ಎನ್ನುವ ಛಲದೊಂದಿಗೆ A4 ಅಳತೆ ಹಾಳೆಯಲ್ಲಿ 548 ಚಿತ್ರಗಳನ್ನ ಬಿಡಿಸಿದ್ದೇನೆ. ಎಲ್ಲೂ ಜಾಗ ಬಿಡದಂತೆ ಸುಂದರವಾಗಿ ಆದಿವಾಸಿಗಳ ಕಲಾಕೃತಿಗಳನ್ನು ರಚಿಸಿ, ಜನಪದ ಸಾಹಿತ್ಯವನ್ನು ಬೆಳೆಸಬೇಕು ಎನ್ನುತ್ತಾರೆ.
ರೆಕಾರ್ಡ್ ಬುಕ್ನಲ್ಲಿ ನನ್ನ ಹೆಸರು ಸೇರಿಸಿರುವುದು ಮತ್ತು ಗೋಲ್ಡ್ ಮೆಡಲ್ ನೀಡಿ ಪ್ರೋತ್ಸಾಹಿಸಿರುವುದು ಇನ್ನೂ ಹೆಚ್ಚಿನ ಸಾಧನೆ ಮಾಡುವ ಉತ್ಸಾಹ ಹೆಚ್ಚಿಸಿದೆ ಎಂದರು.