ETV Bharat / state

ಸಾವಿನಲ್ಲೂ ಸಾರ್ಥಕತೆ ಮೆರೆದ ರಂಗಕಲಾವಿದ ಕುಟುಂಬ - ದಾಹದಾನ

ವಿಜಯಲಕ್ಷ್ಮಿಯವರ ಇಚ್ಛೆಯಂತೆ ದೇಹವನ್ನು ಮಣ್ಣಿನಲ್ಲಿ ಹೂಳದೇ‌ ನಗರದ ರಿಮ್ಸ್‌‌ ಆಸ್ಪತ್ರೆಯ ಅಂಗದಾನ ವಿಭಾಗಕ್ಕೆ ದಾನ ಮಾಡಿ ಸಾರ್ಥಕತೆ ಮರೆದಿದ್ದಾರೆ.

rcr
ಕಲಾವಿದೆ ದೇಹದಾನ
author img

By

Published : Dec 20, 2019, 1:38 PM IST

ರಾಯಚೂರು: ಇಲ್ಲಿನ ಕಲಾವಿದ ಕುಟುಂಬವೊಂದು ಸಾವಿನಲ್ಲೂ ಮಾನವೀಯತೆ ಮೆರೆದಿದೆ. ನಗರದ ಯರಮರಸ್ ಕ್ಯಾಂಪ್​ನ ನಿವಾಸಿ ವಿಜಯಲಕ್ಷ್ಮಿ ಎಂಬುವವರು ಬ್ರೈನ್ ಸ್ಟ್ರೋಕ್​ನಿಂದ ಡಿ.18 ರಂದು ಸಾವನ್ನಪ್ಪಿದ್ದರು. ಆದ್ರೆ ವಿಜಯಲಕ್ಷ್ಮಿಯವರ ಇಚ್ಛೆಯಂತೆ ದೇಹವನ್ನು ಮಣ್ಣಿನಲ್ಲಿ ಹೂಳದೇ‌ ನಗರದ ರಿಮ್ಸ್‌‌ ಆಸ್ಪತ್ರೆಯ ಅಂಗದಾನ ವಿಭಾಗಕ್ಕೆ ದಾನ ಮಾಡಿ ಸಾರ್ಥಕತೆ ಮರೆದಿದ್ದಾರೆ.

ಸಾವಿನಲ್ಲೂ ಸಾರ್ಥಕತೆ ಮೆರೆದ ರಂಗಕಲಾವಿದ ಕುಟುಂಬ

ವಿಜಯಲಕ್ಷ್ಮಿ ಅವರು‌ ರಂಗಕಲಾವಿದೆಯಾಗಿದ್ದರು. ಅವರ ಗಂಡ ಅಲ್ತಾಫ್ ರಂಗಮಿತ್ರ ಕಲಾತಂಡದ ಮೂಲಕ ಪ್ರಸಿದ್ಧಿ ಪಡೆದವರು. ಕಲಾವಿದರಾದ ಇವರಿಬ್ಬರೂ ಪ್ರೀತಿಸಿ ಪ್ರೇಮವಿವಾಹವಾಗಿದ್ದರು. ಧರ್ಮಗಳು ಬೇರೆಯಾದರೂ ಅನ್ಯೂನ್ಯವಾಗಿದ್ದರು. 4 ಮಕ್ಕಳ ತುಂಬು ಸಂಸಾರದ ತಾಯಿಯಾಗಿದ್ದ ವಿಜಯಲಕ್ಷ್ಮಿ ಕೊನೆಯುಸಿರೆಳೆದಾಗ ಸ್ವಇಚ್ಛೆ ಹಾಗೂ ಮಕ್ಕಳ ಒಪ್ಪಿಗೆಯಿಂದ ರಾಯಚೂರು‌ ವೈದ್ಯಕೀಯ ವಿಜ್ಞಾನ ಸಂಶೋಧನಾ ಸಂಸ್ಥೆಯ ಅಂಗದಾನ ವಿಭಾಗಕ್ಕೆ ದೇಹದಾನ ಮಾಡಲಾಗಿದೆ.

Intro:ಸಾವಿನಲ್ಲೂ ಮಾನವಿಯತೆ ಮೆರೆದ ಕುಟುಂಬ, ತನ್ನ ತಾಯಿಯ ಇಚ್ಛಯಂತೆ ಸಾವಿನ ನಂತರ ದೇಹವನ್ನು ದಾನ ಮಾಡಿ ಮಾನವಿಯತೆ ಮೆರೆದಿದ್ದಾರೆ. ಹೌದು, ನಗರದ ಯರಮರಸ್ ಕ್ಯಾಂಪ್ ನ ನಿವಾಸಿ ವಿಜಯಲಕ್ಷ್ಮಿ ಎಂಬುವವರು ಬ್ರೇನ್ ಸ್ಟ್ರೋಕ್ ನಿಂದ ಡಿ.18ಕ್ಕೆ ಸಾವನ್ನಪ್ಪಿದ್ದರು, ಆದ್ರೆ ವಿಜಯ ಲಕ್ಷ್ಮಿಯವರ ಇಚ್ಚೇಯಂತೆ ದೇಹವನ್ನು ಮಣ್ಣಿನಲ್ಲಿ ಹೂಳದೆ‌ ನಗರದ ರಿಮ್ಸ್‌‌ ಆಸ್ಪತ್ರೆಯ ಅಂಗದಾನ ವಿಭಾಗಕ್ಕೆ ದಾನ ಮಾಡಿ ಸಾರ್ಥಕತೆ ಮರೆದಿದ್ದಾರೆ. ಮಾನವನ ದೇಹ ಶಾಶ್ವತವಲ್ಲ, ದೇಹದಲ್ಲಿ‌ ಉಸಿರಿರುವರೆಗೆ ಆ ದೇಹಕ್ಕೆ ಮಹತ್ವ, ಆದರೆ ಕೆಲವರು ತಮ್ಮ ಉಸಿರು ನಿಂತ ಮೇಲು ತಮ್ಮ ಕಾರ್ಯಗಳಿಂದ ‌ಜನಮಾನಸದಲ್ಲಿ ಉಳಿಯುತ್ತಾರೆ. ಇಂತಹ ಸಾಲಿನಲ್ಲಿ ಈಗ ಮೃತ ವಿಜಯ‌ಲಕ್ಷ್ಮಿ‌ಅವರು ಸೇರಿದ್ದಾರೆ, ವಿಜಯ ಲಕ್ಷ್ಮೀ ಅವರು‌ ರಂಗವಿದಾ ಕಲಾವಿದರು ಕೂಡ ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿದ್ದಾರೆ ತನ್ನ ಗಂಡ ಅಲ್ತಾಫ್ ರಂಗಮಿತ್ರ ಅವರು ರಂಗ ಕಲಾವಿದರು‌ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಪ್ರಸಿದ್ದಿ ಪಡೆದವರು. ಸಮಾಜಕ್ಕೆ ಏನಾದ್ರು ಕೊಡುಗೆ ನೀಡಬೇಕೆಂಬ ಹಂಬಲ ಬದುಕಿದ್ದಾಗ ಇದೇ ಆಲೋಚನೆಯಲ್ಲಿ ವಿಜಯ ಲಕ್ಷ್ಮಿ ಅವರಿಗೆ ತಮ್ಮ ಕೊನೆಯ ದಿನಗಳಲ್ಲಿ ತಮ್ಮ ಪತಿ ಹಾಗೂ ಮಕ್ಕಳಿಗೆ ಹೇಳುತಿದ್ದರಂತೆ ಮಾನು ಸತ್ತಾಗ ನನ್ನ ದೇಹವನ್ನು ದಾನ ಮಾಡಿ‌ ಸಾರ್ಥಕತೆ ಮೆರೆಯಬೇಕು ಅಂತ.

Body:ತನ್ನ ಪತಿ ಅಲ್ತಾಫ್ ರಂಗಮಿತ್ರ ಹಾಗೂ ವಿಜಯ ಲಕ್ಷ್ಮಿ ಅವರ ಪ್ರೇಮ ವಿವಾಹ ಇಬ್ಬರ ಧರ್ಮ ಬೇರೆದ್ದಾಗಿದ್ದರು ಅನೊನ್ಯವಾಗಿದ್ರು, ಅಲ್ತಾಫ್ ಅವರು ರಂಗ ಕಲೆಯ ಜೊತೆಗೆ ಖಾಸಗಿ ಶಾಲೆ ನಡೆಸಿ ಮಕ್ಕಳನ್ನು ಭೋದಿಸುವರು, ಮಕ್ಕಳಿಗೆ ಪಾಠ ಮಾಡಿ ಮಕ್ಕಳ ಭವಿಷ್ಯ ರೂಪಿಸುತಿದ್ದಾರೆ ಆದ್ರೆ ತಾನು ಅವಿದ್ಯಾವಂತೆ ಏನು ಮಾಡಬೇಕು ಎಂದು ಚಿಂತಿಸುತಿದ್ದರಂತೆ. ದೇಹ ದಾನದ ಬಗ್ಗೆ ಕೇಳುತಿದ್ದ ವಿಜಯ ಲಕ್ಷ್ಮೀ ಅವರು‌ ತಾನು ಸತ್ತ ನಂತರ ತನ್ನ ದೇಹವನ್ನು‌ ದಾನ ಮಾಡಿ ವಿಜ್ಞಾನ ವಿಭಾಗದ ಕಲಿಕೆಗೆ ಸಹಾಯವಾಗಲಿ ಎಂದು ಹೇಳುತಿದ್ದರಂತೆ. ಅದ್ರೆ ಡಿ.18 ಕ್ಕೆ ಅಚಾನಕ್ ಆಗಿ ಬ್ರೈನ್ ಸ್ಟ್ರೋಕ್ ಆಗಿದ್ದರಂತೆ ಬೆಂಗಳೂರಿಗೆ ಆಸ್ಪತ್ರೆಗೆ ಕರೆದೊಯ್ಯುವಾಗ‌ಮಾರ್ಗ ಮಧ್ಯೆ ಸಾವನ್ನಪ್ಪಿದರು. ಒಂದೆಡೆ ತಾಯಿ ಯನ್ನು ಕಳೆದುಕೊಂಡ ಮಕ್ಕಳು,‌ಮಡದಿಯನ್ನು ಕಳೆದ ಕೊಂಡ ಗಂಡ ದುಃಖ ತಪ್ತರಾದರೂ,‌ ಆದ್ರೆ ಸಾವನ್ನಪಿದ ವಿಜಯ ಲಕ್ಷ್ಮಿಗೆ ಅಂತ್ಯ ಸಂಸ್ಕಾರ ಮಾಡದೇ ತಾಯಿಯ ಇಚ್ಛೆಯಂತೆ ರಾಯಚೂರು‌ ವೈದ್ಯಕೀಯ ವಿಜ್ಞಾನ ಸಂಶೋಧನಾ ಸಂಸ್ಥೆ( ರಿಮ್ಸ್)ನ ಅಂಗದಾನ ವಿಭಾಗಕ್ಕೆ ದಾನ ಮಾಡಿ ಸಾರ್ಥಕತೆ,ಮಾನವಿಯತೆ ಮೆರೆದಿದ್ದಾರೆ‌,ಇವರ ಕಾರ್ಯಕ್ಕೆ ರಿಮ್ಸ್‌ ಆಸ್ಪತ್ರೆಯ ಅಂಗದಾನ ಸಂಸ್ಥೆ ಹಾಗೂ ಸ್ಥಳೀಯರು ಮೆಚ್ಚುಗೆ ‌ವ್ಯಕ್ತಪಡಿಸಿದ್ದಾರೆ. ಅವರ ದೇಹದಾನದಿಂದ ಮೆಡಿಕಲ್‌ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಸಂಶೋಧನೆ ಮಾಡಲು ಅನುಕೂಲವಾಗಿದೆ,ಇಂದಿನ ಆಧುನಿಕ‌,ವೈಜ್ಞಾನಿಕ ಯುಗ ದಲ್ಲಿಯೂ ಹಲವರು‌ ಸಂಪ್ರದಾಯ,ಮೂಢನಂಬಿಕೆಗೆ ಒಳಗಾಗಿ ದೇಹ‌ದಾನ‌ ಮಾಡುವುದಿಲ್ಲ‌‌ ಆದ್ರೆ ಈ‌ಕುಟುಂಬ ದೇಹದಾನದ ಮಹತ್ವ‌ ಅರಿತು ದೇಹದಾನ ಮಾಡಿದ್ದು‌ ಮತ್ತೊಬ್ಬರಿಗೆ ಸ್ಪೂರ್ತಿ,ಮಾದರಿ ಯಾಗಿದ್ದಾರೆ. ಬೈಟ್; ಅನುಕ್ರಮವಾಗಿ. 1) ಚಂದ್ರು,(ಟೀಶರ್ಠ್ ಮೇಲೆ ಕೆಂಪು ಡಿಸೈನ್ ಇದೆ) ಮೃತರ ಮಗ, 2)ನವೀನ್ ಕುಮಾರ್ ಡಾ.ಅಂಗ‌ರಚನ‌ ಶಾಸ್ತ್ರದ ವಿಭಾಗದ ಪ್ರಾಧ್ಯಾಪಕ‌‌ ಹಾಗೂ ಮುಖ್ಯಸ್ಥ ( ಕುಳಿತು ಕೊಂಡು‌ ಮಾತನಾಡಿದವರು) 3) ಮಹಾಂತೇಶ_ ಯರಮರಸ್ ಕ್ಯಾಂಪ್ ನಿವಾಸಿ,

Conclusion:ವಿಜಯ ಲಕ್ಷ್ಮಿ ಅವರ ರಂಗ ಕಲಾ ಫೋಟೋ ವಾಟ್ಸಪ್ ನಿಂದ ಹಾಕುವೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.